ಪ್ರಧಾನಿ ನರೇಂದ್ರ ಮೋದಿಯವರ ಬೆಳಗಾವಿ ಕಾರ್ಯಕ್ರಮ..
ಸಿದ್ಧತೆ ಪರಿಶೀಲಿಸಿದ ಕಮಲ ಕಲಿಗಳು..
ಬೆಳಗಾವಿ : ಲೋಕಸಭಾ ಚುನಾವಣೆ 2024ರ ಪ್ರಚಾರದ ಕಾರ್ಯಕ್ರಮದ ಸಲುವಾಗಿ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ದಿನಾಂಕ 28/04/2024 ರಂದು ಬೆಳಿಗ್ಗೆ 9 ಗಂಟೆಗೆ, ನಗರದ ಯಡಿಯೂರಪ್ಪ ಮಾರ್ಗದಲ್ಲಿರುವ ಮಾಲಿನಿ ಸಿಟಿ ಮೈದಾನಕ್ಕೆ ಆಗಮಿಸಲಿದ್ದಾರೆ..
ಬೆಳಗಾವಿಯ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹಾಗೂ ಬಿಜೆಪಿಯ ಇತರ ಅಭ್ಯರ್ಥಿಗಳ ಗೆಲುವಿಗಾಗಿ, ತಮ್ಮ ಕಾರ್ಯಕರ್ತರು ಹಾಗೂ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಲಿದ್ದು, ರಾಷ್ಟ್ರ, ರಾಜ್ಯ ಮತ್ತು ಜಿಲ್ಲಾ ಮಟ್ಟದ ಬಿಜೆಪಿ ನಾಯಕರಿಂದ ಹಿಡಿದು ಬೂತ್ ಮಟ್ಟದ ಪದಾಧಿಕಾರಿಗಳು ಸೇರಿ ಈ ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ಸೇರುವ ನಿರೀಕ್ಷೆಯಿದೆ..
ಆದಕಾರಣ ಇಂದು ಬೆಳಗಾವಿಯ ಕಮಲ ಪಡೆಯ ಕೆಲ ಕಲಿಗಳು ಪ್ರಧಾನಿ ಭಾಗಿಯಾಗುವ ಕಾರ್ಯಕ್ರಮದ ಸಿದ್ಧತೆ, ಯೋಜನೆ, ಕಾರ್ಯಕ್ರಮದ ಯಶಸ್ಸಿನ ರೂಪುರೇಷೆಗಳನ್ನು ಚರ್ಚಿಸುತ್ತಿದ್ದು, ಉತ್ತಮ ಯೋಜನೆ ಹಾಗೂ ಸಂಘಟನಾತ್ಮಕ ಹೋರಾಟದಿಂದ, ಎಂದಿನಂತೆ ಈ ಸಲವೂ ಬೆಳಗಾವಿಯಲ್ಲಿ ಬಿಜೆಪಿ ಬಾವುಟ ಹಾರಿಸುವ ಮುನ್ಸೂಚನೆ ನೀಡಿದಂತಿತ್ತು..
ವರದಿ ಪ್ರಕಾಶ್ ಕುರಗುಂದ..