ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರ ಆಯ್ಕೆ..
ಉತ್ತರ ಹಾಗೂ ದಕ್ಷಿಣಕ್ಕೆ ಎರಡೇರಡರಂತೆ ಅಧ್ಯಕ್ಷ ಸ್ಥಾನ..
ಬೆಳಗಾವಿ : ಮಹಾನಗರ ಪಾಲಿಕೆ ಬೆಳಗಾವಿಯ ನಾಲ್ಕು ಸ್ಥಾಯಿ ಸಮಿತಿಗಳ ಸದಸ್ಯರ ಚುನಾವಣೆಯು ದಿನಾಂಕ 12/08/2025 ರಂದು ಜರುಗಿದ್ದು, ಅದರಲ್ಲಿ ತಲಾ 7ರಂತೆ ನಾಲ್ಕು ಸಮಿತಿಗಳಿಗೆ 28 ಸದಸ್ಯರ ಅವಿರೋಧ ಆಯ್ಕೆ ಆಗಿತ್ತು.
ಆ ನಾಲ್ಕು ಸ್ಥಾಯಿ ಸಮಿತಿಗಳಿಗೆ ಇಂದು, ಅಂದರೆ ಸೋಮವಾರ ದಿನಾಂಕ 18/08/2025ರಂದು ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿದ್ದು, ತೆರಿಗೆ ನಿರ್ಧರಣೆ, ಹಣಕಾಸು ಹಾಗೂ ಅಪೀಲುಗಳ ಸ್ಥಾಯಿ ಸಮಿತಿಗೆ ರೇಖಾ ಮೋಹನ ಹೂಗಾರ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ ಲಕ್ಷ್ಮಿ ಮಹಾದೇವ ರಾಠೋಡ ಅವರನ್ನು ಆಯ್ಕೆ ಮಾಡಲಾಗಿದೆ.
ಇನ್ನು ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಗೆ ಮಾಧವಿ ಸಾರಂಗ ರಾಘೋಚಿ ಅವರು ಅಧ್ಯಕ್ಷರಾದರೆ, ಲೆಕ್ಕಗಳ ಸ್ಥಾಯಿ ಸಮಿತಿಗೆ ಬ್ರಹ್ಮಾನಂದ (ನಂದು) ಅರ್ಜುನ್ ಮಿರಜಕರ ಅಧ್ಯಕ್ಷರಾಗಿ ಆಯ್ಕೆ ಆಗುವ ಮೂಲಕ, ಎರಡು ಸ್ಥಾನಗಳನ್ನು ಉತ್ತರ, ಮತ್ತೆರಡು ಸ್ಥಾನಗಳನ್ನು ದಕ್ಷಿಣಕ್ಕೆ ಹಂಚಿದಂತಾಗಿದೆ.
ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆಯ ಸಂದರ್ಭದಲ್ಲಿ ಪಾಲಿಕೆಯ ಮಹಾಪೌರರು, ಉಪ ಮಹಾಪೌರರು, ಆಡಳಿತ ಪಕ್ಷದ ನಾಯಕರು ಹಾಗೂ ಪಾಲಿಕೆಯ ಆಯುಕ್ತರು ಉಪಸ್ಥಿತರಿದ್ದರು.
ವರದಿ ಪ್ರಕಾಶ್ ಬಸಪ್ಪ ಕುರಗುಂದ..