ಪೌರಾಡಳಿತ ನಿರ್ದೇಶನಾಲಯದ ಅಧಿಕಾರಿಯಿಂದ ಪಾಲಿಕೆಯ ಪ್ರಗತಿ ಪರಿಶೀಲನಾ ಸಭೆ…

ಪೌರಾಡಳಿತ ನಿರ್ದೇಶನಾಲಯದ ಅಧಿಕಾರಿಯಿಂದ ಪಾಲಿಕೆಯ ಪ್ರಗತಿ ಪರಿಶೀಲನಾ ಸಭೆ..

ಪಾಲಿಕೆ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದ ಬೆಂಗಳೂರಿನ ಜಂಟಿ ನಿರ್ದೇಶಕರು..

ಸುದೀರ್ಘ ಸಭೆಯಲ್ಲಿ ಕೆಲ ಮಾಹಿತಿ ಪಡೆದ ಅಧಿಕಾರಿ..

ಆಯುಕ್ತರ ಆಡಳಿತ ವೈಖರಿಗೆ ಮೆಚ್ಚುಗೆ ಸೂಚಿಸಿದ ಅಧಿಕಾರಿ..

ಬೆಳಗಾವಿ : ಶನಿವಾರ ವಾರಾಂತ್ಯದ ಒಳ್ಳೆಯ ಮೂಡಿನಲ್ಲಿ ಹಾಯಾಗಿ ಇದ್ದ ಬೆಳಗಾವಿ ಮಹಾನಗರ ಪಾಲಿಕೆಯ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ, ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯದ ಜಂಟಿ ನಿರ್ದೇಶಕರಾದ ವಿಜಯಕುಮಾರ ಅವರು ಪಾಲಿಕೆಯಲ್ಲಿ ಸುದೀರ್ಘವಾದ ಸಭೆಯನ್ನು ನಡೆಸಿದ್ದಾರೆ..

ಹೌದು ಶನಿವಾರ ಬೆಳಿಗ್ಗೆನೇ, ಬೆಂಗಳೂರಿನ ಅಧಿಕಾರಿ ವಿಜಯಕುಮಾರ ಅವರು, ಪಾಲಿಕೆಯ ಪ್ರಗತಿ ಪರಿಶೀಲನೆಯಲ್ಲಿ ಕರ್ಯಪ್ರವರ್ತರಾಗಿದ್ದು, ಪಾಲಿಕೆಯ ವ್ಯಾಪ್ತಿಯ ಹಲವಾರು ಸ್ಥಳಗಳಿಗೆ ಸಂಚರಿಸಿ, ಸರ್ಕಾರದ ಯೋಜನೆಗಳು ಎಷ್ಟರ ಮಟ್ಟಿಗೆ ಅನ್ವಯವಾಗಿವೆ ಹಾಗೂ ಸಾರ್ವಜನಿಕರಿಗೆ ಪಾಲಿಕೆಯಿಂದ ಒದಗುವ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಪೂರೈಕೆಯಾಗುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇನ್ನು ಮಧ್ಯಾಹ್ನ ಪಾಲಿಕೆಯ ಪರಿಷತ್ ಸಭೆಯಲ್ಲಿ ಎಲ್ಲಾ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿಗಳ ಸಮ್ಮುಖದಲ್ಲಿ ಆಡಳಿತ ಆಯುಕ್ತರ ಸಹಭಾಗಿತ್ವದಲ್ಲಿ ಸಭೆ ತಗೆದುಕೊಂಡು, ಪಾಲಿಕೆಯ ಒಟ್ಟಾರೆ ಪ್ರಗತಿಯ ಪರಿಶೀಲನೆ ಮಾಡಿದರು..

ಮೊದಲಿಗೆ ಆರೋಗ್ಯ ವಿಭಾಗಕ್ಕೆ ಸಂಬಂದಿಸಿದ ಹತ್ತು ಹಲವು ಪ್ರಶ್ನೆ ಕೇಳಿದ್ದು, ಆರೋಗ್ಯ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ, ಪೌರ ಕಾರ್ಮಿಕರ ಸಂಖ್ಯೆ, ಅವರ ಸೌಲಭ್ಯ, ಅವರ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಲೋಕೋಪಯೋಗಿ ವಿಭಾಗಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಮಾಡಿದ್ದು, ಪ್ರತಿವರ್ಷ 100 ಕೋಟಿಯಂತೆ ಬರುವ ಅನುದಾನವನ್ನು ಯಾವುದಕ್ಕೆ ಖರ್ಚು ಮಾಡಿದ್ದೀರಾ? ಇದಕ್ಕೆ ಸಂಬಂಧಿಸಿದಂತೆ 4-5 ವರ್ಷಗಳ ಅನುದಾನಗಳ ಮಾಹಿತಿ ಕೇಳಿದ್ದು, ಪಾಲಿಕೆಯ ಅಧಿಕಾರಿಗಳು ಹಾರಿಕೆಯ ಉತ್ತರ ನೀಡಿದ್ದಾರೆಂಬ ಮಾಹಿತಿಯಿದೆ..

