ಪಾಲಿಕೆ ಉಪ ಆಯುಕ್ತೆ ರೇಷ್ಮಾ ತಾಳಿಕೋಟೆ ವರ್ಗಾವಣೆ..
ಬೆಳಗಾವಿ : ಮಹಾನಗರ ಪಾಲಿಕೆ ಬೆಳಗಾವಿಯ ಕಂದಾಯ ವಿಭಾಗದ ಉಪ ಆಯುಕ್ತೆಯಾದ ಕೆಎಎಸ್ ಅಧಿಕಾರಿ ರೇಷ್ಮಾ ತಾಳಿಕೋಟೆ ಅವರು ವರ್ಗಾವಣೆ ಹೊಂದಿದ್ದು, ಖಾಲಿಯಾಗಿರುವ ಸ್ಥಾನಕ್ಕೆ ಬಿಮ್ಸ್ ನ ಮುಖ್ಯ ಆಡಳಿತಾಧಿಕಾರಿಯಾಗಿದ್ದ ಡಾ ಸಿದ್ದಪ್ಪ ಹುಲ್ಲೋಳ್ಳಿ ಅವರನ್ನು ನಿಯೋಜಿಸಿ ಆದೇಶ ಹೊರಡಿಸಲಾಗಿದೆ..
ರೇಷ್ಮಾ ತಾಳಿಕೋಟೆ ಅವರು ಪಾಲಿಕೆಯ ಕಂದಾಯ ವಿಭಾಗದಲ್ಲಿ ಅನೇಕ ಬದಲಾವಣೆ ತಂದು, ತೆರಿಗೆ ಹೆಚ್ಚಿಸುವ ನಿಟ್ಟಿನಲ್ಲಿ ತುಂಬಾ ಒಳ್ಳೆಯ ಕಾರ್ಯ ಮಾಡಿದ್ದು, ಒತ್ತುವರಿ ಮಾಡಿಕೊಂಡ ಪಾಲಿಕೆಯ ಆಸ್ತಿಗಳಿಗೆ ನೋಟಿಸ್ ಕೂಡಾ ನೀಡಿದ್ದು, ಬಹಳ ವರ್ಷಗಳಿಂದ ಬಾಕಿ ಉಳಿಸಿಕೊಂಡ ಬ್ರಹತ್ ಮೊತ್ತಗಳ ತೆರಿಗೆ ಸಂಗ್ರಹದಲ್ಲಿ ಯಶಸ್ವಿಯಾಗಿದ್ದರು.
ಈಗ ಪಾಲಿಕೆಯಿಂದ ವರ್ಗಾವಣೆ ಆಗಿರುವ ರೇಷ್ಮಾ ತಾಳಿಕೋಟೆ ಅವರು ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಬಿಮ್ಸ್) ಮುಖ್ಯ ಆಡಳಿತಾಧಿಕಾರಿಯಾಗಿ ನಿಯೋಜನೆಗೊಂಡಿದ್ದಾರೆ.
ವರದಿ ಪ್ರಕಾಶ ಬಿ ಕೆ..