ಪಾಲಿಕೆ ನೌಕರರ ಕೋ ಆಫ್ ಕ್ರೆಡಿಟ್ ಸೊಸೈಟಿ ಚುನಾವಣೆಯ ಅಚ್ಚರಿಯ ಫಲಿತಾಂಶ..

ಪಾಲಿಕೆ ನೌಕರರ ಕೋ ಆಫ್ ಕ್ರೆಡಿಟ್ ಸೊಸೈಟಿ ಚುನಾವಣೆಯ ಅಚ್ಚರಿಯ ಫಲಿತಾಂಶ..

ಕುತೂಹಲ ಮೂಡಿಸಿ, ಕೊನೆಯಲ್ಲಿ ಒನಸೈಡ್ ಆದ ರಿಸಲ್ಟ್..

ಒಂದು ಬಣದಲ್ಲಿ 9, ಮತ್ತೊಂದರಲ್ಲಿ 2, ಸ್ವತಂತ್ರ ಅಭ್ಯರ್ಥಿ 1 ಗೆಲುವು..

ಬೆಳಗಾವಿ : ರವಿವಾರ ದಿನಾಂಕ 17/08/2025ರಂದು ಬೆಳಗಾವಿ ಮಹಾನಗರ ಪಾಲಿಕೆ ನೌಕರರ ಕೋ ಆಫ್ ಕ್ರೆಡಿಟ್ ಸೊಸೈಟಿಯ ಚುನಾವಣೆ ನಡೆದಿದ್ದು, ಇಂದೇ ಸಂಜೆ 6-30ಕ್ಕೆ ಚುನಾವಣಾ ಫಲಿತಾಂಶವೂ ಕೂಡಾ ಘೋಷಣೆಯಾಗಿದೆ.

ಬೆಳಿಗ್ಗೆ 9 ಗಂಟೆಯಿಂದ ಸಂಜೆ 4ರ ವರೆಗೆ ಮತದಾನ ನಡೆದಿದ್ದು, ಈ ಚುನಾವಣೆಯಲ್ಲಿ ಎರಡು ಬಣಗಳಾಗಿ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದು, ಬೆಳಿಗ್ಗೆಯಿಂದ ಮತದಾರರನ್ನು ಸೆಳೆಯಲು ಹಲವು ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದರು, ತೀವ್ರ ಕುತೂಹಲ ಮೂಡಿಸಿದ್ದ, ಜಿದ್ದಾಜಿದ್ದಿನ ಈ ಚುನಾವಣೆ ಫಲಿತಾಂಶದಲ್ಲಿ ಕೊನೆಗೂ ಒಂದು ಬಣ ಬಹುಮತದ ಜಯಭೇರಿ ಬಾರಿಸಿ, ವಿಜಯಮಾಲೆ ತೊಟ್ಟಿದೆ..

ಸಾಮಾನ್ಯ ವರ್ಗದಲ್ಲಿ ಆರು ಸ್ಥಾನಗಳ ಪರವಾಗಿ ಒಂದು ಬಣದ ನಾಲ್ಕು ಅಭ್ಯರ್ಥಿಗಳು ಚುನಾಯಿತರಾದರು ಮತ್ತೊಂದು ಬಣದ ಒಬ್ಬ ಅಭ್ಯರ್ಥಿ ಹಾಗೂ ಒಬ್ಬ ಸ್ವತಂತ್ರ ಅಭ್ಯರ್ಥಿ ಜಯಭೇರಿ ಸಾಧಿಸಿದ್ದಾರೆ, ಮಹಿಳಾ ವರ್ಗದಲ್ಲಿ ಎರಡು ಸ್ಥಾನಗಳ ಪೈಕಿ, ಎರಡೂ ಬಣಗಳು ತಲಾ ಒಂದರಂತೆ ಸ್ಥಾನಗಳನ್ನು ಪಡೆದಿವೆ, ಇನ್ನು ಪ್ರವರ್ಗ 1ರಲ್ಲಿ ಇರುವ ಒಂದೇ ಸ್ಥಾನವನ್ನು ಒಂದು ಬಣ ಪಡೆದುಕೊಂಡರೆ, ಪರಿಶಿಷ್ಟ ವರ್ಗದ ಒಂದು ಸ್ಥಾನವನ್ನು ಕೂಡಾ ಅದೇ ಬಣ ಪಡೆದುಕೊಂಡಿದೆ.

ಹಿಂದುಳಿದ ಬ ವರ್ಗದ ಒಂದು ಸ್ಥಾನವನ್ನು ಕೂಡಾ ಅದೇ ಒಂದು ಬಣ ಗೆದ್ದುಕೊಂಡಿದ್ದು, ಪರಿಶಿಷ್ಟ ಜಾತಿಯ ಒಂದು ಸ್ಥಾನವನ್ನು ಮೊದಲೇ ಅವಿರೋಧವಾಗಿ ಜಯಿಸಿದ ಅದೇ ಬಣ, ಒಟ್ಟು 9 ಸ್ಥಾನಗಳನ್ನು ಪಡೆದು ಸೊಸೈಟಿಯ ಆಡಳಿತ ಮಂಡಳಿಯ ಚುಕ್ಕಾಣಿ ಹಿಡಿಯಲು ಬಹುಮತ ಪಡೆದಂತಾಗಿದೆ.

ಇನ್ನೊಂದು ಬಣದ ಇಬ್ಬರು ಅಭ್ಯರ್ಥಿಗಳು ವಿಜಯಿಯಾಗಿದ್ದರೆ, ಸ್ವತಂತ್ರ ಅಭ್ಯರ್ಥಿ ಒಬ್ಬರು ಗೆಲುವಿನ ನಗೆ ಬೀರಿದ್ದಾರೆ, ಒಟ್ಟು ಹನ್ನೆರಡು ಸ್ಥಾನಗಳಲ್ಲಿ ಒಂದು ಬಣದವರು 9 ಸ್ಥಾನ ಗೆದ್ದರೆ, ಮತ್ತೊಂದು ಬಣದವರು 2 ಸ್ಥಾನ ಹಾಗೂ ಸ್ವತಂತ್ರ ಅಭ್ಯರ್ಥಿ 1 ಸ್ಥಾನ ಪಡೆದಿದ್ದಾರೆ.

ಒಟ್ಟು ಚುನಾವಣೆಯಲ್ಲಿ ಅತೀ ಹೆಚ್ಚಿನ ಮತವನ್ನು (150) ಆನಂದ ಪಿಪರೆ ಪಡೆದುಕೊಂಡರೆ, ಕಡಿಮೆ ಮತವನ್ನು (16)ಮೀನಾಕ್ಷಿ ಬಳ್ಳಾರಿ ಪಡೆದುಕೊಂಡಿದ್ದು, ಕಡಿಮೆ ಅಂತರದಲ್ಲಿ ಅಂದರೆ 2 ಮತಗಳ ಅಂತರದಲ್ಲಿ ಸೀತಾ ಕಾಜುಗೋಳ (96 ಮತಗಳು) ತಮ್ಮ ಸಹಪಾಠಿ ಸುವರ್ಣ ಹೂವನ್ನವರ (98 ಮತಗಳು) ಅಂತರದಲ್ಲಿ ಹಿನ್ನೆಡೆ ಅನುಭವಿಸಿದ್ದಾರೆ.

ವರದಿ ಪ್ರಕಾಶ್ ಬಸಪ್ಪ ಕುರಗುಂದ..