ಪಾಲಿಕೆಯ ವಿದ್ಯುತ್ ವಿಭಾಗದಿಂದಲೂ ಸಮಂಜಸ ಮಾಹಿತಿ ಬರದೇ, ಲೋಕೋಪಯೋಗಿ ಹಾಗೂ ವಿದ್ಯುತ್ ವಿಭಾಗದ ಮುಖ್ಯ ಅಭಿಯಂತರರು ಜಂಟಿ ನಿರ್ದೇಶಕರ ಪ್ರಶ್ನೆಗೆ ತಮ್ಮ ಶೈಲಿಯಲ್ಲಿ ಉತ್ತರಿಸಿದ್ದಾರೆ..

ಕಂದಾಯ ವಿಭಾಗದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದು, ಪಾಲಿಕೆಯ ತೆರಿಗೆ ಆದಾಯ ಇನ್ನು ಹೆಚ್ಚಾಗಬೇಕಿದೆ, ಪಾಲಿಕೆ ಇಷ್ಟು ದೊಡ್ಡದಾಗಿದ್ದರೂ ತೆರಿಗೆ ಯಾಕೆ ಕಡಿಮೆ ಆಗುತ್ತಿದೆ? ಸಾರ್ವಜನಿಕರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಪಾಲಿಕೆ ಆದಾಯಕ್ಕೆ ಕುತ್ತು ತರುತ್ತಿದ್ದಿರಾ ಎಂಬ ಅರ್ಥದಲ್ಲಿ ಚಾಟಿ ಬಿಸಿದ್ದು, ಅಧಿಕೃತ, ಅನಧಿಕೃತ, ವಸತಿ, ವಾಣಿಜ್ಯ ಖಾಲಿ ಇರುವ ಆಸ್ತಿಗಳಿಗೆ ಸರ್ಕಾರದ ನಿಯಮಾವಳಿ ಪ್ರಕಾರ ತೆರಿಗೆ ವಿಧಿಸಿ, ಪಾರದರ್ಶಕತೆ ಕಾಪಾಡಿ ಎಂದು ಸೂಚನೆ ನೀಡಿದ್ದಾರೆ.

ಇನ್ನು ಲೆಕ್ಕಪತ್ರ ವಿಭಾಗದಲ್ಲಿ ಕೆಲ ದಾಖಲಾತಿ ಹಾಗೂ ಮಾಹಿತಿ ನಿಡದಿದ್ದಕ್ಕೆ ಸಿಡಿಮಿಡಿಗೊಂಡ ಅಧಿಕಾರಿಗಳು, ಸಭೆ ಮುಗಿದ ನಂತರ, ಬೆಳಗಾವಿ ಪಾಲಿಕೆಯಲ್ಲಿ ಕೆಲ ಸುಧಾರಣೆಗಳು ಆಗಬೇಕು ಎಂದು ಪಾಲಿಕೆಯ ಆಯುಕ್ತರಿಂದ ಚರ್ಚೆ ಮಾಡಿದರು..

ನಮ್ಮ ಸುದ್ದಿವಾಹಿನಿಗೆ ಮಾತನಾಡಿದ ಪೌರಾಡಳಿತ ನಿರ್ದೇಶನಾಲಯದ ಜಂಟಿ ನಿರ್ದೇಶಕರು, ಪಾಲಿಕೆ ಆಯುಕ್ತರ ಕರ್ತವ್ಯ ಪ್ರಜ್ಞೆಯಿಂದ ಪಾಲಿಕೆ ಆಡಳಿತ ಉತ್ತಮವಾಗಿದ್ದು, ಕೆಲ ಸಣ್ಣ ಪುಟ್ಟ ಲೋಪದೋಷಗಳಿವೆ, ಬರುವ ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತವೆ, ನಾವು ಕೂಡಾ ಪ್ರತಿ ತಿಂಗಳು ಬೆಳಗಾವಿಗೆ ಬಂದು ಇಂತಹ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತೇವೆ ಎಂದಿದ್ದಾರೆ..

ವರದಿ ಪ್ರಕಾಶ ಬಸಪ್ಪ ಕುರಗುಂದ..