ಪಾಲಿಕೆಯಲ್ಲಿ ಉತ್ತಮ ಆಡಳಿತ ಉಸ್ತುವಾರಿ ಸಚಿವರ ಉದ್ದೇಶವಾಗಿತ್ತು..
ಆದರೆ, ಕಂದಾಯ ವಿಭಾಗದಲ್ಲಿ, ಅಸಮರ್ಥರ ಆಗಮನವೇಕೆ??
ಅಧಿಕಾರಿಗಳೇ ದುರಾಡಳಿತಕ್ಕೆ ದಾರಿ ಮಾಡಿ ಕೊಡುತ್ತಿದ್ದಾರೆಯೇ??
ಬೆಳಗಾವಿ : ಇಡೀ ರಾಜ್ಯದಲ್ಲಿಯೇ ಬೆಳಗಾವಿ ಮಹಾನಗರ ಪಾಲಿಕೆ ತನ್ನದೇ ಆದ ಮಹತ್ವಪೂರ್ಣ ಇತಿಹಾಸ ಮತ್ತು ಸಾಧನೆ ಹೊಂದಿದ್ದು, ನಮ್ಮ ಗಡಿನಾಡು ಬೆಳಗಾವಿ ನಗರದ ಆಧಾರಸ್ತಂಭ, ಶಕ್ತಿಕೇಂದ್ರವಾಗಿರುವ ಈ ಪಾಲಿಕೆಯು ಇಂದು ಚಾಲಕನಿಲ್ಲದ ವಾಹನದಂತೆ ದಾರಿ ತಪ್ಪಿ ಅಡ್ಡದಾರಿ ಹಿದಿಯುತ್ತಿದೆಯೋ ಎಂಬ ಸಂಶಯ ಕಾಡುತ್ತಿದೆ..

ಕಳೆದ ಸುಮಾರು 9 ತಿಂಗಳಿಂದ ಹೊಸ ಸರ್ಕಾರ ಬಂದ ಮೇಲೆ ಜಿಲ್ಲೆಯಲ್ಲಿ ಇಬ್ಬರು ಪ್ರಭಾವಿ ಸಚಿವರಾಗಿ, ಅದರಲ್ಲೂ ಉತ್ತಮ ಆಡಳಿತಕ್ಕೆ ಸದಾ ಬೆಂಬಲ ನೀಡುವ ಸಿಬ್ಬಂದಿ ಸ್ನೇಹಿಯಾದ, ಸತೀಶ ಜಾರಕಿಹೊಳಿ ಅವರು ಜಿಲ್ಲಾ ಉಸ್ತುವಾರಿಯಾಗಿ, ಪಾಲಿಕೆಯಲ್ಲಿ ಜನಪರವಾದ ಅಭಿವೃದ್ದಿಯ ಉತ್ತಮ ಆಡಳಿತ ನಡೆಯಲಿ ಎಂಬ ಒಳ್ಳೆಯ ಉದ್ದೇಶದಿಂದ ಕೆಲ ಸಮರ್ಥ ಅಧಿಕಾರಿಗಳನ್ನು ಇಲ್ಲಿ ತಂದು ನೇಮಿಸಿದ್ದಾರೆ..
ಆದರೆ ಕೆಲವು ಪ್ರಭಾವಿ ವ್ಯಕ್ತಿಗಳ ಕಾಟವೂ ಅಥವಾ ರಾಜಕಾರಣಿಗಳ ಒತ್ತಡವೂ ಏನೋ, ಅಧಿಕಾರಿಗಳೂ ಕೂಡಾ ವ್ಯತಿರಿಕ್ತವಾದ ನಿರ್ಧಾರಗಳನ್ನು ಕೈಗೊಂಡು, ಪಾಲಿಕೆಯ ಆಡಳಿತದ ವೇಗಕ್ಕೆ ತಡೆಯಾಗುತ್ತಿದ್ದಾರೆ ಎಂಬ ಅನುಮಾನ ಕಾಡುತ್ತಿದೆ..
