ಪಾಲಿಕೆಯ ಪರಿಷತ್ ಸಭೆಯಲ್ಲಿ ಕೆಂಡಾಮಂಡಲವಾದ ಶಾಸಕ ಆಶಿಫ್ (ರಾಜು) ಸೇಠ್..
ಭೂಬಾಡಿಗೆ ವಸೂಲಿಯಲ್ಲಿ ಆಡಳಿತ ಪಕ್ಷ ಹಾಗೂ ಅಧಿಕಾರಿಗಳ ವಿರುದ್ಧ ಗುಡುಗು…
ಬರೀ ನಿಯಮ ಹೇಳುವ ನಿಮಗೆ ಮಾನವೀಯತೆ ಇಲ್ಲವೇ ಎಂದು ತರಾಟೆ..
ಬೆಳಗಾವಿ : ನಗರದಲ್ಲಿ ಬೀದಿ ಬದಿಗಳಲ್ಲಿ ಕುಳಿತು ವ್ಯಾಪಾರ ಮಾಡುವ ಬಡ ವ್ಯಾಪಾರಿಗಳಿಂದ ಭೂಬಾಡಿಗೆ ರೂಪದಲ್ಲಿ ಹೆಚ್ಚು ಹಣ ಸಂಗ್ರಹ ಮಾಡುತ್ತಿದ್ದು, ಅದೂ ನಡೆಯಲಿಕ್ಕೆ ಬಾರದ ದಿವ್ಯಾoಗ (ಅಂಗವಿಕಲ) ವ್ಯಾಪಾರಿ ಹತ್ತಿರ ಒತ್ತಾಯ ಪೂರ್ವಕವಾಗಿ ಭೂಬಾಡಿಗೆ ಸಂಗ್ರಹದ ಮಾಡಿದ ವಿಷಯಕ್ಕೆ, ಪಾಲಿಕೆಯ ಆಡಳಿತ ಪಕ್ಷ ಹಾಗೂ ಪಾಲಿಕೆಯ ಅಧಿಕಾರಿಗಳ ವಿರುದ್ಧ ಶಾಸಕ ಆಶಿಫ್ (ರಾಜು) ಸೇಠ್ ಅವರು ಕೆಂಡಾಮಂಡಲವಾದ ಸಂಗತಿ ಪಾಲಿಕೆಯ ಪರಿಷತ ಸಭೆಯಲ್ಲಿ ಜರುಗಿದೆ..

ಮಂಗಳವಾರ ದಿನಾಂಕ 02/12/2025 ರಂದು ಬೆಳಗಾವಿ ಪಾಲಿಕೆಯ ಪರಿಷತ್ ಸಭಾಭವನದಲ್ಲಿ ನಡೆದ ಪಾಲಿಕೆಯ ಪರಿಷತ್ ಸಭೆಯಲ್ಲಿ ಭೂಬಾಡಿಗೆ ಸಂಗ್ರಹದ ವಿಷಯವಾಗಿ ಒಬ್ಬ ದಿವ್ಯಾoಗ ವ್ಯಾಪಾರಿಯ ಹತ್ತಿರ ಭೂಬಾಡಿಗೆ ವಸೂಲಿ ಮಾಡುವ ಅವಶ್ಯಕತೆ ಇತ್ತೇ ಎಂದು ಪ್ರಶ್ನೆ ಮಾಡಿದಾಗ, ಅದ್ದಕೆ ಧ್ವನಿಗೂಡಿಸಿದ ನಗರ ಸೇವಕ ರವಿ ಸಾಲುಂಕೆ ಅವರು, ಭೂಬಾಡಿಗೆ ವಸೂಲಿ ಗುತ್ತಿಗೆದಾರರಿಗೆ ಒತ್ತಾಯ ಮಾಡಿ ಹಣ ಸಂಗ್ರಹ ಮಾಡಲು ಹೇಳಿದ್ದು ಯಾರು? ಅಂಗವಿಕಲ ವ್ಯಾಪಾರಿ ಹತ್ತಿರ ಕಡ್ಡಾಯವಾಗಿ ವಸೂಲಿ ಮಾಡುವ ಅವಶ್ಯಕತೆ ಏನಿತ್ತು? ಆ ವ್ಯಾಪಾರಿ ಇಂದು ಪಾಲಿಕೆಯ ಎದುರು ಬಂದು ಕುಳಿತಿದ್ದಾನೆ, ಅವನಿಗೆ ಮಾತನಾಡಲೂ, ನಿಲ್ಲಲು ಸಹ ಬರುವದಿಲ್ಲ, ಗುತ್ತಿಗೆದಾರ ತನ್ನ ಮನಬಂದಂತೆ ಮಾಡಿದರೆ ಹೇಗೆ ಎಂದು ಪ್ರಶ್ನೆ ಮಾಡಿದರು..
ಇದಕ್ಕೆ ಉತ್ತರಿಸಿದ ಮಹಾಪೌರರು ಈಗಾಗಲೇ ಅಧಿಕಾರಿಗಳು ಹಾಗೂ ವ್ಯಾಪಾರಿ ವಲಯಗಳ ಸಮಿತಿ ಸದಸ್ಯರ ಜೊತೆ ಎರಡು ಸಭೆಗಳನ್ನು ಮಾಡಿದ್ದೇವೆ ಅದರಲ್ಲಿ ದಿವ್ಯಾoಗ ವ್ಯಾಪಾರಿಗಳಿಂದ ಹಣ ಸಂಗ್ರಹ ಮಾಡಬಾರದೆಂದು ಹೇಳಿದ್ದೇವೆ, ಅದು ಕಾರ್ಯರೂಪಕ್ಕೆ ಬರಬೇಕು ಅಷ್ಟೇ ಎಂದರು..

