ಪಾಲಿಕೆಯ ಕಂದಾಯ ವಿಭಾಗದ ಕಾರ್ಯವೈಖರಿಗೆ ನಗರಸೇವಕರ ಅಸಮಾಧಾನ..

ಪಾಲಿಕೆಯ ಕಂದಾಯ ವಿಭಾಗದ ಕಾರ್ಯವೈಖರಿಗೆ ನಗರಸೇವಕರ ಅಸಮಾಧಾನ..

ಸಿಬ್ಬಂದಿ ಹಾಗೂ ಏಜೆಂಟರ ಹಾವಳಿಯಿಂದ ಪಾಲಿಕೆ ಬೊಕ್ಕಸಕ್ಕೆ ನಷ್ಟ..

ತೆರಿಗೆ ಸಂಗ್ರಹ ವಿಷಯದಲ್ಲಿ ಮತ್ತೆ ಸುದ್ದಿಯಾದ ವೇಗಾ ಕಂಪನಿ..

ಬೆಳಗಾವಿ : ಮಹಾನಗರ ಪಾಲಿಕೆಯ ಕಂದಾಯ ವಿಭಾಗ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಆಸ್ತಿ ತೆರಿಗೆ ವಸೂಲಾತಿಯಲ್ಲಿ ಪಾಲಿಕೆಯ ಆದಾಯಕ್ಕೆ ನಷ್ಟ ಆಗುತ್ತಿದೆ, ಜೊತೆಗೆ ಕಂದಾಯ ವಿಭಾಗದಲ್ಲಿ ಅಧಿಕಾರಿಗಳ ಸಹಕಾರದಿಂದ ಏಜೆಂಟರ ಹಾವಳಿ ಅಧಿಕ ಆಗಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆಯ ವಿರೋಧ ಪಕ್ಷದ ನಗರಸೇವಕರು ಪಾಲಿಕೆ ಕಚೇರಿ ಎದುರು ಇಂದು ಧರಣಿ ಮಾಡಿದ್ದಾರೆ.

ಈ ವೇಳೆ ಮಾತನಾಡಿದ ವಿರೋಧ ಪಕ್ಷದ ನಾಯಕರಾದ ಮುಜಮೀಲ್ ಧೋನಿ ಅವರು, ಆಸ್ತಿ ತೆರಿಗೆ ಪಾವತಿಸುವ ಹಾಗೂ ಹಕ್ಕು ಬದಲಾವಣೆ ಕೆಲಸಕ್ಕಾಗಿ ಸಾರ್ವಜನಿಕರು ಹೋದರೆ ಕಂದಾಯ ವಿಭಾಗದ ಕೆಲ ಸಿಬ್ಬಂದಿಗಳು ಒಂದೆರಡು ತಿಂಗಳು ಅಲೆದಾಡಿಸುತ್ತಾರೆ, ಹಣದ ಬೇಡಿಕೆಯನ್ನು ಇಡುತ್ತಾರೆ, ಆದರೆ ಏಜೆಂಟರು ಹೋದರೆ ಎರಡೇ ಗಂಟೆಯಲ್ಲಿ ಕೆಲಸ ಮಾಡಿ ಕೊಡುತ್ತಾರೆ, ಕಂದಾಯ ವಿಭಾಗದ ಅಧಿಕಾರಿಗಳು ಸರಿಯಾಗಿ ಕಾರ್ಯ ಮಾಡಿದರೆ ಸುಮಾರು ಒಂದು ವರೆ ಕೋಟಿ ತೆರಿಗೆ ಸಂಗ್ರಹಿಸಬಹುದು, ಹಲವಾರು ವರ್ಷಗಳ ಹಿಂದಿನ ತೆರಿಗೆಗಳನ್ನು ಸರಿಯಾಗಿ ವಸೂಲಿ ಮಾಡದೇ ಕೆಲ ಆಸ್ತಿ ಹಾಗೂ ಕಾರ್ಖಾನೆಗಳ ಮಾಲಿಕರ ಜೊತೆ ಹೊಂದಾಣಿಕೆ ಮಾಡಿಕೊಂಡು, ಮಹಾನಗರ ಪಾಲಿಕೆಯ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುತ್ತಿದ್ದಾರೆ ಇದರಿಂದ ಪಾಲಿಕೆಯ ಅಭಿವೃದ್ಧಿ ಕಾರ್ಯಗಳಲ್ಲಿ ಕುಂಠಿತವಾಗಿದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ..

ಇನ್ನು ನಗರ ಸೇವಕ ಶಾಹಿದ್ ಖಾನ ಪಠಾನ ಅವರು ಮಾತನಾಡಿ, ದಕ್ಷಿಣದ ವೇಗಾ ಕಂಪನಿಯು ಕಂಪನಿಯು ಹಲವಾರು ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಪಾಲಿಕೆಯ ಕಂದಾಯ ವಿಭಾಗ ಸಂಪೂರ್ಣವಾಗಿ ನೆಲಕಚ್ಚಿದೆ, ಐದಾರು ವರ್ಷಗಳಾದರೂ ಕಂದಾಯ ವಿಭಾಗದ ಸಿಬ್ಬಂದಿಗಳು ವರ್ಗಾವಣೆ ಆಗುತ್ತಿಲ್ಲ ಎಂಬ ಆರೋಪವನ್ನು ಮಾಡಿದ್ದಾರೆ.

ಈ ಕುರಿತಾಗಿ ಪಾಲಿಕೆಯ ಆಯುಕ್ತರು ಕೂಡಲೇ ಕ್ರಮ ತೆಗೆದುಕೊಳ್ಳಬೇಕು, ಅಲ್ಲಿವರೆಗೆ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂಬ ಎಚ್ಚರಿಕೆ ನೀಡಿದ್ದಾರೆ, ಈ ಸಂದರ್ಭದಲ್ಲಿ ನಗರ ಸೇವಕರಾದ ಶಿವಾಜಿರಾವ್ ಮಂಡೋಲ್ಕರ್, ರವಿ ಸಾಳುಂಕೆ, ವೈಶಾಲಿ ಬಾತ್ಕಂಡೆ, ಜ್ಯೋತಿ ಕಡೋಲ್ಕರ್, ಅಪ್ರೊಜ್ ಮುಲ್ಲಾ, ಖುರ್ಷಿದ್ ಮುಲ್ಲಾ, ರೇಷ್ಮಾ ಬೈರಕದಾರ, ಅಸ್ಮಿತಾ ಪಾಟೀಲ್, ಮತ್ತಿತರರು ಉಪಸ್ಥಿತರಿದ್ದರು..

ವರದಿ ಪ್ರಕಾಶ್ ಬಸಪ್ಪ ಕುರಗುಂದ.