ಪಾಲಿಕೆಯಿಂದ “ನನ್ನ ದೇಶ ನನ್ನ ಮಣ್ಣು” ಅಭಿಯಾನದ ಅರ್ಥಪೂರ್ಣ ಆಚರಣೆ…
ದೇಶಾಭಿಮಾನದ ಸಂಕೇತವೇ “ನನ್ನ ದೇಶ ನನ್ನ ಮಣ್ಣು” ಎಂಬ ಅಭಿಯಾನ..
ಸಂಸದೆ ಮಂಗಳಾ ಅಂಗಡಿ..
ಬೆಳಗಾವಿ : ಶನಿವಾರ ಸಂಜೆ ನಗರದ ಚನ್ನಮ್ಮ ವೃತ್ತದಲ್ಲಿ, ಬೆಳಗಾವಿಯ ಮಹಾನಗರ ಪಾಲಿಕೆ ಹಾಗೂ ಇತರ ಸಂಘಸಂಸ್ಥೆಗಳ ಸದಸ್ಯರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ “ನನ್ನ ದೇಶ ನನ್ನ ಮಣ್ಣು” ಎಂಬ ಮಣ್ಣು ಸಂಗ್ರಹ ಅಭಿಯಾನ ಅತ್ಯಂತ ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಜರುಗಿದೆ…
ಮೊದಲಿಗೆ, ಚೆನ್ನಮ್ಮ ವೃತ್ತದಲ್ಲಿರುವ ರಾಣಿ ಚನ್ನಮ್ಮ ಪುತ್ತಳಿಗೆ ಗಣ್ಯರಿಂದ ಮಾಲಾರ್ಪಣೆ ಮಾಡಲಾಗಿ, ತದನಂತರ ಶೃದ್ಧಾ ಭಕ್ತಿಯಿಂದ ಭಾರತಮಾತೆಯ ವೇಷಧಾರಿಯ ಕೈಯಲ್ಲಿದ್ದ, ಬೆಳಗಾವಿಯ ಪವಿತ್ರ ಸ್ಥಳಗಳಿಂದ ಸಂಗ್ರಹಿಸಿ ತಂದಿರುವ, ಮಣ್ಣಿನ ಕಳಶಕ್ಕೆ ಪೂಜೆ ಸಲ್ಲಿಸಲಾಯಿತು..

ಆಗಸ್ಟ್ 15 ರಿಂದ 20 ರ ವರೆಗೆ ಐದು ದಿನಗಳ ಕಾಲ ನಡೆದ ಈ ಅಭಿಯಾನದಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯು, ಇತರ ಇಲಾಖೆಗಳು ಹಾಗೂ ಶಾಲಾ ವಿದ್ಯಾರ್ಥಿಗಳ ಸಹಭಾಗಿತ್ವವನ್ನು ಪಡೆದುಕೊಂಡು, ವಿಶೇಷ ಕಾರ್ಯಕ್ರಮಗಳನ್ನು ಹಾಕಿಕೊಂಡು, ಅಭಿಯಾನವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿದ ಕೀರ್ತಿಗೆ ಪಾತ್ರವಾಗಿದೆ..
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೆ ಮಂಗಲಾ ಅಂಗಡಿ ಅವರು, ಕೇಂದ್ರ ಸರ್ಕಾರದ “ನನ್ನ ದೇಶ ನನ್ನ ಮಣ್ಣು” ಅಭಿಯಾನ ದೇಶದ ಐಕ್ಯತೆಗೆ ಹಾಗೂ ದೇಶಪ್ರೇಮಕ್ಕೆ ಉತ್ತಮ ನಿದರ್ಶನವಾಗಿದ್ದು, ಸರ್ಕಾರದ ಇಂತಹ ಅಭಿಯಾನಗಳು ತುಂಬಾ ಅವಶ್ಯಕ, ಪ್ರತಿ ಭಾರತೀಯರು ಇಂತಹ ಕಾರ್ಯದಲ್ಲಿ ಭಾಗಿಯಾಗಿ ನಮ್ಮ ದೇಶ, ನಮ್ಮ ಹೆಮ್ಮೆ ಎಂದು ಮುನ್ನಡೆಯಬೇಕು ಎಂದರು..

ಇನ್ನು ಪಾಲಿಕೆಯ ಮಹಾಪೌರರಾದ ಶೋಭಾ ಸೋಮನಾಚೆ ಅವರು ಮಾತನಾಡಿ, ನನ್ನ ದೇಶ ನನ್ನ ಮಣ್ಣು ಈ ಕಾರ್ಯಕ್ರಮ ಅತೀ ಸಂತಸ ನೀಡುತ್ತದೆ, ಬೆಳಗಾವಿಯ ಸುತ್ತಮುತ್ತಲಿನ ಪ್ರಮುಖ ಪುಣ್ಯ ಸ್ಥಳಗಳ, ಸ್ವತಂತ್ರ ಹೋರಾಟಗಾರರ, ಪವಿತ್ರ ನದಿಗಳ ಕಡೆಗೆ ಮಣ್ಣನ್ನು ತಂದು ಸಂಗ್ರಹಿಸಿ ಕಲಿಸುತ್ತಿದ್ದು, ಇಲ್ಲಿ ಶಾಲಾ ಮಕ್ಕಳು ವಿಶೇಷವಾಗಿ ಭಾಗಿಯಾಗಿದ್ದು ತುಂಬಾ ಸಂತಸ ನೀಡಿದೆ ಎಂದರು..

