ಪ್ರತಿಭೆ ಇರೋ ಸಣ್ಣ ಕಲಾವಿದರನ್ನೂ ಕೂಡಾ ಶಿವಣ್ಣ ಗುರ್ತಿಸುತ್ತಾರೆ..
ಶಿವಣ್ಣ ಸಕಾರಾತ್ಮಕ ವಿಚಾರದ ಸಹೃದಯಿ..
ಅವರ ಚಿತ್ರದಲ್ಲಿ ಚಿಕ್ಕ ಪಾತ್ರ ಸಿಕ್ಕರೂ ಮಾಡಬೇಕು..
ದುನಿಯಾ ವಿಜಯ್..
ಬೆಂಗಳೂರು : ಕನ್ನಡ ಚಿತ್ರರಂಗದ ಕರಿಚಿರತೆ, ದುನಿಯಾ ವಿಜಯ್ ಮೊದಲಿನಿಂದಲೂ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಾ, ಕಷ್ಟಗಳನ್ನು ಎದುರಿಸುತ್ತಲೇ ಬಂದು, ತಮ್ಮ ಅದ್ಬುತ ಚಿತ್ರಗಳಿಂದ ಜನಮನ್ನಣೆಯ ನಾಯಕರಾಗಿ, ಯಶಸ್ಸು ಕೂಡಾ ಗಳಿಸಿ, ಇಂದಿಗೂ ಕೂಡಾ ಸ್ಯಾಂಡಲವುಡ್ ಅಲ್ಲಿ ತಮ್ಮ ವರ್ಚಸ್ಸು ಉಳಿಸಿಕೊಂಡಿದ್ದಾರೆ..
ಇಂದು ತಮ್ಮ ಬಹುನಿರೀಕ್ಷೆಯ “ಭೀಮ” ಚಿತ್ರದ ಪ್ರಚಾರದ ಸಂದರ್ಶನದಲ್ಲಿ ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ದುನಿಯಾ ವಿಜಯ್ ಅವರು, ಕರುನಾಡ ಚಕ್ರವರ್ತಿ ಡಾ ಶಿವರಾಜಕುಮಾರ ಅವರ ಬಗ್ಗೆ ನಿಷ್ಕಲ್ಮಶ, ತುಂಬು ಹೃದಯದ ಹೊಗಳಿಕೆಯ ಮಾತುಗಳನ್ನು ಆಡಿದ್ದಾರೆ..

ಶಿವಣ್ಣ ಅವರಿಗೆ, ಪ್ರತಿಭೆ ಇರುವ ಚಿಕ್ಕ ಕಲಾವಿದರನ್ನು ಗುರ್ತಿಸುವ, ಬೆಳೆಸುವ, ಅವಕಾಶ ನೀಡುವ ಗುಣ ಮೊದಲಿನಿಂದಲೂ ಇದೆ, ಅದೇ ಕಾರಣಕ್ಕೆ ಅವರ ಚಿತ್ರಗಳಲ್ಲಿ ಸಣ್ಣ ಪಾತ್ರ ಮಾಡಿದ ಎಷ್ಟೋ ಕಲಾವಿದರು ಇಂದು ದೊಡ್ಡ ಹಿರೋಗಳಾಗಿದ್ದಾರೆ, ನಾನು ಕೂಡಾ ಅಷ್ಟೇ ಶಿವಣ್ಣ ಅವರ ರಿಷಿ ಚಿತ್ರದಲ್ಲಿ ನನ್ನ ನಟನೆಯನ್ನು ನೋಡಿ ನಿರ್ದೇಶಕ ಪ್ರಕಾಶ ಅವರಿಗೆ ಹೇಳಿ, ಈ ಹುಡುಗನಿಗೆ ಅವಕಾಶಗಳು ಸಿಗಬೇಕು, ತುಂಬಾ ಪ್ರತಿಭೆ ಇದೇ ಎಂದಿದ್ದರಂತೆ..

ಅದೇ ರೀತಿ ಶಿವಣ್ಣ ಅವರ ಮುಂದಿನ ಹಲವಾರು ಚಿತ್ರಗಳಲ್ಲಿ ನಟನೆ ಮಾಡಿಡ ವಿಜಯ ಅವರು ಮುಂದೆ ಕರುನಾಡೆ ಮೆಚ್ಚುವಂತಹ ನಾಯಕರಾಗಿದ್ದು ಇತಿಹಾಸವಾಗಿದೆ. ಶಿವಣ್ಣರಂತ ದೊಡ್ಡ ನಟರ ಚಿತ್ರದಲ್ಲಿ ಸಣ್ಣ ಪಾತ್ರ ಸಿಕ್ಕರೂ ಮಾಡಬೇಕು, ಅಲ್ಲಿ ನಮ್ಮ ಅಭಿನಯದ ಪ್ರತಿಭೆ ತೋರಿಸಬೇಕು, ಆಗ ಸ್ವತಃ ಶಿವಣ್ಣ, ಚಿತ್ರದ ನಿರ್ದೇಶಕ, ನಿರ್ಮಾಪಕರು ನಮ್ಮನ್ನು ಗುರ್ತಿಸುವರು, ಮುಂದೆ ಅವಕಾಶಗಳು ಕೂಡಾ ಸಿಗುವವು ಎಂದಿದ್ದಾರೆ..

ಶಿವಣ್ಣ ಎಲ್ಲಾ ಯುವ ಕಲಾವಿದರನ್ನು ಗೌರವಿಸುತ್ತಾರೆ, ಅವರು ಯಾವತ್ತೂ ಪಾಸಿಟಿವ್ ಆಗಿಯೇ ಮಾತನಾಡುತ್ತಾರೆ, ಬಂಗಾರದಂಥ ಮನಸ್ಸಿನ ಸಹೃದಯಿ ಶಿವಣ್ಣ, ಅವರ ಬಗ್ಗೆ ಯಾರೇ ಏನೇ ಹೇಳಿದರೂ ಅವರು ನನ್ನ ಮನಸ್ಸಿನಲ್ಲಿ ಇದ್ದಾರೆ, ಮೊದಲಿಂದಲೂ ನನಗೆ ಬೆಂಬಲ ನೀಡುತ್ತಾ ಬಂದಿದ್ದು ಮುಂದೆಯೂ ನಮ್ಮ ಪ್ರೀತಿ ವಿಶ್ವಾಸ ಹೀಗೆ ಇರುತ್ತದೆ ಎಂದಿದ್ದಾರೆ..
ವರದಿ ಪ್ರಕಾಶ ಬಸಪ್ಪ ಕುರಗುಂದ..