ಅದೇ ಯಾಕೆ ಕಾರ್ಯರೂಪಕ್ಕೆ ಬರಿತ್ತೀಲ್ಲ ಎಂದು ನಗರ ಸೇವಕ ಶಾಹಿದ್ ಪಠಾನ ಅವರು ಕೇಳಿದಾಗ, ಉತ್ತರಿಸಿದ ಕಂದಾಯ ಉಪಆಯುಕ್ತೆ ರೇಷ್ಮಾ ತಾಳಿಕೋಟೆ ಅವರು ಭೂಬಾಡಿಗೆ ಸಂಗ್ರಹದ ಕುರಿತಾಗಿ ಈಗಾಗಲೇ ಹಲವಾರು ದೂರುಗಳು ಬಂದಿವೆ, ಅದಕ್ಕಾಗಿ ನಾವು ಗುತ್ತಿಗೆದಾರರಿಗೆ ನೋಟಿಸ್ ಕೂಡಾ ನೀಡಿದ್ದೇವೆ, ದಿವ್ಯಾoಗ ವ್ಯಾಪಾರಿಗಳಿಂದ ಭೂಬಾಡಿಗೆ ಸಂಗ್ರಹ ಮಾಡಬಾರದು ಎಂದು ಹೇಳಿದ್ದೇವೆ ಎಂದರು.

ಅದಕ್ಕೆ ಶಾಸಕ ಆಶಿಫ್ (ರಾಜು) ಸೇಠ್ ಅವರು ಈಗಾಗಲೇ ಅವರ ಹತ್ತಿರ ಭೂಬಾಡಿಗೆ ತುಂಬಿದ ರಶೀಟಿ ಇದೆ, ಅವರು ಈಗ ಹೊರಗೆ ಬಂದು ಕುಳಿತಿದ್ದಾರೆ, ಇದಕ್ಕೆ ನೀವು ಏನು ಕ್ರಮ ತಗೆದುಕೊಳ್ಳುತ್ತಿರಿ ಎಂದು ಪ್ರಶ್ನೆ ಮಾಡಿ, ಆಡಳಿತ ಪಕ್ಷದ ನಾಯಕ ಹಾಗೂ ಸದಸ್ಯರಿಗೆ ನೀವು ಕೂಡಾ ಹೊರಗೆ ಹೋಗಿ ನೋಡಿ ಬನ್ನಿ, ಆತನಿಗೆ ಮಾತನಾಡಲು, ನಡೆಯಲು ಬರುವದಿಲ್ಲ ಎಂದರು.

ಇದಕ್ಕೆ ಮಧ್ಯ ಪ್ರವೇಶಿಸಿ ಮಾತನಾಡಿದ ನಗರ ಸೇವಕ ರವಿ ದೋತ್ರೆ ಅವರು, ಗುತ್ತಿಗೆ ನಿಯಮಗಳಲ್ಲಿ ಅದು ಇದೆಯೋ ಇಲ್ಲವೋ ನೋಡಿ, ಕಂಡೀಷನಗಳನ್ನು ಚೆಕ್ ಮಾಡಿ ಎಂದು ಅಧಿಕಾರಿಗಳಿಗೆ ಹೇಳುತ್ತಿರುವಾಗ, ಇದಕ್ಕೆ ಕೋಪಗೊಂಡ ಶಾಸಕರು ಏನು ಕಂಡೀಷನ್ ನೋಡೋದು? ಯಾವ ಕಂಡೀಷನ್ ನೋಡೋದು? ಬರೀ ಕಂಡೀಷನ್ ನೋಡುತ್ತಾ ಇರೋದೇ? ನೈತಿಕತೆ ಇಲ್ಲವೇ? ಬರೀ ಕಂಡೀಷನ್, ರೂಲ್ಸ್, ನೋಟಿಫಿಕೇಶನ್, ಕಾಂಟಾಕ್ಟ್ ಆಗಿದೆ, ಇಷ್ಟು ಆಗಿದೆ, ಅಷ್ಟು ಆಗಿದೆ, ಇವ ನೂರು ರೂಪಾಯಿ, ಅವ ಇನ್ನೂರು ರೂಪಾಯಿ ತಗೋಬೇಕು ಅಷ್ಟೇನಾ ಎಂದು ಕಿಡಿ ಕಾರಿದರು.

