ಪಾಲಿಕೆ ಸಭೆಯಲ್ಲಿ ಅಶಿಸ್ತಿನ ವರ್ತನೆಗೆ ಸದಸ್ಯರ ನಡುವೆ ವಾಗ್ವಾದ..

ಪಾಲಿಕೆ ಸಭೆಯಲ್ಲಿ ಅಶಿಸ್ತಿನ ವರ್ತನೆಗೆ ಸದಸ್ಯರ ನಡುವೆ ವಾಗ್ವಾದ..

ಸಭೆಯಲ್ಲಿ ಹೊರಡಿಸಿದ್ದು ಹಲವು ನಿರ್ಣಯಗಳು..

ನಗರದ ಅಭಿವೃದ್ಧಿ ಜೊತೆಗೆ ನಗರವಾಸಿಗಳಿಗೆ ಉಪಯೋಗ ಆಗುವವೇ??

ಬೆಳಗಾವಿ : ಒಂದು ವಿಷಯದ ಕುರಿತಾಗಿ ಪಾಲಿಕೆಯ ಮಹಾಪೌರರು ಅನುಮೋದನೆ ನೀಡಿದ ನಂತರ ಆ ವಿಷಯದ ಕುರಿತಾಗಿ ಪಾಲಿಕೆಯ ಯಾವ ಸದಸ್ಯರೂ ಚರ್ಚೆ ಮಾಡುವ ಹಾಗಿಲ್ಲ, ಅದರ ಬಗ್ಗೆ ಎಲ್ಲರೂ ಮಾತನಾಡಿದರೆ ಸಭೆಯ ಸಮಯ ವ್ಯರ್ಥ ಆಗುತ್ತದೆ, ಒಂದು ವೇಳೆ ಎಲ್ಲರೂ ಮಾತನಾಡುತ್ತಾ ಆಶಿಸ್ತಿನ ವರ್ತನೆ ತೋರಿದ್ದಲ್ಲಿ ಅಂತ ಸದಸ್ಯರನ್ನು ಸಭೆಯಿಂದ ಹೊರಹಾಕುವ ಅಧಿಕಾರ ಮಹಾಪೌರರಿಗೆ ಇದೆ ಎಂದು ಆಡಳಿತ ಪಕ್ಷದ ನಾಯಕರು ಹೇಳಿದ ಮಾತಿಗೆ ನಾಮ ನಿರ್ದೇಶಿತ ಸದಸ್ಯರು ಕೆಂಡಾಮಂಡಲವಾದರು.

ಬುಧವಾರ ದಿನಾಂಕ 12/11/2025 ರಂದು ಬೆಳಗಾವಿ ಪಾಲಿಕೆಯ ಪರಿಷತ್ ಸಭಾ ಭವನದಲ್ಲಿ ಜರುಗಿದ ಪಾಲಿಕೆಯ ಪರಿಷತ್ ಸಭೆಯಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ಸದಸ್ಯರ ನಡುವೆ ಸಭೆಯಲ್ಲಿ ಪಾಲಿಸಬೇಕಾದ ಶಿಸ್ತಿನ ವಿಷಯದ ಬಗ್ಗೆ ವಾದ ವಿವಾದಗಳು ನಡೆದಿದ್ದು, ಸಭೆಯ ಆರಂಭದಲ್ಲಿ ಸಭಾ ಭವನದಲ್ಲಿ ಗೊಂದಲ ಹಾಗೂ ಗಲಾಟೆಯ ವಾತಾವರಣ ಸೃಷ್ಟಿಯಾಗಿತ್ತು.

