ಪೌರಕಾರ್ಮಿಕರಿಗೆ ಗೌರವಿಸಿ, ತ್ರಿವೇಣಿ ಸಂಗಮದ ಗಂಗಾಜಲ ವಿತರಣೆ..
ಪೌರ ಕಾರ್ಮಿಕರು ನಿಜವಾದ ದೇವರು..
ಶಿವಾಪುರದ ಕಾಡಸಿದ್ದೇಶ್ವರ ಸ್ವಾಮೀಜಿ..
ಬೆಳಗಾವಿ : ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ಇತ್ತೀಚೆಗೆ ನಡೆದ ಮಹಾಕುಂಭ ಮೇಳದಲ್ಲಿ ಪುಣ್ಯಸ್ನಾನ ಮಾಡಿ ಬಂದ ಭಕ್ತರು, ಪೌರಕಾರ್ಮಿಕರನ್ನು ಸನ್ಮಾನಿಸಿದ್ದಲ್ಲದೇ, ತ್ರಿವೇಣಿ ಸಂಗಮದ ಗಂಗಾಜಲವನ್ನು ವಿತರಿಸಿದ್ದು ವಿಶೇಷವಾಗಿತ್ತು.
ನಗರದ ವಿಶ್ವ ಹಿಂದೂ ಪರಿಷತ್ ಕಾರ್ಯಾಲಯ ಸಮರಸತಾ ಭವನದಲ್ಲಿ ಶನಿವಾರ ವಿಶ್ವ ಹಿಂದೂ ಪರಿಷತ್ ಮತ್ತು ನಗರ ಸೇವಕರ ಸಹಯೋಗದಲ್ಲಿ ನಡೆದ ಈ ಅವಿಸ್ಮರಣೀಯ ಕಾರ್ಯಕ್ರಮ ನಿಜಕ್ಕೂ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಯಿತು.
ಮಹಾ ಕುಂಭ ಮೇಳಕ್ಕೆ ಹೋಗಲು ಆಗದೇ ಇರುವ ಸುಮಾರು 200ಕ್ಕೂ ಹೆಚ್ಚು ಪೌರಕಾರ್ಮಿಕರನ್ನು ಆತ್ಮೀಯವಾಗಿ ಗೌರವಿಸಲಾಯಿತು.
ದಿವ್ಯ ಸಾನಿದ್ಯ ವಹಿಸಿದ್ದ ಶಿವಾಪುರದ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ನಿಜವಾದ ದೇವರು ಪೌರಕಾರ್ಮಿಕರು ಎಂಬದನ್ನು 12ನೇ ಶತಮಾನದಲ್ಲಿ ಬಸವಣ್ಣನವರು ಗುರುತಿಸಿದ್ದಾರೆ. ಈಗ ವಿಶ್ವ ಹಿಂದೂ ಪರಿಷತ್ ನವರು ಈ ಕಾರ್ಯ ಮುಂದುವರಿಸಿದ್ದಾರೆ.

ಜಾತಿ ಮತ ಎನ್ನದೇ ಎಲ್ಲರನ್ನು ಗೌರವಿಸಿ ಹಿಂದೂ ಸಮಾಜದ ಎಲ್ಲ ಕಟ್ಟ ಕಡೆಯ ವ್ಯಕ್ತಿಯನ್ನು ಪೂಜನಿಯ ಭಾವದಿಂದ ನೋಡುವ ವಿಎಚಪಿಯವರ ಈ ಕಾರ್ಯ ಮುಂದುವರೆಯಲಿ ಎಂದರು.
ವಿಎಚ್ ಪಿ ಕ್ಷೇತ್ರ ಸಾಮರಸ್ಯ ಪ್ರಮುಖರಾದ ಕ್ರಷ್ಣ ಭಟ್ ಮಾತನಾಡಿ, ನಾವು ದೇವಾಲಯದಲ್ಲಿ ಪರಮಾತ್ಮನ ಹುಡುಕಾಟ ಮಾಡುತ್ತೇವೆ. ಆದರೆ ನಾವು ಏಳುವ ಮೊದಲೇ ನಗರದಲ್ಲಿ ಸ್ವಚ್ಛತಾ ಕಾರ್ಯ ಮಾಡುವ ಕಾಯಕಯೋಗಿಗಳಾದ ಪೌರಕಾರ್ಮಿಕರೇ ನಿಜವಾದ ದೇವರು ಎಂದರು.
ವರದಿ ಪ್ರಕಾಶ ಬಸಪ್ಪ ಕುರಗುಂದ..