ಪಾಲಿಕೆಯ ಕಂದಾಯ ವಿಭಾಗದಿಂದ ಚುರುಕುಗೊಂಡ ತೆರಿಗೆ ಸಂಗ್ರಹ ಕಾರ್ಯ..
ಗರಿಷ್ಟ ತೆರಿಗೆ ಸಂಗ್ರಹಕ್ಕಾಗಿ ಸಿಬ್ಬಂದಿಗಳ ಶರವೇಗದ ಕಾರ್ಯ..
ಸಕಾಲದಲ್ಲಿ ತೆರಿಗೆ ಕಟ್ಟಿ ಸಹಕರಿಸುತ್ತಿರುವ ಸಾರ್ವಜನಿಕರು..
ಬೆಳಗಾವಿ : ಪ್ರಸಕ್ತ ಆರ್ಥಿಕ ವರ್ಷದ ಪಾಲಿಕೆಯ ಆಸ್ತಿ ತೆರಿಗೆ ಸಂಗ್ರಹದ ಕಾಲಾವಧಿ ಇನ್ನೇನು ಕೇವಲ ಎರಡೇ ತಿಂಗಳು ಇರುವದರಿಂದ ಕಂದಾಯ ವಿಭಾಗದ ಸಿಬ್ಬಂದಿಗಳು ಶರವೇಗದಲ್ಲಿ ಅಸ್ತಿ ತೆರಿಗೆ ಸಂಗ್ರಹ ಕಾರ್ಯವನ್ನು ಮಾಡುತ್ತಿದ್ದಾರೆ, ಅದಕ್ಕೆ ಸಾರ್ವಜನಿಕರೂ ಕೂಡಾ ಸಹಕಾರ ನೀಡುತ್ತಿದ್ದು, ನಿಗದಿತ ಅವಧಿಯಲ್ಲಿ ತಮ್ಮ ಅಸ್ತಿಗಳ ತೆರಿಗೆಗಳನ್ನು ಭರಣ ಮಾಡಿ, ಮುಂದೆ ಆಗುವ ಸಮಸ್ಯೆಗಳಿಂದ ಮುಕ್ತರಾಗುತ್ತಿದ್ದಾರೆ.
ಹೌದು ಗುರುವಾರ ದಿನಾಂಕ 05/02/2026 ರಂದು ಮಹಾನಗರ ಪಾಲಿಕೆಯ ಅಶೋಕ ನಗರದ ಕಂದಾಯ ಶಾಖೆಯಲ್ಲಿ, ಸಾರ್ವಜನಿಕರು ಅತೀ ಉತ್ಸಾಹದಿಂದ ತಮ್ಮ ಆಸ್ತಿಗಳ ತೆರಿಗೆಯನ್ನು ಕಟ್ಟುತ್ತಿದ್ದರು, ಕರ ಸಂಗ್ರಹಕಾರರು, ಕಂದಾಯ ನೀರಿಕ್ಷಕರು, ಸಹಾಯಕ ಕಂದಾಯ ಅಧಿಕಾರಿಗಳು ಎಲ್ಲಾ ಸಿಬ್ಬಂದಿಗಳು ಕೂಡಾ ಸಂಬಂಧಪಟ್ಟ ವಾರ್ಡುಗಳ ಟೇಬಲ್ಲುಗಳಲ್ಲಿ ಹಾಜರಿದ್ದು, ಸಾರ್ವಜನಿಕರಿಗೆ ಮಾಹಿತಿ ನೀಡುತ್ತಾ, ತೆರಿಗೆ ಸಂಗ್ರಹ ಕಾರ್ಯದಲ್ಲಿ ನಿರತರಾಗಿದ್ದರು.

ಇಲ್ಲಿಯವರೆಗೆ ಶೇಕಡಾ 72ರಷ್ಟು ಪಾಲಿಕೆಯ ಆಸ್ತಿ ತೆರಿಗೆ ಸಂಗ್ರಹವಾಗಿದ್ದು, ಇನ್ನುಳಿದ ಎರಡು ತಿಂಗಳಲ್ಲಿ ಬಾಕಿ ಇರುವ 28% ತೆರಿಗೆಯನ್ನು ಅಚ್ಚುಕಟ್ಟಾಗಿ ಸಂಗ್ರಹ ಮಾಡಬೇಕೆಂದು ಪಾಲಿಕೆಯ ಆಯುಕ್ತರು ಹಾಗೂ ಉಪ ಆಯುಕ್ತರು ನಿನ್ನೆ ಸಭೆ ನಡೆಸಿ, ಕಂದಾಯ ವಿಭಾಗದ ಸಿಬ್ಬಂದಿಗಳಿಗೆ ಸೂಚನೆ ನೀಡಿದ್ದು, ಅದೇ ಆದೇಶದಂತೆ ಇಂದು ಸಿಬ್ಬಂದಿಗಳು ಅತೀ ಚುರುಕಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು.
ಬೆಳಿಗ್ಗೆ 9ರಿಂದ ಸಾರ್ವಜನಿಕರ ಕಡೆಗೆ ಹೋಗಿ, ಬಹಳ ವರ್ಷಗಳಿಂದ ಬಾಕಿ ಉಳಿದಿರುವ ಆಸ್ತಿಗಳಿಗೆ ತೆರಿಗೆ ಕಟ್ಟುವಂತೆ ನೋಟೀಸ್ ನೀಡುವದು, ಮತ್ತೆ ಚಾಲ್ತಿ ತೆರಿಗೆಗೆ ಚಲನ ನೀಡಿ ಬರುವ ಕಾರ್ಯವನ್ನು ಕರ ವಸೂಲಿಗಾರರು ಹಾಗೂ ಕಂದಾಯ ನೀರಿಕ್ಷಕರು ಮಾಡಿತ್ತಿದ್ದು, ಮಧ್ಯಾಹ್ನದ ನಂತರ ತಮ್ಮ ಕಚೇರಿಯಲ್ಲಿ ಕುಳಿತು ಬಂದಂತ ಸಾರ್ವಜನಿಕರಿಂದ ತೆರಿಗೆ ತುಂಬಿಸಿಕೊಳ್ಳುವ ಕಾರ್ಯ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ಬೆಳಗಾವಿ ಮಹಾನಗರ ಪಾಲಿಕೆಗೆ ಪ್ರಮುಖ ಆದಾಯದ ಮೂಲ ಆಗಿರುವ ಆಸ್ತಿ ತೆರಿಗೆ ಸಂಗ್ರಹ ಕಾರ್ಯ ರಭಸದಿಂದ ಸಾಗಿದ್ದು, ಸಾರ್ವಜನಿಕರು ಕೂಡಾ ಕಾಳಜಿಯಿಂದ ಬಂದು ತಮ್ಮ ಅಸ್ತಿ ತೆರಿಗೆ ತುಂಬಲಿ, ಜೊತೆಗೆ ಅವರ ಅಸ್ತಿಗಳ ಇ-ಆಸ್ತಿ ಪ್ರಕ್ರಿಯೆಯನ್ನು ಮಾಡಿಕೊಳ್ಳಲಿ, ಇದರಿಂದ ಮುಂದಿನ ಅವರ ಎಲ್ಲಾ ಕಾರ್ಯಗಳಿಗೆ ಅನುಕೂಲ ಆಗುತ್ತದೆ ಎಂದು ಕಂದಾಯ ವಿಭಾಗದ ಸಿಬ್ಬಂದಿಗಳು ಹೇಳಿಕೊಂಡಿದ್ದಾರೆ.
ವರದಿ ಪ್ರಕಾಶ್ ಬಿ ಕೆ..