ಪಾಲಿಕೆಯ ವಿವಿಧ ವಿಭಾಗದಿಂದ 217ಕೋಟಿ ಹಣವನ್ನು ದಾಖಲೆಗಳು ಇಲ್ಲದೇ ಖರ್ಚು ತೋರಿಸಿದ್ದು, ಅದರ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂಬ ವಿಷಯದ ಕುರಿತಾಗಿ, ಜೊತೆಗೆ ಎರಡು ತಿಂಗಳ ಒಳಗಾಗಿ ಇದರ ಸಮಗ್ರ ವರದಿ ನೀಡಬೇಕು ಎಂದು ಪಾಲಿಕೆಯ ಆಡಳಿತ ಪಕ್ಷದ ನಾಯಕ ಹನಮಂತ ಕೊಂಗಾಲಿ ಅಧಿಕಾರಿಗಳಿಗೆ ಸೂಚನೆ ನೀಡಿದಾಗ, ಮಹಾಪೌರಾರು ಕೂಡಾ ಈ ವಿಷಯವನ್ನು ಅನುಮೋದಿಸಿದಾಗ, ನಾಮನಿರ್ದೇಶಿತ ಸದಸ್ಯ ರಮೇಶ ಸೊಂಟಕ್ಕಿ ಮಾತಾಡಲು ಹೋದಾಗ ಮೇಯರ್ ಅವರು ಅನುಮೋದಿಸಿದ ಮೇಲೆ ಆಯಿತು ಅದರ ಮೇಲೆ ಯರು ಚರ್ಚೆ ಮಾಡಬಾರದು ಎಂದು ನಗರ ಸೇವಕ ರವಿ ದೋತ್ರೆ ಅವರು ಹೇಳಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ರಮೇಶ್ ಸೊಂಟಕ್ಕಿ ಅವರು, ಇದು ನನಗೆ ಮಾತ್ರ ಅಲ್ಲಾ ಎಲ್ಲರಿಗೂ ಅನ್ವಯಿಸಬೇಕು, ಇನ್ನು ಮೇಲೆ ಮೇಯರ್ ಅವರು ನಿರ್ಣಯ ಹೊರಡಿಸಿದ ವಿಷಯಗಳ ಮೇಲೆ ಸಭೆಯಲ್ಲಿ ಯಾರು ಮಾತನಾಡಬಾರದು ಎಂದಾಗ, ಆಡಳಿತ ಪಕ್ಷದ ಸದಸ್ಯರು ಮಾತಿಗೆ ಮಾತು ಬೆಳಸಿದರು, ಅದಕ್ಕೆ ವಿರೋಧ ಪಕ್ಷದ ಸದಸ್ಯರು ಹಾಗೂ ನಾಮನಿರ್ದೇಶಿತ ಸದಸ್ಯರು ವಾಗ್ವಾದಕ್ಕೆ ಇಳಿದಾಗ ಸಭೆಯಲ್ಲಿ ಕೆಲಕಾಲ ಗೊಂದಲದ ವಾತಾವರಣವೇ ನಿರ್ಮಾಣವಾಗಿತ್ತು, ಈ ವೇಳೆ ಮಾತನಾಡಿದ ಆಡಳಿತ ಪಕ್ಷದ ನಾಯಕರು, ಎಲ್ಲರೂ ಒಮ್ಮೆಲೇ ನಿಂತು ಮಾತನಾಡುವದು ಹಾಗೂ ಸಭೆಯಲ್ಲಿ ಆಶಿಸ್ತು ತೋರುವ ಸದಸ್ಯರನ್ನು ಹೊರಹಾಕುವ ಅಧಿಕಾರವನ್ನು ಮಹಾಪೌರಾರು ಹೊಂದಿದ್ದಾರೆ ಎಂದಾಗ, ವಿರೋಧ ಪಕ್ಷದ ಸದಸ್ಯರು ನಮಗೆ ಮತದಾನ ಮಾಡುವ ಹಕ್ಕು ಮಾತ್ರ ಇಲ್ಲಾ ಆದರೆ ಉಳಿದ ಎಲ್ಲಾ ನಿರ್ಣಯಗಳನ್ನು ತಗೆದುಕೊಳ್ಳುವ ಹಕ್ಕು ಇದೆ ಎಂದು ವಾದಕ್ಕೆ ಇಳಿದರು.

ಜೋರಾದ ಗಲಾಟೆಯ ಮಧ್ಯಪ್ರವೇಶ ಮಾಡಿದ ಮಹಾಪೌರರು ಹೀಗೆ ಗಲಾಟೆ ಮಾಡಿ ಎಲ್ಲರ ಸಮಯ ವ್ಯರ್ಥ ಮಾಡಬೇಡಿ, ಮಾತನಾಡಲು ಮೊದಲು ಸಮಯ ಕೇಳಿ, ನಾವು ಸಮಯ ನೀಡಿದಾಗ ಮಾತ್ರ ಮಾತನಾಡಿ, ಇಲ್ಲಾಂದ್ರೆ ನಾನು ಯಾರಿಗೂ ಮಾತನಾಡಲು ಕೊಡುವದಿಲ್ಲ ಎಂದು ಖಡಕ್ಕಾಗಿ ಹೇಳಿದಾಗ ಸಭೆ ಶಾಂತ ರೂಪಕ್ಕೆ ಮರಳಿತು..

