ಪರಿಸರ ದಿನಾಚರಣೆ ಅಂಗವಾಗಿ ಪರಿಸರ ಜಾಗೃತಿ ಜಾಥಾ..

ಪರಿಸರ ದಿನಾಚರಣೆ ಅಂಗವಾಗಿ ಪರಿಸರ ಜಾಗೃತಿ ಜಾಥಾ..

ಬೆಳಗಾವಿ : ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಅಂಗವಾಗಿ ಬುಧವಾರ ದಿನಾಂಕ 05/06/2024ರಂದು, ನಗರದ ಎನ್ ಎಸ್ ಪೈ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ ನೇವರಿಸಿ, ಕೃಷಿ ಚುವಟಿಕೆಗಳ ಜೊತೆಗೆ, ಸಸಿ ನೆಡುವ ಮೂಲಕ ಚಾಲನೆ ನೀಡಿದರು.

ಪರಿಸರ ಜಾಗೃತಿಗಾಗಿ ವಿಶೇಷವಾದ ಜಾಥಾ ಯೋಜಿಸಿದ್ದು, ಈ ಪರಿಸರ ಜಾಥಾಕ್ಕೆ ಶಾಲಾ ಉಸ್ತುವಾರಿಗಳಾದ ದೀಪಕ್ ಕುಲಕರ್ಣಿ ಅವರು ಹಸಿರು ನಿಶಾನೆ ತೋರಿಸಿ, ಚಾಲನೆ ನೀಡಿ, ಶುಭಕೋರಿದರು.

ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ವಾದ್ಯಗಳನ್ನು ಬಾರಿಸುತ್ತಾ,, ಪರಿಸರ ಜಾಗೃತಿ ಫಲಕಗಳನ್ನು ಹಿಡಿದುಕೊಂಡು, ಘೋಷವಾಕ್ಯ ಕೂಗುತ್ತಾ ನಗರದ ತಿಲಕ ಚೌಕ್ ವರೆಗೆ ಸಾಗಿ, ಪ್ರಭಾತ ಫೇರಿ ಮಾಡುತ್ತ ಮತ್ತೆ ಶಾಲೆಗೆ ಅತ್ಯಂತ ಉತ್ಸಾಹದಿಂದ ಆಗಮಿಸಿದರು.

ಸ್ಕೌಟ್, ಗೈಡ್ಸ್ ವಸ್ತ್ರ, ಹಸಿರು ಬಣ್ಣದ ಡ್ರೆಸ್, ಶಾಲಾ ಸಮವಸ್ತ್ರದಲ್ಲಿ ಮಿಂಚುತ್ತಾ ಮಕ್ಕಳು ತಮ್ಮ ಹೆಮ್ಮೆಯ ನಡಿಗೆಯೊಂದಿಗೆ ಅರ್ಥಪೂರ್ಣವಾಗಿ ಪರಿಸರ ದಿನಾಚರಣೆ ಆಚರಿಸಿದರು.

ಈ ವಿಶೇಷ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ರಾಧಿಕಾ ನಾಯಿಕ, ಸಹ ಶಿಕ್ಷಕರು, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು..

ವರದಿ ಪ್ರಕಾಶ್ ಬಸಪ್ಪ ಕುರಗುಂದ..