ಪಾಲಿಕೆಯ ತೆರಿಗೆ ಮತ್ತು ಕಂದಾಯ ಸ್ಥಾಯಿ ಸಮಿತಿಯ ಸಭೆ..

ಪಾಲಿಕೆಯ ತೆರಿಗೆ ಮತ್ತು ಕಂದಾಯ ಸ್ಥಾಯಿ ಸಮಿತಿಯ ಸಭೆ..

ದಕ್ಷಿಣ ಕಂದಾಯ ವಿಭಾಗದ ಕಛೇರಿಯ ಅವ್ಯವಸ್ಥೆಯ ಬಗ್ಗೆ ಸಮಿತಿ ಅಧ್ಯಕ್ಷರ ಅಸಮಾಧಾನ..

ಎಂಟು ದಿನಗಳಲ್ಲಿ ಕಛೇರಿಯಲ್ಲಿ ಸುವ್ಯವಸ್ಥೆ ಕಾಣಬೇಕು..

ನೇತ್ರಾವತಿ ವಿನೋದ ಭಾಗವತ, ಅಧ್ಯಕ್ಷರು ತೆರಿಗೆ ಮತ್ತು ಕಂದಾಯ ಸ್ಥಾಯಿ ಸಮಿತಿ..

ಬೆಳಗಾವಿ : ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ದಕ್ಷಿಣ ಕಚೇರಿಯು ಅವ್ಯವಸ್ಥೆಯ ಆಗರವಾಗಿದ್ದು, ಈಗಾಗಲೇ ಎರಡು ಸಲ ಕಳವು ಕೂಡಾ ಆಗಿದೆ, ಇನ್ನು ಎಂಟು ದಿನಗಳಲ್ಲಿ ಕಚೇರಿಯಲ್ಲಿ ಸುವ್ಯವಸ್ಥೆ ನಿರ್ಮಾಣ ಆಗಬೇಕೆಂದು ಕಂದಾಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ನೇತ್ರಾವತಿ ಭಾಗವತ ಅವರು ದಕ್ಷಿಣ ವಿಭಾಗದ ಕಂದಾಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ..

ಮಂಗಳವಾರ ದಿನಾಂಕ 24/11/2024ರಂದು ಬೆಳಗಾವಿ ಪಾಲಿಕೆಯ ಸ್ಥಾಯಿ ಸಮಿತಿಯ ಸಭಾ ಭವನದಲ್ಲಿ ನಡೆದ ತೆರಿಗೆ ಮತ್ತು ಕಂದಾಯ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಿತಿ ಅಧ್ಯಕ್ಷೆ ನೇತ್ರಾವತಿ ಭಾಗವತ ಅವರು, ದಕ್ಷಿಣ ವಿಭಾಗದ ಕಂದಾಯ ಕಚೇರಿಯಲ್ಲಿ ಮೂಲಭೂತ ಸೌಕರ್ಯ ಕೊರತೆ ಇದ್ದು, ಭದ್ರತೆಯೂ ಕೂಡಾ ಇಲ್ಲದಿರುವುದರಿಂದ ಎಂಟು ದಿನಗಳಲ್ಲಿ ಸಮಸ್ಯೆ ನಿವಾರಣೆ ಆಗಬೇಕು ಎಂದು ಕಂದಾಯ ಅಧಿಕಾರಿಯಾದ ಕೋರಿ ಅವರಿಗೆ ಖಡಕ್ ಸೂಚನೆ ನೀಡಿದ್ದಾರೆ..

ಇದಕ್ಕೂ ಮೊದಲೇ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಪಾಲಿಕೆಯ ಆಡಳಿತ ಪಕ್ಷದ ಅಧ್ಯಕ್ಷರಾದ ಗಿರೀಶ್ ದೊಂಗಡಿ ಅವರು, ದಕ್ಷಿಣ ಕಂದಾಯ ವಿಭಾಗದ ಕಚೇರಿ ಈಗಾಗಲೇ ಎರಡು ಬಾರಿ ಕಳ್ಳತನ ಆಗಿದೆ, ಅಲ್ಲಿ ಭದ್ರತೆ ಇಲ್ಲಾ, ಕಚೇರಿ ಕೆಲಸಕ್ಕೆ ಇರಬೇಕಾದ ತಾಂತ್ರಿಕ ಎಲೆಕ್ಟ್ರಾನಿಕ್ ಸಾಮಗ್ರಿಗಳಿಲ್ಲ, ವಿದ್ಯುತ್ ನಿಲುಗಡೆಯಾದಾಗ ಕಚೇರಿಯಲ್ಲಾ ಕತ್ತಲೆಯೇ, ತೆರಿಗೆ ಕಟ್ಟಲು ಬಂದ ಸಾರ್ವಜನಿಕರಿಗೆ ಕೂರಲು ಸರಿಯಾದ ಆಸನಗಳಿಲ್ಲ, ಶೌಚಾಲಯದ ಸ್ಥಿತಿ ಅಂತೂ ಅದೋಗತಿ, ಆಸ್ತಿ ದಾಖಲಾತಿ ಸಂಗ್ರಹಿಸಿಡಲು ಸರಿಯಾದ ವ್ಯವಸ್ಥೆಯಿಲ್ಲ ಹೀಗಿದ್ದಾಗ ಜನರು ಹೇಗೆ ಬರಬೇಕು? ಹೇಗೆ ತೆರಿಗೆ ಕಟ್ಟಬೇಕು ಎಂದು ದಕ್ಷಿಣ ಕಂದಾಯ ಅಧಿಕಾರಿ ಕೋರಿ ಯವರನ್ನು ಪ್ರಶ್ನೆ ಮಾಡಿದರು.

ಅದಕ್ಕೆ ದ್ವನಿಗೂಡಿಸಿದ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ನೇತ್ರಾವತಿ ವಿನೋದ ಭಾಗವತ ಅವರು, ಇನ್ನು ಎಂಟು ದಿನಗಳ ಒಳಗಾಗಿ ಕಚೇರಿಯಲ್ಲಿ ಮೂಲಭೂತ ಸೌಲಭ್ಯಗಳು ಸಿದ್ಧವಾಗಬೇಕು ಅದಕ್ಕೆ ಬೇಕಾದ ಸಿದ್ಧತೆ ಆದಷ್ಟು ಬೇಗ ನಡೆಯಲಿ, ಇನ್ಮುಂದೆ ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಸಭೆಯಲ್ಲಿ ಸೂಚನೆ ನೀಡಿದರು.

ವರದಿ ಪ್ರಕಾಶ್ ಬಸಪ್ಪ ಕುರಗುಂದ..