ವಿಷಯ ಇಷ್ಟೇ, ಪಾಲಿಕೆಯ ಕಂದಾಯ ವಿಭಾಗದಲ್ಲಿ, ಆ ವಿಭಾಗಕ್ಕೆ ನೆಮಕವಾದ, ಸಾಮರ್ಥ್ಯ, ಕ್ಷಮತೆ, ದಕ್ಷತೆ, ಕೌಶಲ್ಯದಿಂದ ಆ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಬಿಲ್ಲ ಕಲೆಕ್ಟರ್, ಕಂದಾಯ ನಿರೀಕ್ಷಕ, ಉಪ ಕಂದಾಯ ಅಧಿಕಾರಿ ಇಂತಹ ಸ್ಥಾನಗಳಿಗೆ ಬೇರೆ ವಿಭಾಗದ ಸಿಬ್ಬಂದಿಯನ್ನು ವರ್ಗಾವಣೆ ಮಾಡುವ ಕಾರಣವೇನು??

ಈಗಾಗಲೇ ಕಂದಾಯ ವಿಭಾಗದಲ್ಲಿ ಇರುವಂತ ಪರಿಣಿತ ಕಂದಾಯ ನಿರೀಕ್ಷಕರನ್ನು, ಬಿಲ್ ಕಲೆಕ್ಟರಗಳನ್ನು ಬೇರೆ ವಿಭಾಗಕ್ಕೆ ವರ್ಗಾಯಿಸುವ ಉದ್ದೇಶವೇನು?? ಅವರು ಬೇರೆ ವಿಭಾಗದಲ್ಲಿ ಏನಂತ ಕೆಲಸ ಮಾಡಬೇಕು?? ಇನ್ನು ಬೇರೆ ವಿಭಾಗದ ಎಸ್ ಡಿಸಿ, ಎಫ್ ಡಿಸಿ ಗಳಿಗೆ ಆರ್ ಐ ಸ್ಥಾನ ನೀಡುವದು, ಅದೇ ರೀತಿ ಆರೋಗ್ಯ ವಿಭಾಗದಲ್ಲಿ ನೇಮಕವಾದ ಗುಮಾಸ್ತರನ್ನು ಕರೆತಂದು ಕಂದಾಯ ವಿಭಾಗಕ್ಕೆ ಉನ್ನತ ಹುದ್ದೆ ನೀಡುವ ಅನಿವಾರ್ಯತೆ ಏನು?? ಇದರಿಂದ ಆಡಳಿತದಲ್ಲಿ ಸುಧಾರಣೆ ಆಗುತ್ತದೆಯೇ??
ಕಂದಾಯ ವಿಭಾಗದಲ್ಲಿ ನೇಮಕವಾಗಿ, ಪರಿಣತಿ ಹೊಂದಿದ ಸಿಬ್ಬಂದಿಯನ್ನು ಸೂಕ್ತ ಸ್ಥಳದಲ್ಲಿಯೇ ಸೇವೆ ಮಾಡಲು ಬಿಟ್ಟರೆ, ತಮ್ಮ ಕಾರ್ಯಕ್ಷಮತೆಯಿಂದ ಉತ್ತಮ ಸೇವೆ ನೀಡಿ, ಪಾಲಿಕೆಗೆ ಒಳ್ಳೆಯ ಹೆಸರಿನೊಂದಿಗೆ ಉತ್ತಮ ಆದಾಯವೂ ಕೂಡಾ ಬರುತ್ತದೆ, ಜೊತೆಗೆ ಸಾರ್ವಜನಿಕರಿಗೆ ಕೂಡಾ ತಮ್ಮ ಕೆಲಸದಲ್ಲಿ ಉತ್ತಮ ಸ್ಪಂದನೆ ದೊರೆತು, ಪಾಲಿಕೆಯ ಆಡಳಿತಕ್ಕೆ ಮೆಚ್ಚುಗೆ ವ್ಯಕ್ತವಾಗಬಹುದು..
ಪಾಲಿಕೆಯ ಅಧಿಕಾರಿಗಳು ಯಾವ ಪ್ರಭಾವ, ಒತ್ತಡಕ್ಕೂ ಮಣಿಯದೇ, ಜಿಲ್ಲಾ ಉಸ್ತುವಾರಿ ಸಚಿವರು ಅಂದುಕೊಂಡಂತೆ ಪಾಲಿಕೆಯಿಂದ ಪಾರದರ್ಶಕ ಆಡಳಿತ ನಡೆಸಿ, ಬೆಳಗಾವಿ ಪಾಲಿಕೆಯೊಂದಿಗೆ, ನಗರವನ್ನೂ ಕೂಡಾ ಅಭಿವೃದ್ಧಿಯತ್ತ ಸಾಗುವಂತೆ ಮಾಡಲಿ ಎಂಬುದು ನಗರವಾಸಿಗಳ ಆಶಯ..
ವರದಿ ಪ್ರಕಾಶ ಕುರಗುಂದ..