ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆ ದಿಗ್ವಿಜಯ ಸಾಧಿಸಲೆಂದು ವಿಶೇಷ ಪೂಜೆ..
ಬಿಜೆಪಿ ಮಹಿಳಾ ಮೋರ್ಚಾ ಘಟಕದಿಂದ ಸಂಕಷ್ಟಹರ ಗಣಪತಿಗೆ ಪ್ರಾರ್ಥನೆ..
ಬೆಳಗಾವಿ : ಮಹಾನಗರ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಭಾರತದ ಮೋದಿ ಸರ್ಕಾರ ಪಾಕಿಸ್ತಾನದ ಮೇಲೆ ಸಿಂಧೂರ್ ದಾಳಿಯನ್ನು ನಡೆಸಿದ ಭಾರತದ ಯೋಧರಿಗೆ ಶುಭವಾಗಲೆಂದು ಮತ್ತು ಜಯವಾಗಲಿ ಎಂದು ಬಿಜೆಪಿ ಮಹಿಳಾ ಮೋರ್ಚಾದಿಂದ ನಗರದ ಚನ್ನಮ್ಮ ವೃತ್ತದ ಗಣೇಶನ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಈ ವೇಳೆ ಬಿಜೆಪಿ ಮಹಿಳಾ ಘಟಕದಿಂದ ದೇವರು ಭಾರತದ ಸೈನಿಕರಿಗೆ ಮತ್ತಷ್ಟು ಶಕ್ತಿ ನೀಡಲೆಂದು ಪ್ರಾರ್ಥಿಸಲಾಯಿತು, ಗೀತಾ ಸುತಾರ್ ಮಹಾನಗರ ಅಧ್ಯಕ್ಷರು, ಮಾಜಿ ಸಂಸದರಾದ ಮಂಗಲ ಅಂಗಡಿ, ಉಪಮಹಾಪೌರ ವಾಣಿ ಜೋಶಿ, ಕುಮಾರಿ ಉಜ್ವಲಾ ಬಡವನಾಚೆ, ಲೀನಾ ಟೋಪಣ್ಣವರ, ಮಹಿಳಾ ಮೋರ್ಚಾ ಅಧ್ಯಕ್ಷರಾದ ಕುಮಾರಿ ಶಿಲ್ಪಾ ಕೆಕರೆ, ಹಾಗೂ ಮಹಿಳಾ ಮೋರ್ಚಾದ ಪದಾಧಿಕಾರಿಗಳು ಮತ್ತು ಮಹಾನಗರ ಮತ್ತು ಮಂಡಲ ಪದಾಧಿಕಾರಿಗಳು ಭಾಗವಹಿಸಿದ್ದರು.