ಪಾಲಿಕೆಗೆ ಪುನರಾಗಮನದ ಸ್ವಾಗತ ಸವಿದ ಅಧಿಕಾರಿಗಳು…

ಪಾಲಿಕೆಗೆ ಪುನರಾಗಮನದ ಸ್ವಾಗತ ಸವಿದ ಅಧಿಕಾರಿಗಳು…

ಉತ್ತಮ ಸೇವೆಗೈದ ಅಧಿಕಾರಿಗಳ ಆತ್ಮೀಯ ಬೀಳ್ಕೊಡುಗೆ…

ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆ ತನ್ನ ಕಾರ್ಯವ್ಯಾಪ್ತಿ ಹಾಗೂ ಸಾಮರ್ಥ್ಯದಲ್ಲಿ ಎಷ್ಟು ಅಗಾಧವಾಗಿದೆಯೋ ಅಷ್ಟೇ ಸಿಬ್ಬಂದಿಗಳ ಒಡನಾಟದಲ್ಲಿ ಹೃದಯ ವೈಶಾಲ್ಯತೆಯಲ್ಲಿ ಭಾವನಾತ್ಮಕ ಬಂಧದಲ್ಲಿದೆ ಎಂಬುದಕ್ಕೆಇವತ್ತಿನ ಕೆಲ ಸನ್ನಿವೇಶಗಳು ಸಾಕ್ಷಿಯಾಗಿವೆ..

2024ರ ಲೋಕಸಭಾ ಚುನಾವಣೆಯ ಕಾರ್ಯನಿಮಿತ್ತ ಪಾಲಿಕೆಯ ಕೆಲ ಅಧಿಕಾರಿಗಳು ವರ್ಗಾವಣೆ ಆಗಿದ್ದು, ಆ ಅಧಿಕಾರಿಗಳು ಚುನಾವಣೆಯ ನಂತರ ಮತ್ತೆ ಪಾಲಿಕೆಯ ಸೇವೆಗೆ ಮರಳಿ ಹಾಜರಾಗಿದ್ದಕ್ಕೆ ಪಾಲಿಕೆಯ ಕಂದಾಯ, ಆರೋಗ್ಯ, ಲೋಕೋಪಯೋಗಿ ವಿಭಾಗದ ಸಿಬ್ಬಂದಿಗಳು ಹಾಗೂ ಸ್ನೇಹಿತ ಹಿತೈಷಿಗಳು ಆಗಮಿಸಿ ಶುಭಾಶಯ ತಿಳಿಸಿ ಸ್ವಾಗತ ಕೋರಿದ್ದಾರೆ..

ಚುನಾವಣಾ ಕಾರ್ಯ ನಿಮಿತ್ತ ರಾಯಚೂರಿಗೆ ವರ್ಗಾವಣೆಗೊಂಡ ಪಾಲಿಕೆ ಆಯುಕ್ತರಾದ ಅಶೋಕ್ ದುಡಗುಂಟಿ ಅವರು ತಮ್ಮ ಚುನಾವಣಾ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿ, ಇಂದು ಮತ್ತೆ ಪಾಲಿಕೆಯ ಕರ್ತವ್ಯಕ್ಕೆ ಹಾಜರಾಗಿದ್ದು, ಸಿಬ್ಬಂದಿ ಹಾಗೂ ನಗರ ಸೇವಕರು ಆತ್ಮೀಯ ಸ್ವಾಗತ ಮಾಡಿಕೊಂಡಿದ್ದಾರೆ..

ಅದೇ ರೀತಿ ಪಾಲಿಕೆಯ ಕಂದಾಯ ಆಯುಕ್ತರಾದ ರೇಷ್ಮಾ ತಾಳಿಕೋಟೆ ಅವರು ಹುಬ್ಬಳ್ಳಿಗೆ ಚುನಾವಣಾ ಕಾರ್ಯನಿಮಿತ್ತ ವರ್ಗಾವಣೆ ಆಗಿದ್ದು, ಚುನಾವಣಾಧಿಕಾರಿಯಾಗಿ ಯಶಸ್ವಿಯಾಗಿ ತಮ್ಮ ಕಾರ್ಯ ಪೂರೈಸಿ, ಇಂದು ಮರಳಿ ಪಾಲಿಕೆಗೆ ಆಗಮಿಸಿ ತಮ್ಮ ಸೇವೆಗೆ ಹಾಜರಾಗಿದ್ದು, ಪಾಲಿಕೆಯ ಕಂದಾಯ ಹಾಗೂ ಇತರ ಸಿಬ್ಬಂದಿಗಳು ಹೂಗುಚ್ಚ ನೀಡಿ ಸ್ವಾಗತಿಸಿದ್ದಾರೆ..

