ಪಾಲಿಕೆಯ ಕೋ ಆಫ್ ಕ್ರೆಡಿಟ್ ಸೊಸೈಟಿಯಲ್ಲಿ 3ಕೋಟಿ 40ಲಕ್ಷ ಹಣದ ದುರ್ಬಳಕೆ..

ಪಾಲಿಕೆಯ ಕೋ ಆಫ್ ಕ್ರೆಡಿಟ್ ಸೊಸೈಟಿಯಲ್ಲಿ 3ಕೋಟಿ 40ಲಕ್ಷ ಹಣದ ದುರ್ಬಳಕೆ..

ದುರ್ಬಳಕೆ ಮಾಡಿದವರ ವಿರುದ್ಧ ಕಾನೂನು ಕ್ರಮ ಆಗಬೇಕು..

ಸೊಸೈಟಿಯ ಸದಸ್ಯರಿಗೆ ನ್ಯಾಯ ಸಿಗದೇ ಹೋದರೆ ಲೋಕಾಯುಕ್ತಕ್ಕೆ ದೂರು..

ಸೊಸೈಟಿ ಸದಸ್ಯರ ಮನವಿ..

ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಪಾಲಿಕೆಯ “ಕೋ ಆಫ್ ಕ್ರೆಡಿಟ್ ಸೊಸೈಟಿಯಲ್ಲಿ” ಕೋಟಿಗಟ್ಟಲೇ ಠೇವಣಿ ಹಣವನ್ನು ಇಟ್ಟಿದ್ದು, ಅದನ್ನು ದುರ್ಬಳಕೆ ಮಾಡಿಕೊಳ್ಳಲಾಗಿದ್ದು, ದುರ್ಬಳಕೆ ಮಾಡಿಕೊಂಡವರ ವಿರುದ್ಧ ಕಾನೂನು ಕ್ರಮ ಜಾರಿಯಾಗಬೇಕೆಂದು ಸೊಸೈಟಿಯ ಸದಸ್ಯರು ಸಹಾಯಕ ನಿಬಂಧಕರು ಸಹಕಾರಿ ಸಂಘಗಳು ಬೆಳಗಾವಿ ಇವರಿಗೆ ದೂರು ನೀಡಿದ್ದಾರೆ.

ಗುರುವಾರ ದಿನಾಂಕ 12/09/2025 ರಂದು ಬೆಳಗಾವಿ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ಜ್ಞಾಪಕ ದೂರು ನೀಡಿರುವ ಸೊಸೈಟಿಯ ಸದಸ್ಯರು, 2017-18 ನೇ ಸಾಲಿನ ಆರ್ಥಿಕ ವರ್ಷದಲ್ಲಿ ಆಗಿನ ಉಪಾಧ್ಯಕ್ಷರಾಗಿದ್ದವರು ಕಾನೂನು ಬಾಹಿರವಾಗಿ 3 ಕೋಟಿ 40 ಲಕ್ಷ ಹಣವನ್ನು ಸಂಗೊಳ್ಳಿ ರಾಯಣ್ಣ ಸೊಸೈಟಿಯಲ್ಲಿ (ಡಿಪಾಸಿಟ್) ಠೇವಣಿ ಮಾಡಿರುತ್ತಾರೆ.

ಇದರಿಂದ ನಮ್ಮ ಸೊಸೈಟಿಗೆ ಯಾವ ಲಾಭವೂ ಆಗಿಲ್ಲ, ಬಡ್ಡಿಯೂ ಬರುತ್ತಿಲ್ಲ, ಅಸಲೂ ಬರದ ಕಾರಣಕ್ಕಾಗಿ ಸೊಸೈಟಿ ಬಹುದಿನಗಳಿಂದ ನಷ್ಟದಲ್ಲಿ ಸಾಗುತ್ತಿದೆ, ಇದರಿಂದ ಸೊಸೈಟಿಯ ಸದಸ್ಯರಿಗೆ ಅನೇಕ ರೀತಿಯಲ್ಲಿ ಆರ್ಥಿಕ ಸಮಸ್ಯೆಗಳು ಎದುರಾಗುತ್ತಿವೆ.

ಆದಕಾರಣ ಈ ಕುರಿತಾಗಿ ಕೂಲಂಕುಷವಾಗಿ ಪರಿಶೀಲನೆ ಮಾಡಿ, ಹಣದ ದುರ್ಬಳಕೆ ಮಾಡಿದವರ ಬಗ್ಗೆ ಸೂಕ್ತ ರೀತಿಯಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು, ಈಗಾಗಲೇ ಮೊದಲು ಈ ವಿಷಯದ ಸಲುವಾಗಿ ಮನವಿ ಮಾಡಿದ್ದು, ಯಾವುದೇ ಕ್ರಮ ಜರುಗಿಸಿಲ್ಲ, ಇನ್ನಾದರೂ ವಿಚಾರಣೆ ನಡೆಸಿ ನ್ಯಾಯ ಒದಗಿಸಬೇಕು, ಇಲ್ಲವಾದರೆ ಈ ವಿಷಯದ ಕುರಿತಾಗಿ ನಾವು ಲೋಕಾಯುಕ್ತಕ್ಕೆ ದೂರು ನೀಡಬೇಕಾಗುತ್ತದೆ ಎಂದು ಸದಸ್ಯರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ..

ವರದಿ ಪ್ರಕಾಶ್ ಬಸಪ್ಪ ಕುರಗುಂದ..