ನಂತರ ಹನುಮಾನ ನಗರದ ನಗರ ಸೇವಕ ಸಂದೀಪ್ ಜಿರಾಗ್ಯಾಳ ಮಾತನಾಡಿ, ಬೆಳಗಾವಿ ನಗರದಲ್ಲಿ ವಾಹನಗಳ ಸಂಖ್ಯೆ ಜಾಸ್ತಿಯಾಗಿದೆ, ಸಂಚಾರ ದಟ್ಟನೆ ವಿಪರೀತವಾಗಿದೆ, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಎಲ್ಲೆಂದರಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸುವದರಿಂದ, ಪಾದಚಾರಿ ಸ್ಥಳಗಳಲ್ಲಿ ವಾಹನ ನಿಲುಗಡೆಯಿಂದ, ಪಾದಚಾರಿ ಸ್ಥಳಗಳನ್ನು ಅತೀಕ್ರಮಣ ಮಾಡಿದ್ದರಿಂದ, ರಸ್ತೆ ವಿಭಾಗಕಗಳನ್ನು ಅವೈಜ್ಞಾನಿಕವಾಗಿ ಬಿಡುವದು, ದಿನದಿಂದ ದಿನಕ್ಕೆ ಜನಸಂಖ್ಯೆ ಜೊತೆಗೆ ವಾಹನಗಳ ಸಂಖ್ಯೆಗಳು ಹೆಚ್ಚಾಗುತ್ತಿರುವದರಿಂದ ಅನಾಹುತ ಅಪಘಾತಗಳು ಬಹಳ ಆಗುತ್ತಿವೆ, ಇದರ ಕುರಿತಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡು ನಗರವಾಸಿಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಬೇಕು ಎಂದರು.

ಇದಕ್ಕೆ ಧ್ವನಿಗೂಡಿಸಿದ ಇನ್ನೂ ಕೆಲ ನಗರ ಸೇವಕರು ತಮ್ಮ ವಾರ್ಡಿನಲ್ಲಿರುವ ಟ್ರಾಫಿಕ್ ಹಾಗೂ ಪಾರ್ಕಿಂಗ ಕಿರಿಕಿರಿಯ ಬಗ್ಗೆ ಹಾಗೂ ಅದರ ಪರಿಹಾರೊಪಾಯಗಳ ಬಗ್ಗೆ ಪ್ರಶ್ನೆ ಮಾಡಿದಾಗ, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಹಾಗೂ ನಗರ ಸೇವಕರ ಸಮ್ಮುಖದಲ್ಲಿ ಸಮಸ್ಯೆ ಇರುವ ಸ್ಥಳಗಳಿಗೆ ತೆರಳಿ, ಸಮಸ್ಯೆ ನಿವಾರಣೆ ಮಾಡೋಣ ಜೊತೆಗೆ ಒಂದು ವಿಶೇಷ ಸಭೆ ಕೂಡಾ ಮಾಡೋಣ ಎಂಬ ಸಲಹೆ ನೀಡಿದರು.

