ಪ್ರಧಾನಿ ನರೇಂದ್ರ ಮೋದಿಯವರ 74ನೇ ಜನ್ಮದಿನಾಚರಣೆಯ ನಿಮಿತ್ತ..
ಶ್ರೀಮತಿ ರತ್ನಾಬಾಯಿ ಹಾಗೂ ಶ್ರೀ ಕಲ್ಲಪ್ಪ ಉದಗಟ್ಟಿ ಸಾಮಾಜಿಕ ಪ್ರತಿಷ್ಠಾನದಿಂದ ಸಾರ್ಥಕ ಕಾರ್ಯಕ್ರಮ..
ಪ್ರತಿಷ್ಠಾನದಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರಧಾನ..
ಬೆಳಗಾವಿ : ಭಾರತದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ 74ನೆಯ ಹಾಗೂ ಬೆಳಗಾವಿ ಸಂಸದರಾದ ಜಗದೀಶ ಶೆಟ್ಟರ್ ಅವರ 69ನೆಯ ಜನ್ಮ ದಿನಾಚರಣೆಯ ಅಂಗವಾಗಿ, ಬೆಳಗಾವಿಯ ಶ್ರೀಮತಿ ರತ್ನಬಾಯಿ ಹಾಗೂ ಶ್ರೀ ಕಲ್ಲಪ್ಪ ಉದಗಟ್ಟಿ ಸಾಮಾಜಿಕ ಪ್ರತಿಷ್ಠಾನದಿಂದ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರಧಾನದ ಗೌರವ ನೀಡುವ ಸಾರ್ಥಕ ಕಾರ್ಯ ನಡೆಯುತ್ತಿದೆ..
ರವಿವಾರ ದಿನಾಂಕ 06/10/2024 ರಂದು ಮಹಾಂತೇಶ ನಗರದ ಮಹಾಂತ ಭವನದಲ್ಲಿ, ಶ್ರೀ ಜಗದ್ಗುರು ಪಂಚಮ ಲಿಂಗೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆಯುವ ಈ ವಿಶೇಷ ಸಾಮಾಜಿಕ ಕಾಳಜಿಯ ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಮಾಜ ಸೇವಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವದು..
ಶ್ರೀಮತಿ ರತ್ನಾಬಾಯಿ ಹಾಗೂ ಶ್ರೀ ಕಲ್ಲಪ್ಪ ಉದಗಟ್ಟಿ ಸಾಮಾಜಿಕ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ರೂವಾರಿಗಳಾದ ಬಾಳಾಸಾಹೇಬ ಉದಗಟ್ಟಿ ಅವರು ಸಮಾಜದ ಕೃಷಿ, ಶಿಕ್ಷಣ, ಕನ್ನಡಪರ ಕಾಳಜಿಯ ವಿಷಯಗಳಲ್ಲಿ ಸದಾ ಕಾಲ ತಮ್ಮ ಸೇವೆ ನೀಡುತ್ತಿದ್ದು, ಬಡ ವ್ಯಾಪಾರಸ್ಥರ, ರೈತರ ಏಳಿಗೆಗಾಗಿ ಅನೇಕ ಕಾರ್ಯಗಳನ್ನು ಮಾಡಿರುತ್ತರೆ, ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿರುವ ಹರಕೆ ತೀರಿಸುವ ಸಲುವಾಗಿ ಈ ವಿಶೇಷ ಕಾರ್ಯಕ್ರಮ ಏರ್ಪಡಿಸಿದ್ದಾರೆ..

ಬೆಳಗಾವಿಯಲ್ಲಿ ಯಾವುದೇ ಸಮಾಜಮುಖಿ ಕಾರ್ಯಗಳು ನಡೆದರೂ ಅದರ ಭಾಗವಾಗಿ ಬಾಳಾಸಾಹೇಬ ