ಪ್ರಥ್ವಿ ಸಿಂಗಗೆ ನ್ಯಾಯ ಸಿಗದಿದ್ದರೆ ನಾವು ರಸ್ತೆಗೆ ಬಂದು ಹೋರಾಟ ಮಾಡುತ್ತೇವೆ…

ಪ್ರಥ್ವಿ ಸಿಂಗಗೆ ನ್ಯಾಯ ಸಿಗದಿದ್ದರೆ ನಾವು ರಸ್ತೆಗೆ ಬಂದು ಹೋರಾಟ ಮಾಡುತ್ತೇವೆ..

ಐದು ವರ್ಷದ ನಂತರ ದಾಖಲೆ ಕೇಳುತ್ತೇವೆ ಎಂದರೆ ಯಾರು ನಂಬುತ್ತಾರೆ ??

ಬಿಜೆಪಿ ಶಾಸಕ ಛಲವಾದಿ ನಾರಾಯಣಸ್ವಾಮಿ ಹೇಳಿಕೆ..

ಬೆಳಗಾವಿ : ನಿನ್ನೆ ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ನಡೆದ ಹಲ್ಲೆಯ ವಿಚಾರವಾಗಿ ಮಂಗಳವಾರ ಸುವರ್ಣ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಶಾಸಕ ಛಲವಾದಿ ನಾರಾಯಣಸ್ವಾಮಿ ಅವರು, ನಿನ್ನೆ ಸದನ ಮುಗಿದ ಮೇಲೆ ರೂಮಿಗೆ ಹೋಗುವಾಗ ಹಲ್ಲೆಗೆ ಒಳಗಾದ ಪ್ರಥ್ವಿ ಸಿಂಗ್ ಅವರ ಮಗ ನನಗೆ ಕರಿಯಾಡಿ, ವಿಷಯ ತಿಳಿಸಲಾಗಿ, ನಾನು ಕೂಡ ಖಾಸಗಿ ಆಸ್ಪತ್ರೆಗೆ ಹೋದೆ, ಆಗ ಹಲ್ಲೆಯಾಗಿರುವ ವಿಷಯ ತಿಳಿದುಬಂದಿದೆ..

ಬೆಳಗಾವಿಯ ಕಾಂಗ್ರೆಸ್ ಪಕ್ಷದ ಎಂಎಲ್ಸಿ ಚನ್ನಾರಜ್ ಹಟ್ಟಿಹೊಳಿ ಅವರ ಕಡೆಯವರು ಹಲ್ಲೆ ಮಾಡಿದರು ಎಂಬ ಆರೋಪ ಇದ್ದು,
ಆಸ್ಪತ್ರೆಗೆ ಹೋಗಿ ವಿಚಾರ ಮಾಡಿದಾಗ ಕೆಲವು ಹೆಸರು ಹೇಳಿದರು.

ಈ ವಿಚಾರವಾಗಿ ನಮ್ಮ ಪಕ್ಷದ ಅಧ್ಯಕ್ಷರಾದ ವಿಜಯೇಂದ್ರ ಅವರ ಜೊತೆ ಮಾತನಾಡಿದಾಗ ಘಟನೆಯ ಬಗ್ಗೆ ವಿವರಣೆ ನೀಡಿದಾಗ, ಹಲ್ಲೆ ಮಾಡಿದವರನ್ನು ಬಂಧನ ಆದಷ್ಟು ಬೇಗ ಮಾಡಬೇಕು ಎಂದು ಆಗ್ರಹ ಮಾಡಿದ್ದು, ಮಾಡಲು ತಿಳಿಸಿದ್ದೆವು, ಆದರೆ ಇನ್ನು ಬಂಧನ ಆಗದೇ ಇರುವದು ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ ಎಂದರು..

ಯಾವುದೋ ಪೇಪರ್ಸ್ ಬಿಟ್ಟೀದಿವಿ ತಗೆದುಕೊಂಡು ಬರಲು ಹೋಗಿದ್ದೆವು ಅಂತಿರಲ್ಲ, ಐದು ವರ್ಷಗಳ ವರೆಗೆ ಆ ಪೆಪರ್ಸ್ ನಿಮಗೆ ನೆನಪು ಆಗಲಿಲ್ಲವಾ? ಇದೊಂದು ಗುರಿ ಇಟ್ಟು, ಮಾಡಿದ ಹಲ್ಲೆ, ಸರ್ಕಾರ ಇದರಲ್ಲಿ ಬೇಗ ಕ್ರಮ ತಗೆದುಕೊಳ್ಳಬೇಕು, ಇಲ್ಲವಾದರೆ ಬಿಜೆಪಿಯವರು ರಸ್ತೆಗಿಳಿದು ಹೋರಾಟ ಮಾಡುತ್ತೇವೆ ಎಂದರು..

ಕ್ರಮ ಜರುಗದಿದ್ದರೆ ಸದನದಲ್ಲಿಯೂ ಈ ವಿಚಾರ ಚರ್ಚೆ ಮಾಡುತ್ತೇವೆ ಎಂದರು..

ವರದಿ ಪ್ರಕಾಶ ಕುರಗುಂದ..