ನಗರ ಸೇವಕ ನಿತಿನ್ ಜಾಧವ ಅವರು ಮಾತನಾಡಿ, ಪುಟ್ ಪಾತ್ ಮೇಲೆ ನಿಲ್ಲಿಸುವ ವ್ಯಾಪಾರಿ ಗಾಡಿಗಳನ್ನು ತೆರವು ಗೊಳಿಸಲು ಎಷ್ಟೇ ಹೇಳಿದರೂ ಅಧಿಕಾರಿಗಳು ಸ್ಪಂದನೆ ನೀಡುತ್ತಿಲ್ಲ, ಇದು ನಮಗೆ ಬರುವದಿಲ್ಲ ಅವರಿಗೆ ಬರುವದು ಎಂದು ಹೇಳಿ ಜವಾಬ್ದಾರಿಯಿಂದ ನುನುಚಿಕೊಳ್ಳುವರು ಎಂದಾಗ ಇದಕ್ಕೆ ಧ್ವನಿಗೂಡಿಸಿದ ನಗರ ಸೇವಕ ಶಾಯಿದ್ ಪಟಾನ ಅವರು ಮಾತನಾಡಿ, ಮಹಾಪೌರರೇ ತಾವು ಒಂದು ನಿರ್ಣಾಯವನ್ನು ಪಾಸ ಮಾಡಿ, ನಗರದಲ್ಲಿ ಇರುವ ಶಾಲೆ ಕಾಲೇಜು ಆಸ್ಪತ್ರೆ ವಾಣಿಜ್ಯ ಮಳಿಗೆಗಳು ಅವರದ್ದೇ ಆದ ನಿಲ್ದಾಣ ವ್ಯವಸ್ಥೆ ಮಾಡಿಕೊಂಡಿರಬೇಕು, ಹೊರಗಡೆ ಪಾರ್ಕಿಂಗ ಮಾಡಿದರೆ, ಮಹಾನಗರ ಪಾಲಿಕೆಗೆ ಪಾರ್ಕಿಂಗ ತೆರಿಗೆ ತುಂಬಬೇಕು ಎಂಬ ಎಂಬ ನಿರ್ಣಯ ಹೊರಡಿಸಿ ಎಂದರು.

ಇನ್ನು ನಗರದ ಮುಖ್ಯ ಸ್ಥಳಗಲ್ಲಿ ಹಾಕಿರುವ ಜಾಹಿರಾತು ಫಲಕ, ಹೊಲ್ಡಿಂಗ್, ಕಟೌಟ್ ಇವುಗಳ ಬಗ್ಗೆ ತೀವ್ರ ಚರ್ಚೆ ನಡೆದು, ಅವುಗಳ ಹಾಕುವಿಕೆ, ತೆರವು ಗೊಳಿಸುವಿಕೆ, ದರಗಳು, ದಂಡಗಳು ಮುಂತಾದವುಗಳ ಬಗ್ಗೆ ನಗರ ಸೇವಕರು ಹಲವಾರು ಸಲಹೆ ಸೂಚನೆ ನೀಡಿದರು..

ಸಭೆಯಲ್ಲಿ ನಗರದ ಅಭಿವೃದ್ಧಿ ಹಾಗೂ ಪಾಲಿಕೆಗೆ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಇನ್ನೂ ಹಲವಾರು ವಿಷಯಗಳ ಚರ್ಚೆ ಹಾಗೂ ನಿರ್ಧಾರಗಳನ್ನು ತಗೆದುಕೊಂಡಿದ್ದು, ನಗರದಲ್ಲಿ ಸೇವೆಯಿಂದ ಸ್ಥಗಿತವಾಗಿರುವ ಬ್ರಹತ್ ರಸ್ತೆಗಳನ್ನು ಪ್ರಾರಂಭ ಮಾಡುವ, ಕೆಲ ರಸ್ತೆಗಳಿಗೆ ಸಮಾಜ ಸೇವಕರ ಹೆಸರಿಡುವ, ಬೀದಿ ನಾಯಿಗಳ ಸಂರಕ್ಷಣಾ ಕೇಂದ್ರಗಳ ಪ್ರಾರಂಭ, ನಗರ ಸ್ವಚ್ಛತೆಗೆ ಬೇಕಾದ ಸಿಬ್ಬಂದಿ ಹಾಗೂ ಸಲಕರಣೆಗಳ ಪೂರೈಕೆಯ ವಿಷಯದ ಪ್ರಸ್ತಾಪ ಹೀಗೆ ವಿವಿಧ ವಿಷಯಗಳ ಚರ್ಚೆ ಆಗಿದ್ದು, ಇವು ನಗರವಾಸಿಗಳಿಗೆ ಎಷ್ಟರ ಮಟ್ಟಿಗೆ ಉಪಯೋಗ ಆಗುತ್ತವೆ, ನಗರದ ಸುಧಾರಣೆ ಯಾವ ಮಟ್ಟದಲ್ಲಿ ಆಗುತ್ತದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯುತ್ತದೆ..

ವರದಿ ಪ್ರಕಾಶ ಬಿ ಕುರಗುಂದ..