ಪಾಲಿಕೆಯಲ್ಲಿ ಸಾರ್ವಜನಿಕರ ತೆರಿಗೆ ಹಣದ ದುಂದುವೆಚ್ಚವನ್ನು ವಿಚಾರಣೆ ಮಾಡಿ..

ಪಾಲಿಕೆಯಲ್ಲಿ ಸಾರ್ವಜನಿಕರ ತೆರಿಗೆ ಹಣದ ದುಂದುವೆಚ್ಚವನ್ನು ವಿಚಾರಣೆ ಮಾಡಿ..

ಗಡಿನಾಡು ಕನ್ನಡಿಗರ ಸೇನೆಯಿಂದ ಪ್ರಾದೇಶಿಕ ಆಯುಕ್ತರಿಗೆ ಮನವಿ..

ಬೆಳಗಾವಿ : ಮಹಾನಗರ ಪಾಲಿಕೆಯ 58 ಚುನಾಯಿತ ಸದಸ್ಯರ ಪೈಕಿ 52 ಸದಸ್ಯರು ಬೇರೆ ರಾಜ್ಯಗಳಲ್ಲಿ ಅಧ್ಯಯನ ಪ್ರವಾಸ ಕೈಗೊಂಡು ಸಾರ್ವಜನಿಕರ ತೆರಿಗೆ ಹಣವನ್ನು ವ್ಯಯ ಮಾಡುತ್ತಿದ್ದು, ಇದರ ಬಗ್ಗೆ ಸೂಕ್ತ ವಿಚಾರಣೆ ಮಾಡಬೇಕು ಎಂದು ಬೆಳಗಾವಿಯ ಪ್ರಾದೇಶಿಕ ಆಯುಕ್ತರಿಗೆ, ಗಡಿನಾಡು ಕನ್ನಡಿಗರ ಸೇನೆಯ ಸದಸ್ಯರು ಮನವಿ ಸಲ್ಲಿಸಿದ್ದಾರೆ..

ಪಾಲಿಕೆಗೆ ತೆರಿಗೆ ಸಂಗ್ರಹ, ಪಾಲಿಕೆ ಆಸ್ತಿಗಳ ಬಾಡಿಗೆ, ಇತರ ಆದಾಯದ ಮೂಲಗಳು ಸರಿಯಾಗಿ ಬರುತ್ತಿಲ್ಲ ಇದರಿಂದ ಪಾಲಿಕೆಯ ಆರ್ಥಿಕ ಸ್ಥಿತಿ ಸರಿಯಾಗಿ ಇಲ್ಲಾ ಎಂಬ ಮಾತುಗಳು ಕೇಳಿಬರುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ಬೇರೆ ರಾಜ್ಯಗಳ ಅಧ್ಯಯನ ಪ್ರವಾಸ ಕೈಗೊಂಡಿರುವದು ಬೆಳಗಾವಿ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ, ಇದೊಂದು ಮಹಾ ಕಾರ್ಯವೆಂದು ಬಿಂಬಿಸುತ್ತಿರುವ ಅಧಿಕಾರಿಗಳು ನಾಳೆ ಜನ ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಬೇಕಾದ ಸ್ಥಿತಿ ಬರಬಹುದು..

ಈ ಹಿಂದೆ ಮಾಡಿದ ಅಧ್ಯಯನದ ಪ್ರವಾಸದಿಂದ ನಗರಕ್ಕೆ ಏನು ಪ್ರಯೋಜನೆ ಆಗಿದೆ? ಯಾವ ರಾಜ್ಯಗಳ ಯಾವ ಮಾದರಿಯನ್ನು ಇಲ್ಲಿ ಅಳವಡಿದಲಾಗಿದೆ? ಅದರಿಂದ ಜನತೆಗೆ ಆದ ಅನುಕೂಲ ಏನು? ಎಂಬುದನ್ನು ತಾವು ಪರಿಶೀಲಿಸಬೇಕು, ಈಗಾಗಲೇ ಹಿಂದಿನ ಹಾಗೂ ಈಗಿನ ರಾಜಸ್ಥಾನ ಅಧ್ಯಯನ ಪ್ರವಾಸದಿಂದ ಪಾಲಿಕೆಗೆ ಕೋಟಿಯಷ್ಟು ಹಣ ವೆಚ್ಚವಾಗಿದೆ, ಅಧಿಕಾರಿಗಳು ಹೀಗೆ ಖರ್ಚು ಮಾಡಲು ಇದು ಯಾರಪ್ಪನ ದುಡ್ಡು? ಇದರಲ್ಲಿ ಸ್ಪಷ್ಟವಾಗಿ ನಾಗರಿಕರ ತೆರಿಗೆ ಹಣದ ದುರುಪಯೋಗ ಆಗಿರುವ ಅನುಮಾನ ಕಾಡುತ್ತಿದೆ, ಇದನ್ನು ತಾವು ಗಂಭೀರವಾಗಿ ಪರಿಗಣಿಸಿ, ತಮ್ಮ ಅಧಿಕಾರಿಗಳಿಂದ ವಿಚಾರಣೆ ನಡೆಸಬೇಕು ಎಂದು ಮನವಿಯಲ್ಲಿ ಕೇಳಿಕೊಂಡಿದ್ದಾರೆ.

ಬೇರೆ ರಾಜ್ಯಗಳ ಪಾಲಿಕೆಗಳಲ್ಲಿ ಅಧ್ಯಯನ ಮಾಡಿದ ಸಂಗತಿಗಳನ್ನು ಬೆಳಗಾವಿಯಲ್ಲಿ ಅನುಷ್ಠಾನ ಮಾಡಿದ ಬಗ್ಗೆ ಸಾರ್ವಜನಿಕರಿಗೆ ತಿಳಿಸಲಿ, ಇಲ್ಲವಾದಲ್ಲಿ ಅಧ್ಯಯನದ ಹೆಸರಲ್ಲಿ ಅವರು ಖರ್ಚು ಮಾಡಿದ ಹಣವನ್ನು ಪಾಲಿಕೆಗೆ ಮರಳಿ ಪಾವತಿಸಲಿ ಎಂದು ಹೇಳಿಕೊಂಡಿದ್ದಾರೆ..

ವರದಿ ಪ್ರಕಾಶ್ ಬಿ ಕೆ..

Leave a Reply

Your email address will not be published. Required fields are marked *