ಪಾಲಿಕೆ ನೌಕರರ ಕೋ ಆಫ್ ಕ್ರೆಡಿಟ್ ಸೊಸೈಟಿಯ ಚುನಾವಣೆ..
ಮತದಾರರನ್ನು ಸೆಳೆಯಲು ಬಿರುಸಿನ ಪ್ರಚಾರದಲ್ಲಿ ನಿರತರಾದ ಅಭ್ಯರ್ಥಿಗಳು..
ಬೆಳಗಾವಿ : ಇದೇ ರವಿವಾರ ದಿನಾಂಕ 17/08/2025ರಂದು ಬೆಳಗಾವಿ ಮಹಾನಗರ ಪಾಲಿಕೆ ನೌಕರರ ಕೋ ಆಫ್ ಕ್ರೆಡಿಟ್ ಸೊಸೈಟಿಯ ಐದು ವರ್ಷಗಳ ಕಾಲಾವದಿಗಾಗಿ ಚುನಾವಣೆ ನಡೆಯುತ್ತಿದ್ದು, ಅಭ್ಯರ್ಥಿಗಳು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.

ಈ ಚುನಾವಣೆಯಲ್ಲಿ ಪಾಲಿಕೆಯ ಸಿಬ್ಬಂದಿಗಳ ಎರಡು ಬಣವಾಗಿದ್ದು, ತಮ್ಮ ಬಣದ ಗೆಲುವಿಗಾಗಿ, ಅಭ್ಯರ್ಥಿಗಳು ವಿಶೇಷ ಸಭೆಗಳು, ತಂತ್ರಗಳು ಹಾಗೂ ಉಪಾಯಗಳನ್ನು ಮಾಡುತ್ತಿರುವ ಸನ್ನಿವೇಶ ಸಾಮಾನ್ಯವಾಗಿದೆ.

ಇಂದು ಗುರುವಾರ ಚುನಾವಣಾ ಕಣದಲ್ಲಿದ್ದ ಅಭ್ಯರ್ಥಿಗಳು, ಪಾಲಿಕೆಯ ಮುಖ್ಯ ಕಚೇರಿಯ ವಿವಿಧ ವಿಭಾಗಗಳಿಗೆ ತೆರಳಿ ತಮ್ಮ ಪರವಾಗಿ ಮತ ಚಲಾವಣೆ ಮಾಡುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಪಾಲಿಕೆಯ ಆಡಳಿತ, ಕಂದಾಯ, ಲೆಕ್ಕಪತ್ರ, ಆರೋಗ್ಯ, ಅಭಿವೃದ್ಧಿ, ಆಶ್ರಯ ಮುಂತಾದ ವಿಭಾಗಗಳಿಗೆ ತೆರಳಿ ಅಲ್ಲಿರುವ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಮನವರಿಕೆ ಮಾಡಿ, ರವಿವಾರದ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಕೇಳಿಕೊಂಡಿದ್ದಾರೆ.

ಮಧ್ಯಾಹ್ನದ ನಂತರ ಪಾಲಿಕೆಯ ವಿವಿಧ ಶಾಖೆಗಳಾದ ಬೆಳಗಾವಿ ಉತ್ತರದ ಅಶೋಕ ನಗರ, ದಕ್ಷಿಣದ ಗೋವಾವೆಸ್, ಮಧ್ಯದ ಕೋಣವಾಳ ಗಲ್ಲಿ ಹಾಗೂ ರಿಶೀಲ್ದಾರ ಗಲ್ಲಿಗೆ ತೆರಳಿ ಮತಯಾಚನೆ ಮಾಡುವ ಯೋಜನೆ ಮಾಡಿಕೊಂಡಿದ್ದು, ಎರಡೂ ಬಣಗಳು ಗೆಲುವಿಗಾಗಿ ಸಕಲ ಪ್ರಯತ್ನಗಳನ್ನು ಮಾಡುತ್ತಿದ್ದು, ವಿಜಯಮಾಲೆ ಯಾರ ಕೊರಳಿಗೆ ಬೀಳಲಿದೆ ಎಂದು ಕಾದು ನೋಡಬೇಕು..

ವರದಿ ಪ್ರಕಾಶ್ ಬಸಪ್ಪ ಕುರಗುಂದ..