ಪುನೀತರ 4ನೇ ಪುಣ್ಯಸ್ಮರಣೆ..
ಅಭಿಮಾನಿಗಳ ಮನದಲ್ಲಿ ಅಪ್ಪು ಅಜರಾಮರ..
ಬೆಳಗಾವಿ : ಅಕ್ಟೋಬರ್ 29 ಯಾಕಾದರು ಬರುತ್ತೋ ಎನ್ನುವ ಕೆಲ ಕನ್ನಡದ ಮನಸ್ಸುಗಳಲ್ಲಿ ಸಹಿಸಿಕೊಳ್ಳಲಾರದ ದುಃಖ ಉಂಟಾಗಿ, ಕಣ್ತುಂಬ ನೀರಾಗಿ, ತಮ್ಮ ಪಾಲಿಗೆ ಇದೊಂದು ಕರಾಳ ದಿನವೆಂದು ತಿಳಿದು, ತಮ್ಮ ನೆಚ್ಚಿನ ಹೃದಯವಂತ ನಾಯಕನನ್ನು ನೆನೆಯುತ್ತ, ಆ ಮಾನವೀಯತೆಯ ಮೇರುಪರ್ವತಕ್ಕೆ ಭಾವಪೂರ್ಣ ಶೃದ್ದಾಂಜಲಿ ಸಲ್ಲಿಸುವರು.
ಕನ್ನಡದ ಪರೋಪಕಾರಿ, ಮಗುವಿನ ಮನಸ್ಸಿನ ನಾಯಕ ಪುನೀತ್ ರಾಜಕುಮಾರ ನಮ್ಮನ್ನಗಲಿ ಈಗ ನಾಲ್ಕು ವರ್ಷಗಳಾದರೂ ಇಂದಿಗೂ, ಎಂದಿಗೂ ಅವರ ನೆನಪು ಕನ್ನಡಿಗರಲ್ಲಿ ಹಸಿರಾಗಿಯೇ ಇರುತ್ತದೆ ಎಂದು ಅವರನ್ನು ಪ್ರೀತಿಸುವ ಹೃದಯಗಳ ಮಿಡಿತ..
ಇಂದು ಅವರ ನಾಲ್ಕನೇ ಪುಣ್ಯಸ್ಮರಣೆ ಇರುವ ಕಾರಣ, ನಿನ್ನೆ ಸಂಜೆ ನಗರದ ಕೋರ್ಟ್ ಕಂಪೌಂಡ ಹತ್ತಿರ ಅವರ ಒಬ್ಬ ಅಭಿಮಾನಿ ಹಾಗೆ ಚಹಾ ಕುಡಿಯುವ ಸಮಯದಲ್ಲಿ ಭೇಟಿ ಆಗಿ, ಪುನೀತರ ಕುರಿತಾಗಿ ಕೆಲ ಮಾತು ಆಡಿದರು..
ಒಳ್ಳೆಯವರಿಗೆ ಕಾಲವಿಲ್ಲ ಎನ್ನುವದು ನಾವೆಲ್ಲರೂ ಪ್ರತಿ ದಿನವೂ ಮಾತನಾಡುವ ಮಾತು, ಒಳ್ಳೆಯವರನ್ನು ಕಂಡರೆ ದೇವರಿಗೂ ಪ್ರೀತಿ ಅಂತ ನಾವು ಮಾತಾಡ್ತೀವಿ, ಒಪ್ಪಿಕೊಳ್ಳಲಾಗದ ಸತ್ಯವನ್ನು ಅರಗಿಸಿಕೊಳ್ಳಲಾಗದೇ ನಮ್ಮದೇ ಮನಸ್ಸನ್ನು ಸಂತೈಸಲಾಗದ ಅನಿವಾರ್ಯತೆಗಾಗಿ ಹಾಗೂ ಸಮಾಧಾನದ ಪ್ರಯತ್ನಕ್ಕಾಗಿ ಏನೇನೋ ಮಾಡುತ್ತೇವೆ ಎಂದು ತಮ್ಮ ಸಂಕಟವನ್ನು ವ್ಯಕ್ತಡಿಸಿದ್ದು.
ಅಪ್ಪು ಸಾರ್, ನೀವು ಮೂಡಿಸಿದ ಹೆಜ್ಜೆ ಗುರುತು ಇಲ್ಲಿ ಎಂದಿಗೂ ಶಾಶ್ವತ, ನೀವು ಬಹಳಷ್ಟು ಆಯಾಮಗಳಲ್ಲಿ ನಮ್ಮಲ್ಲಿ ಜಿರಂಜೀವಿ ಆಗಿರುವಿರಿ, ನಿವು ಮೂಡಿಸಿದ್ದು ಕೇವಲ ಹೆಜ್ಜೆ ಗುರುತುಗಳಲ್ಲ ಅವು ನಾಳೆಯ ದಿಕ್ಸುಚಿ, ನಿಮ್ಮ ಹೆಸರು ನಿಮ್ಮ ವ್ಯಕ್ತಿತ್ವ, ನಿಮ್ಮ ಕಾರ್ಯಗಳು ನಮ್ಮೊಂದಿಗೆ ಸದಾ ನೀವಿರುವಂತೆ ಮಾಡಿವೆ..
ಅಪ್ಪು ಅಜರಾಮರ, ಅಜರಾಮರ...