ಪ್ರಜಾಪ್ರಭುತ್ವ ಗಟ್ಟಿಗೊಳ್ಳಲು ಎಲ್ಲರೂ ಮತದಾನ ಮಾಡಬೇಕು…

ಪ್ರಜಾಪ್ರಭುತ್ವ ಗಟ್ಟಿಗೊಳ್ಳಲು ಎಲ್ಲರೂ ಮತದಾನ ಮಾಡಬೇಕು..

ಲಿಂಗರಾಜ ಹಲಕರ್ಣಿಮಠ ಆಶಯ..

ಬೆಳಗಾವಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶದ ಬೆಳವಣಿಗೆ ಮತ್ತು ಭವಿಷ್ಯದ ದೃಷ್ಟಿಯಿಂದ ಮತದಾರರ ಪಾತ್ರ ಮುಖ್ಯವಾಗಿದೆ. ಪ್ರಜಾ ಪ್ರಭುತ್ವ ಉಳಿಯಲು ಮತದಾನ ಮಹತ್ವದ್ದಾಗಿದೆ. ಪ್ರತಿಯೊಬ್ಬರೂ ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡಬೇಕು ಎಂದು ಸಹಾಯಕ ನಿರ್ದೆಶಕ (ಗ್ರಾಉ) ಲಿಂಗರಾಜ ಹಲಕರ್ಣಿಮಠ ಹೇಳಿದರು.

ತಾಲೂಕಿನ ಅಂಬಡಗಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮನರೇಗಾ ಯೋಜನೆಯಡಿ ಕೈಗೊಂಡ ಕಾಮಗಾರಿ ಸ್ಥಳದಲ್ಲಿ ತಾಲೂಕು ಪಂಚಾಯಿತಿ, ಹಾಗೂ ತಾಲೂಕು ಸ್ವೀಪ್ ಸಮಿತಿ ಸಹಯೋಗದಲ್ಲಿ ಕೂಲಿಕಾರರಿಗೆ ಮತದಾನ ಜಾಗೃತಿ, ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದರು.

ಪ್ರಜಾ ಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಮತವೂ ಪವಿತ್ರವಾದುದು. ಯಾವುದೇ ಆಮಿಷಗಳಿಗೆ ಒಳಗಾಗದೆ ಲೋಕ ಸಭಾ ಚುನಾವಣೆಯಲ್ಲಿ ಎಲ್ಲರೂ ಮತದಾನ ಮಾಡಿ ನಿಮ್ಮ ಹಕ್ಕನ್ನು ಚಲಾಯಿಸಿ ಎಂದರು.

ನಂತರ ಸಹಾಯಕ ನಿರ್ದೇಶಕ(ಪಂ.ರಾ) ಸುರೇಶ್ ನಾಗೋಜಿ ಮಾತನಾಡಿ, ಮತದಾರರು ಪ್ರಾಮಾಣಿಕ, ನ್ಯಾಯಸಮ್ಮತ ಹಾಗೂ ನಿಷ್ಪಕ್ಷಪಾತವಾಗಿ ಮತದಾನ ಮಾಡಬೇಕು. ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಿದಾಗ ರಾಷ್ಟ್ರ ನಿರ್ಮಾಣವಾಗಲು ಸಾಧ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಿಡಿಓ ರವಿ ಉಡಕೇರಿ, ಐಇಸಿ ಸಂಯೋಜಕಿ ಎಸ್ ಬಿ ಜವಳಿ, ತಾಂತ್ರಿಕ ಸಹಾಯಕ ಪರಶುರಾಮ ರಂಗಪುರಿ, ಬಿಎಫ್ ಟಿ ಕಲ್ಲಪ್ಪ ಚಕಡಿ, ಗ್ರಾಮ ಕಾಯಕಮಿತ್ರ ನಂದಾ ಸುಳೇಬಾವಿ, ಕೂಲಿಕಾರರು ಹಾಜರಿದ್ದರು.

ವರದಿ ಪ್ರಕಾಶ ಕುರಗುಂದ..