ಇನ್ನು ಲೋಕೋಪಯೋಗಿ ವಿಭಾಗದ ಅಧಿಕಾರಿಯಾದ ಲಕ್ಷ್ಮಿ ನಿಪ್ಪಾಣಿಕರ ಅವರು ಸಾಮಾನ್ಯ ವರ್ಗಾವಣೆಯಲ್ಲಿ ಬೆಂಗಳೂರಿಗೆ ನಿಯೋಜನೆ ಆಗಿದ್ದು, ಮತ್ತೆ ಬೆಳಗಾವಿ ಪಾಲಿಕೆಗೆ ಮರು ವರ್ಗಾವಣೆ ಮೂಲಕ ಆಗಮಿಸಿ ಸೇವೆಗೆ ಹಾಜರಾಗಿದ್ದು, ಪಾಲಿಕೆಯ ಸಿಬ್ಬಂದಿಗಳು ಆತ್ಮೀಯವಾಗಿ ಸ್ವಾಗತ ಮಾಡಿಕೊಂಡಿದ್ದಾರೆ..

ಇನ್ನು ವಿಶೇಷ ಎಂದರೆ, ಚುನಾವಣೆ ಕಾರ್ಯದ ನಿಮಿತ್ತ ಬೆಳಗಾವಿ ಪಾಲಿಕೆಗೆ ಆಗಮಿಸಿದ ಆಯುಕ್ತರಾದ ಲೋಕೇಶ್ ಹಾಗೂ ಕಂದಾಯ ಆಯುಕ್ತರಾದ ಗುರುನಾಥ ದಡ್ಡಿ ಅವರನ್ನು ಅವರ ಅತ್ತ್ಯುತ್ತಮ, ಗುಣಮಟ್ಟದ ಸೇವೆಯನ್ನು ಗೌರವಿಸುತ್ತಾ, ಪಾಲಿಕೆಯ ಎಲ್ಲಾ ಸಿಬ್ಬಂದಿಗಳು ಸೇರಿ ವರ್ಗಾವಣೆಗೊಂಡ ಅಧಿಕಾರಿಗಳಿಗೆ ಭಾವನಾತ್ಮಕ ಬೀಳ್ಕೊಡುಗೆಯನ್ನು ನೀಡಿದರು..

ಅಧಿಕಾರಿಗಳ ವರ್ಗಾವಣೆ ಎಂಬುದು ಸಹಜ ಪ್ರಕ್ರಿಯೆ, ಇಲ್ಲಿ ಅವರು ಮಾಡಿದ ಜನಪರ ಕೆಲಸಗಳು ಅವರ ಅಸ್ತಿತ್ವವನ್ನು ಉಳಿಸುತ್ತವೆ, ಆಡಳಿತ ಯಂತ್ರ ಸಮರ್ಥವಾಗಿ ನಡೆದು, ಜನಪರ, ಅಭಿವೃದ್ದಿಯ ಕಾರ್ಯಗಳನ್ನು ನಡೆಸಿಕೊಂಡು ಹೋಗುತ್ತಾ, ಇಲಾಖೆಗೂ, ಸರ್ಕಾರಕ್ಕೂ ಒಳ್ಳೆಯ ಹೆಸರು ತರುವಂಥ ಅಧಿಕಾರಿಗಳು ಇದ್ದರೆ ಎಲ್ಲವೂ ಒಳ್ಳೆಯದೇ… ಇಲ್ಲವಾದರೆ…

ವರದಿ ಪ್ರಕಾಶ ಬಸಪ್ಪ ಕುರಗುಂದ..