ಪಾಲಿಕೆಯ ಅಧಿಕಾರಿಗಳು ಈಗಲಾದರೂ ಎಚ್ಚರವಾಗಿದ್ದು ಸ್ವಾಗತಾರ್ಹ ಸಂಗತಿ..
ಕನ್ನಡದ ಬಳಕೆಯ ಕಾರ್ಯವೈಖರಿಗೆ ಸಾರ್ವಜನಿಕರ ಮೆಚ್ಚುಗೆ..
ಬೆಳಗಾವಿ : ಮಾನ್ಯ ಘನ ಸರ್ಕಾರದ ಸುತ್ತೋಲೆ ಸಂಖ್ಯೆ: ಕ್ರಸಂವಾ/89ಕೆಒಎಲ್ ರ ಪ್ರಕಾರ ಕನ್ನಡ ಅನುಷ್ಠಾನ ಕುರಿತು ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯ ಅಂಗಡಿ/ ಮುಂಗಟುಗಳು/ವಾಣಿಜ್ಯ ಸಂಕೀರ್ಣಗಳನ್ನು ಪ್ರತಿದಿನ ವೀಕ್ಷಣೆ ಮಾಡಿ ತಮ್ಮ ತಮ್ಮ ಅಂಗಡಿಗಳ ನಾಮಫಲಕದಲ್ಲಿ ಶೆ. 60ರಷ್ಟು ಕನ್ನಡ ಕಡ್ಡಾಯವಾಗಿ ಬಳಸಲು ಈಗಾಗಲೇ ದಿನಾಂಕ. 31/12/2023 ರಂದು ಪತ್ರಿಕಾ ಪ್ರಕಟಣೆ ನೀಡಿಲಾಗಿದ್ದು, ಪ್ರತಿ ಅಂಗಡಿಗಳಿಗೆ ಶೇ.60 ರಷ್ಟು ಕನ್ನಡವನ್ನು ಬಳಸುವಂತೆ ನೋಟಿಸಗಳನ್ನು ನೀಡಲಾಗುತ್ತಿದೆ.

ಈ ಹಿಂದೆ ಆದೇಶ ಆಗುವ ಮುಂಚೆ ಗಡಿಭಾಗವಾದ ಈ ಬೆಳಗಾವಿ ಪಾಲಿಕೆಯ ವ್ಯಾಪ್ತಿಯಲ್ಲಿ ಬಹುತೇಕ ವ್ಯಾಪಾರಸ್ಥರು ಕನ್ನಡದ ಬಗ್ಗೆ ಕಡೆಗಣನೆ ಮಾಡುತ್ತಿದ್ದು, ಕೆಲ ಜನಪ್ರತಿನಿಧಿಗಳು, ಪ್ರಭಾವಿಗಳು, ಅನ್ಯಭಾಷಿಕರ ಒತ್ತಡಕ್ಕೆ ಮಣಿದು, ಅಧಿಕಾರಿಗಳ ಮೇಲೆ ಪ್ರಭಾವ ಬೀರಿ, ಕನ್ನಡದ ಬಳಕೆಯನ್ನು ಕಡೆಗಣಿಸಲಾಗಿತ್ತು, ಆದರೆ ಈಗ ಸರಕಾರದ ಮಹತ್ವದ ಆದೇಶದ ಮೇರೆಗೆ ಎಲ್ಲೆಡೆ ಕನ್ನಡದ ಬಳಕೆಯ ಬಗ್ಗೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಗಡಿಭಾಗದ ಜನರ ಸಂತಸ ಇಮ್ಮಡಿಯಾಗಿದೆ..
ಇಲ್ಲಿವರೆಗೂ ಒಟ್ಟು 2050 ಅಂಗಡಿಗಳಿಗೆ ಸರ್ಕಾರದ ಆದೇಶ ಪಾಲನೆಗಾಗಿ ನೋಟಿಸ್ ಗಳನ್ನು ಜಾರಿ ಮಾಡಲಾಗಿರುತ್ತದೆ.

ಪ್ರತಿದಿನ ಆರೋಗ್ಯ ಅಧಿಕಾರಿಗಳ ತಂಡವು ಬೆಳಗಾವಿ ನಗರದಲ್ಲಿ ಸಂಚರಿಸಿ, ಕನ್ನಡ ಅನುಷ್ಠಾನ ಕುರಿತು ವೀಕ್ಷಣೆ ಮಾಡಿ, ಶೇ 60 ರಷ್ಟು ಕಡ್ಡಾಯವಾಗಿ ಕನ್ನಡ ಹಾಗೂ ಬೆಳಗಾವಿ ಎಂದು ನಾಮಫಲಕದಲ್ಲಿ ಬಳಸಲು ಸೂಚಿಸಿ ನೋಟಿಸ್ ಜಾರಿ ಮಾಡಿ ಎಚ್ಚರಿಕೆ ನೀಡಲಾಗುತ್ತಿದೆ.

ಮುಂದಿನ ದಿನಗಳಲ್ಲಿ ಸರ್ಕಾರದ ಆದೇಶ ಪಾಲಿಸಿದಿದ್ದರೆ ಟ್ರೇಡ್ ಲೈಸೆನ್ಸ್ ರದ್ದುಗೊಳಿಸಿ ಅಂಗಡಿಯನ್ನು ಬಂದ/ಸೀಲ್ ಮಾಡಲಾಗುವುದೆಂದು ಸೂಚಿಸಲಾಗಿದೆ.
ವರದಿ ಪ್ರಕಾಶ ಕುರಗುಂದ..