ಪಿಎಸ್ಆರ್ ಮಾನವ ಹಕ್ಕುಗಳ ರಕ್ಷಣಾ ಆಯೋಗದ ಮೊದಲನೇ ವರ್ಷಾಚರಣೆ ಕಾರ್ಯಕ್ರಮ..
ಆಯೋಗದ ರುಪುರೇಷಗಳ ಬಗ್ಗೆ ಚರ್ಚೆ ಮತ್ತು ನಿರ್ಣಯ..
ಬೆಳಗಾವಿ :ದಿನಾಂಕ 16/08/2024ರ ಶುಕ್ರವಾರದಂದು ಪಿಎಸ್ಆರ್ ಮಾನವ ಹಕ್ಕುಗಳ ರಕ್ಷಣಾ ಆಯೋಗದ ಮೊದಲನೇ ವರ್ಷಾಚರಣೆ ಕಾರ್ಯಕ್ರಮವನ್ನು ಬೆಳಗಾವಿ ನಗರದ ನಿರೀಕ್ಷಿನಾ ಮಂದಿರದಲ್ಲಿ ನಡೆಸಲಾಗಿದೆ.
ಈ ಸಂದರ್ಭದಲ್ಲಿ ರಾಷ್ಟ್ರೀಯ ಅಧ್ಯಕ್ಷರಾದ ಪ್ರಶಾಂತಸಿಂಗ ರಜಪೂತ ಅವರು ಈ ಆಯೋಗವು ನಡೆದು ಬಂದ ದಾರಿಯ ಕುರಿತು ವಿವರಿಸಿದರು, ಮುಂದೆ ಹೇಗೆ ಬೆಳಿಸಿಕೊಂಡು ಹೋಗಬೇಕು ಎಂದು ತಿಳಿಸಿಕೊಟ್ಟರು.

ಈ ಕಾರ್ಯಕ್ರಮದಲ್ಲಿ ಪಿಎಸ್ಆರ್ ಮಾನವ ಹಕ್ಕುಗಳ ರಕ್ಷಣಾ ಆಯೋಗದ ನಿರ್ದೇಶಕರಾದ ಶೀತಲ ಸನದಿ, ಆಡಳಿತಾಧಿಕಾರಿ ಅಭಿಜಿತ್ ಸಾರವಾನ, ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಉತ್ತಮ ಕಮತೆ, ರಾಜ್ಯಾಧ್ಯಕ್ಷರು ಪರಶುರಾಮ ಕಾಂಬಳೆ, ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ಜಯಶ್ರೀ, ಬೆಳಗಾವಿ ಜಿಲ್ಲೆಯ ಅದ್ಯಕ್ಷರಾದ ಮಲ್ಲಿಕಾರ್ಜುನ ಹಿಪ್ಪರಗಿ, ಜಿಲ್ಲಾ ಕಾರ್ಯಾಧ್ಯಕ್ಷರಾದ ಆಸೀಫ್ ಯಲಿಗಾರ, ಬೆಳಗಾವಿ ನಗರ ಅಧ್ಯಕ್ಷರಾದ ಸಂತೋಷ ಕುಂದರಗಿ ಮುಂತಾದವರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದ ಆಯೋಜಕರಾಗಿ ನಗರ ಉಪಾಧ್ಯಕ್ಷರು ಪರಶುರಾಮ ಮಾತಂಗ, ಕಾರ್ಯದರ್ಶಿಗಳಾದ ಮಲಿಕಜಾನ ಗದಗಿನ, ಉಪಕಾರ್ಯದರ್ಶಿ ನಿಯಾಜ ಅಹಮದ ಗದಗಿನ, ಸದಸ್ಯರಾದ ಸಂಗಮೇಶ ಕೇಸ್ತಿ, ಕಿಶೋರ ಮಾಳಗಿಮನಿ, ಜಗದೀಶ ಗಸ್ತಿ, ಸಂತೋಷ ಚಿಗರೆ, ಶೇಖರ, ಯುಸೂಫ್, ಪ್ರತಾಪ, ಶಿವು, ಇಮ್ರಾನ್ ಮುಂತಾದವರು ಪಾಲ್ಗೊಂಡಿದ್ದರು.
ವರದಿ ಪ್ರಕಾಶ ಬಸಪ್ಪ ಕುರಗುಂದ..