ಇಲ್ಲಿವರೆಗೆ ನಾನು ಸುಮಾರು ಹತ್ತು ಸಾರಿ ಪೋನ್ ಮಾಡಿ ಹೇಳಿದ್ದೇನೆ, ವ್ಯಾಪಾರಿಗಳು ಕೂಡಾ ಮೇಯರ್ ಅವರಿಗೆ, ಆಯುಕ್ತರಿಗೆ ಹಲವಾರು ಮನವಿ ನೀಡಿದ್ದಾರೆ, ದಿನಾ 200 ವ್ಯಾಪಾರ ಮಾಡುವ ಒಬ್ಬ ಕಾಯಿಪಲ್ಲೇ ಮಾರುವ ಮಹಿಳೆ ಹತ್ತಿರ ಇವರು 100 ರೂಪಾಯಿ ಪಡೆಯುತ್ತಾರೆ, ಏನು ಮಾಡಬೇಕು ಅವರು? ಬಡವರನ್ನು ಕಾಡಿಸುವದು ಒಂದು ಮಜವಾಗಿದೆಯೇ? ಇಷ್ಟು ಸಾರಿ ನಿಮಗೆ ಹೇಳುವದು, ಈಗ ಕಂಡೀಶನ್ ಬಗ್ಗೆ ಮಾತನಾಡುತ್ತೀರಾ? ಗುತ್ತಿಗೆದಾರ ಪಾಲಿಕೆಗೆ ಹೆಚ್ಛೆನು ಹಣ ನೀಡಿಲ್ಲ, ಅವನ ಮನಸ್ಸಿಗೆ ಬಂದಂತೆ ಮಾಡುತ್ತಿದ್ದಾನೆಯೇ? ಕಳೆದ ಮೂರು ಸಭೆಗಳಿಂದ ಈ ಚರ್ಚೆ ಆಗುತ್ತಿದೆ, ಎಂದು ತರಾಟೆಗೆ ತಗೆದುಕೊಂಡಾಗ ಇಡೀ ಸಭಾಭವನವೇ ಸ್ಥಬ್ದವಾಗಿತ್ತು..

ಇದೇ ವಿಷಯ ಮುಂದುವರೆದು ಇಡೀ ಸಭಾ ಭವನವೇ ಮಹಾಪೌರರು, ಉಪ ಮಹಾಪೌರಾರು, ಶಾಸಕರು ನಗರಸೇವಕರು ಎಲ್ಲರೂ ಸಭೆಯಿಂದ ಹೊರ ನಡೆದು ಪಾಲಿಕೆಯ ಹೋರಾಗಣದಲ್ಲಿ ಕುಳಿತ ಆ ದಿವ್ಯಾoಗ ವ್ಯಾಪಾರಿಯ ಬಳಿ ತೆರಳಿ, ಅವನ ಪರಿಸ್ಥಿತಿಯನ್ನು ಕಂಡು, ಅವನ ಸಮಸ್ಯೆಗೆ ಸ್ಪಂದನೆ ನೀಡಿದ್ದು, ಇದು ಆಡಳಿತ ಪಕ್ಷ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಮುಜುಗರ ತರುವಂತಹ ಸನ್ನಿವೇಶ ಆಗಿತ್ತು..
ಪರಿಷತ್ ಸಭೆಯ ಸುದೀರ್ಘವಾದ ಸಮಯವನ್ನು ಈ ಭೂ ಬಾಡಿಗೆಯ ವಿಷಯ ನುಂಗಿದ್ದರೂ, ಇಷ್ಟೆಲ್ಲಾ ನಡೆದರೂ ಭೂಬಾಡಿಗೆ ಗುತ್ತಿಗೆ ಪಡೆದ ಗುತ್ತಿಗೆದಾರನನ್ನು ಮಾತ್ರ ಯಾರು ಕರೆಸುವ ಪ್ರಯತ್ನ ಮಾಡಲಿಲ್ಲ, ಇನ್ನು ಮುಂದೆಯಾದರೂ ಬೀದಿ ಬದಿ ವ್ಯಾಪಾರಿಗಳ ಸಮಾಸ್ಯೆ ಮುಗಿಯುತ್ತಾ? ಗುತ್ತಿಗೆದಾರ ತಿದ್ದಿಕೊಂಡು ಹೋಗುತ್ತನಾ? ಶಾಸಕ ಹಾಗೂ ನಗರ ಸೇವಕರುಗಳ ಪ್ರಶ್ನೆಗೆ ಉತ್ತರ ಸಿಗುತ್ತದೆಯಾ? ಭೂಬಾಡಿಗೆ ಸಂಗ್ರಹ ಕಾರ್ಯದಲ್ಲಿ ಸಡಿಲಿಕೆ ಆಗುತ್ತದೆಯಾ? ಎಂದು ಬರುವ ದಿನಗಳಲ್ಲಿ ಕಾದು ನೋಡಬೇಕು..

ವರದಿ ಪ್ರಕಾಶ ಬಿ ಕುರಗುಂದ..