ಇನ್ನು ಪಾಲಿಕೆಯ ಆಯುಕ್ತರಾದ ಅಶೋಕ ದುಡಗುಂಟಿ ಅವರು ಮಾತನಾಡಿ, ಘನ ಸರ್ಕಾರಗಳ ಆದೇಶದಂತೆ, ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ದಿನಾಂಕ 15 ರಿಂದ 20ರವರಿಗೆ ಆಜಾದಿ ಕಾ ಅಮೃತ್ ಮಹೋತ್ಸವ ನಿಮಿತ್ತವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ, 15 ನೆ ತಾರೀಕು, ವಿಜೃಂಭಣೆಯಿಂದ ಸ್ವಾತಂತ್ಯ್ರ ದಿನಾಚರಣೆ ಆಚರಣೆ ನಡೆಯಿತು, 16ನೆಯ ತಾರಿಕಿಗೇ ನನ್ನ ದೇಶ ನನ್ನ ಮಣ್ಣು ಎಂಬ ಅಭಿಯಾನದ ಪ್ರತಿಜ್ಞಾ ವಿಧಿ, (ಪ್ರಮಾಣ ವಚನ) ಬೋಧನೆ ಮಾಡಲಾಯಿತು, 17 ನೆಯ ತಾರೀಕಿಗೆ ಪಾಲಿಕೆಯಲ್ಲಿ ಬರುವ ಎಲ್ಲಾ ವಾರ್ಡುಗಳ ಶಾಲೆಗಳಲ್ಲಿ (ಸೆಲ್ಪಿ ವಿತ್ ಸಾಯಿಲ್) ಮಣ್ಣಿನೊಂದಿಗೆ ಛಾಯಾಚಿತ್ರ ಎನ್ನುವ ಕಾರ್ಯಕ್ರಮ ಮಾಡಿದೆವು, 18 ನೆಯ ತಾರಿಕೀಗೆ ,ಅಭಿಯಾನದ ಶೀಲಪಲಕ ಸ್ಥಾಪನೆ ಹಾಗೂ ಔಷಧೀಯ ಸಸ್ಯಗಳನ್ನು ನೆಡುವ ಕಾರ್ಯ ಮಾಡಿದ್ದೇವೆ,


ಇಂದು 19 ನೆಯ ತಾರಿಕಿಗೆ, ಮುಂಜಾನೆಯಿಂದ ಪಾಲಿಕೆಯಲ್ಲಿ ಪ್ರಭಂದ, ಭಾಷಣ, ನೃತ್ಯ, ಗಾಯನ ಹೀಗೆ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಿ, ವಿಜೇತರನ್ನು ಆಯ್ಕೆ ಮಾಡಲಾಗಿದೆ, ಈಗ ಸ್ವಾತಂತ್ರ್ಯ ಹೋರಾಟಗಾರರ, ವಿರಾಯೋಧರ, ಪುಣ್ಯಸ್ಥಳಗಳ, ನದಿಗಳಿಂದ ಸಂಗ್ರಹ ಮಾಡಿದ ಮಣ್ಣನ್ನು ತಗೆದುಕೊಂಡು, ‘ಮಹಾನಗರದ ನಡೆ ಸ್ವಾತಂತ್ರ್ಯದ ಕಡೆ’ ಎಂಬ ಜಾಥಾ ಪ್ರಾರಂಭ ಮಾಡುತ್ತಿದ್ದೇವೆ, ನಂತರ ರಂಗಮಂದಿರದಲ್ಲಿ ನೃತ್ಯ ಕಾರ್ಯಕ್ರಮ ಏರ್ಪಡಿಸಿ ಬಹುಮಾನ ವಿತರಣೆ ಮಾಡಲಾಗುವುದು, ಇನ್ನೂ ನಾಳೆ 20ನೆಯ ತಾರೀಕು, ಸರ್ಕಾರಿ ಆಸ್ಪತ್ರೆ ಬಿಮ್ಸ್ ದಲ್ಲಿ ಹಾಗೂ ಸರ್ಕಾರಿ ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳುತ್ತಿದ್ದೆವೆ ಎಂದರು..

ನನ್ನ ದೇಶ ನನ್ನ ಮಣ್ಣು ಎಂಬ ಈ ವಿಶೇಷ ಜಾಥಾ ಅಭಿಯಾನದಲ್ಲಿ ಸಂಸದರು, ಪಾಲಿಕೆಯ ಮಹಾಪೌರರು, ಉಪಮಹಾಪೌರರು, ಆಯುಕ್ತರು, ಉಪ ಆಯುಕ್ತರು, ಸಹಾಯಕ ಆಯುಕ್ತರು, ಆರೋಗ್ಯ ಅಧಿಕಾರಿಗಳು, ಅಭಿಯಂತರರು, ಸಹಾಯಕ ಅಭಿಯಂತರರು, ನಗರ ಸೇವಕರು, ಪಾಲಿಕೆಯ ವಿವಿಧ ವಿಭಾಗದ ಸಿಬ್ಬಂದಿಗಳು, ಡೇ-ನಲ್ಮ ಅಭಿಯಾನದ ಸಮುದಾಯ ಸಂಘಟಕನಾಧಿಕಾರಿಗಳು, ಸ್ವಸಹಾಯ ಸಂಘದ ಪ್ರತಿನಿಧಿಗಳು, ಸದಸ್ಯರು ಹಾಗೂ ಇನ್ನಿತರರು ಉಪಸ್ಥಿತರಿದ್ದರು..
ವರದಿ ಪ್ರಕಾಶ ಕುರಗುಂದ..