ಪವಿತ್ರ ಶ್ರಾವಣ ಮಾಸದ ನಿಮಿತ್ತ ಜಾತ್ರೆ ಮತ್ತು ಮಹಾಪ್ರಸಾದ ಆಯೋಜನೆ..
ಭಕ್ತಗಣದ ಮುಂದೆ ಪವಾಡ ತೋರಿದ ಪರಮ ಪೂಜ್ಯರು..
ಬೆಳಗಾವಿ : ಪರಮ ಪೂಜ್ಯನೀಯ ಶ್ರೀ ಗಂಗಾಮಾತಾಜಿ ಅವರು ಈವತ್ತಿನ ದಿವಸ ಶ್ರಾವಣದ ಕೊನೆಯ ಸೋಮವಾರದ ಒಂದು ತಿಂಗಳ ಉಪವಾಸದ ಪೂಜಾವಿಧಿಯ ಅನುಷ್ಠಾನಗಳನ್ನು ಪೂರ್ಣಗೋಳಿಸಿದ್ದಾರೆ.
ಗುರುವಾರ ಆಜಾಮ ನಗರದ ರೇಣುಕಾ ಆಶ್ರಮದಲ್ಲಿ ಶ್ರಾವಣ ಮಾಸದ ಕೊನೆಯ ಸೋಮವಾರದ ವಿಶೇಷವಾಗಿ ಜಾತ್ರೆ ಹಾಗೂ ಮಜಾ
ಮಹಾಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ವೇಳೆ ಪೂಜ್ಯರು ಬಿಸಿಯಾದ ಹುಗ್ಗಿಯ ಪ್ರಸಾದವನ್ನು ಪೂಜೆಗೆಂದು ಸಿದ್ದಪಡಿಸಿ ಸುಡುವ ಹುಗ್ಗಿ ಪ್ರಸಾದವನ್ನು ಬರಿ ಕೈಯಿಂದ ಪಾತ್ರೆಗೆ ಹಾಕಿರುವದರ ಮೂಲಕ ನೆರೆದ ಭಕ್ತಾದಿಗಳು ಆಶ್ಚರ್ಯಚಕಿತರಾಗುವಂತೆ ಮಾಡಿದರು.

ಅಷ್ಟೊಂದು ಬಿಸಿ ಹುಗ್ಗಿಯಲ್ಲಿ ಕೈ ಹಾಕಿದ್ದು ಅವಿಸ್ಮರಣೀಯ ಹಾಗೂ ಭಕ್ತಾದಿಗಳಿಗೆ ಕುತೂಹಲ ಕೆರಳಿಸುವಂತಹದು ಆಗಿತ್ತು, ಈ ಸಂದರ್ಭದಲ್ಲಿ ಶ್ರೀ ಕಾರಂಜಿ ಮಠದ ಪೂಜ್ಯರು ಹಾಗೂ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು.