ಪ್ರಧಾನಿ ಅವರ ಕನಸಿನ ವಿಕಸಿತ ಭಾರತಕ್ಕಾಗಿ ಕೈಜೋಡಿಸಿ..

ಪ್ರಧಾನಿ ಅವರ ಕನಸಿನ ವಿಕಸಿತ ಭಾರತಕ್ಕಾಗಿ ಕೈಜೋಡಿಸಿ..

ಬೆಳಗಾವಿ : ಭಾರತ ದೇಶ ಒಂದು ಅಭಿವೃದ್ಧಿ ದೇಶವಾಗಿ ಹೊರಹಮ್ಮಿದೆ, ಇನ್ನು ಮುಂದೆ ಸಮೃದ್ಧ ಭಾರತವನ್ನಾಗಿಸಲು ಬಿಜೆಪಿ ಸರಕಾರ ವಿಕಸಿತ ಭಾರತ ಎಂಬ ಸಂಕಲ್ಪ ಹಾಕಿಕೊಳ್ಳಲಾಗಿದೆ ಎಂದು ರಾಜ್ಯ ಬಿಜೆಪಿ ಪ್ರಕೊಷ್ಟಾಗಳ ಸಂಚಾಲಕ ದತ್ತಾತ್ರೇಯ ಸೂರ್ಯನಾರಯಣರಾವ ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಆರ್ಥಿಕವಾಗಿ ವಿಶ್ವದ 5 ನೇ ಸ್ಥಾನ ಜೋತೆಗೆ ಡಿಜಿಟಲ್ ವೈವಾಟಿನಲ್ಲಿ ಮೊದಲನೇ ಸ್ಥಾನ ಸೇರಿದಂತೆ
ನರೇಂದ್ರ ಮೋದಿಜಿ ಅವರ ವಿಶೇಷ ಕಾಳಜಿಯಿಂದ 370 ನೇ ವಿಧಿಯ ರದ್ದತಿಯ ಸಾಂವಿಧಾನಿಕತೆಯನ್ನು ಸರ್ವಾನುಮತದಿಂದ ಎತ್ತಿಹಿಡಿಯುವ ಮೂಲಕ ಜಮ್ಮು ಕಾಶ್ಮೀರವನ್ನು ಸುಂದರ ಪ್ರವಾಸಿ ತಾಣವಾಗಿ ನಿರ್ಮಾಣ ಮಾಡಲಾಗಿದೆ ಎಂದು ಅವರು ತಿಳಿಸಿದರು.

ನರೇಂದ್ರ ಮೋದಿಜಿ ಅವರ ಸರಕಾರ ಒಟ್ಟಟರೆಯಾಗಿ ಎಲ್ಲ ಕ್ಷೇತ್ರಗಳಲ್ಲಿಯು ಅಭಿವೃದ್ಧಿ ಕಂಡಿದೆ. ಇನ್ನು ಮುಂದಿನ ದಿನಗಳಲ್ಲಿ ವಿಶ್ವದ ಒಂದನೇ ಸ್ಥಾನದಲ್ಲಿ ಭಾರತ ಇರಬೇಕೆಂಬ ವಿಕಸಿತ ಭಾರತ ಮೋದಿ ಗ್ಯಾರಂಟಿ ಸಂಕಲ್ಪವಾಗಿದೆ ಎಂದರು.

ದೇಶದಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ, ಸುಕನ್ಯಾ ಸಮೃದ್ಧಿ ಯೋಜನೆ, ಸೇರಿದಂತೆ ಅನೇಕ ಮಹಿಳೆಯರಿಗೆ ಅನುಕೂಲವಾಗುವ ಯೋಜನೆಗಳನ್ನು ಬಿಜೆಪಿ ಸರಕಾರ ಜಾರಿಗೊಳಿಸಲಾಗಿದೆ ಎಂದರು.

ದೇಶದಲ್ಲಿ ಜಲಜೀವನ ಮಿಷನ್ ಯೋಜನೆಯಡಿ 40 ಕೋಟಿ ಮನೆಗಳಿಗೆ ಕುಡಿಯುವ ನೀರು ತಲುಪಿಸಿದೆ. ಉಜ್ವಲ ಯೋಜನೆಯಡಿ 10 ಕೋಟಿ ಗ್ಯಾಸ್ ಗಳನ್ನು ನೀಡಲಾಗಿದೆ ಸ್ವಚ್ಛ ಭಾರತ, ಜನಧನ ಅಕೌಂಟ್, ಆಯುಷ್ಮಾನ್ ಭಾರತ, ಸೈನಿಕರಿಗೆ ವಿಶೇಷ ಸವಲತ್ತು, ಯಂತ್ರೋಪಕರಣಗಳ ತಯಾರಿಕೆ ಸೇರಿದಂತೆ ಅನೇಕ ಯೋಜನೆಗಳನ್ನು ಮೋದಿ ಸರಕಾರ ಜನರಿಗೆ ತಲುಪಿಸಿದೆ ಎಂದು ಹೇಳಿದರು.

ರಾಜ್ಯ ಬಿಜೆಪಿ ಪ್ರಕೊಷ್ಟಾಗಳ ಸಂಚಾಲಕ ದತ್ತಾತ್ರೇಯ ಸೂರ್ಯನಾರಯಣರಾವ್, ರಾಜ್ಯಸಭಾ ಸಂಸದ ಈರಣ್ಣ ಕಡಾಡಿ,ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷೆ ಗೀತಾ ಸುತಾರ ಸೇರಿದಂತೆ ಇತರರು ಇದ್ದರು.