ಪೃಥ್ವಿ ಸಿಂಗ್ ಎಂಬ ವ್ಯಕ್ತಿ ಸುಳ್ಳು ಆರೋಪ ಮಾಡಿದ್ದಾನೆ..
ತನಿಖೆಯಿಂದ ಎಲ್ಲಾ ಹೊರಬರಲಿ..
ಚನ್ನಾರಾಜ್ ಹಟ್ಟಿಹೊಳಿ ಪ್ರತಿಕ್ರಿಯೆ..
ಪೊಲೀಸ್ ತನಿಖೆಗೆ ಎರಡ್ಮೂರು ದಿನ ಬೇಕಾಗುತ್ತೆ, ಕಾದು ನೋಡಬೇಕು..!!!
ಉಸ್ತುವಾರಿ ಸಚಿವರ ಪ್ರತಿಕ್ರಿಯೆ..
ಬೆಳಗಾವಿ : ನಿನ್ನೆ ಬೆಳಗಾವಿಯ ಬಿಜೆಪಿ ಎಸ್ಸಿ ಮೋರ್ಚಾ ಕಾರ್ಯಕರ್ತ ಪೃಥ್ವಿ ಸಿಂಗ್ ಎಂಬುವರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪಕ್ಕೆ ಇಂದು ಸುವರ್ಣ ವಿಧಾನ ಸೌಧದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಎಮ್ಎಲ್ಸಿ ಚನ್ನರಾಜ್ ಹಟ್ಟಿಹೊಳಿ ಅವರು ಇದೊಂದು ಸುಳ್ಳು ಆರೋಪ, ಸ್ಪಷ್ಟ ತನಿಖೆ ನಡೆದು ಎಲ್ಲಾ ಜನರಿಗೂ ನಿಜ ಅರ್ಥ ಆಗಬೇಕು ಎಂದಿದ್ದಾರೆ..
ನಿನ್ನೆ ನನ್ನ ಸಹಚರರು ಅಲ್ಲಿಗೆ ಹೋಗಿದ್ದು ನಿಜ, ಅವನೇ ಕರೆದು ಡಾಕ್ಯುಮೆಂಟ್ಸ್ ಕೊಡುತ್ತೇನೆ ಎಂದಿದ್ದು ನಿಜ, ಅವರನ್ನು ಕರೆಸಿ, ವಾಪಸ್ಸು ಕಳಿಸಿ, ಈ ಸೀನ್ ಕ್ರಿಯೇಟ್ ಮಾಡಿದ್ದಾನೆ, ಇದು ಸಣ್ಣ ವಿಷಯ ಅಲ್ಲಾ, ನಾನೇ ತನಿಖೆಗೆ ಆಗ್ರಹ ಮಾಡುತ್ತೇನೆ ಎಂದರು..

ತನಿಖೆಯಲ್ಲಿ ಯಾರೂ ಮಾಡಿದ್ದಾರೆ, ಏಕೆ ಮಾಡಿದ್ದಾರೆ, ಅಥವಾ ಅವನೇ ಇದೆಲ್ಲಾ ನಾಟಕ ಮಾಡಿದ್ದನೆಯೆ ಎಂಬ ಎಲ್ಲಾ ಸತ್ಯಗಳು ಹೊರ ಬರುತ್ತವೆ, ಸಿಸಿ ಟಿವಿ ವಿಡಿಯೋದಲ್ಲಿ ರೆಡ್ ಟೀಶರ್ಟ್ ಹಾಕಿದ್ದಾನೆ, ಆದರೆ ಒಳಗೆ ಹೋಗಿ ವಿಡಿಯೋ ಮಾಡುವಾಗ ಬಿಳಿ ಅಂಗಿ ಹಾಕಿದ್ದಾನೆ, ತೋಳಿಗೆ ಗಾಯ ಆಗಿದೆ ಆದರೆ ಶರ್ಟಿಗೆ ಏನೂ ಆಗಿಲ್ಲ, ಇದೆಲ್ಲಾ ತನಿಖೆಯಲ್ಲಿ ತಿಳಿಯುತ್ತದೆ.
ಯಾರಾದರೂ ಹಲ್ಲೆ ಮಾಡಲಿಕ್ಕೆ ಆಪ್ತ ಸಹಾಯಕರನ್ನು ಕಳಿಸ್ತಾರ? ಒಂದು ಗಂಟೆಯಲ್ಲಿ ಅವನು ಏನು ಸೃಷ್ಟಿ ಮಾಡಿದ್ದಾನೆ ಏಕೆ ಮಾಡಿದ್ದಾನೆ ತನಿಖೆ ಮೂಲಕ ಗೊತ್ತಾಗುತ್ತದೆ ಎಂದರು..

ಹಲ್ಲೆಯ ವಿಷಯವಾಗಿ ಪ್ರತಿಕ್ರಿಯೆ ನೀಡಿದ ಉಸ್ತುವಾರಿ ಸಚಿವರು, ಎರಡೂ ಕಡೆಯಿಂದ ಹೇಳಿಕೆಗಳು ಬಂದಿದ್ದು, ತನಿಖೆ ಮಾಡಲಿಕ್ಕೆ ಪೊಲೀಸ್ ಇಲಾಖೆಗೆ ಎರಡ್ಮೂರು ದಿನ ಬೇಕಾಗುತ್ತೆ, ತನಿಖೆ ಆದ ನಂತರ ಯಾರದು ತಪ್ಪು ಅಂತ ತಿಳಿಯುತ್ತದೆ, ಕಾದು ನೋಡಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ..
ವರದಿ ಪ್ರಕಾಶ ಕುರಗುಂದ..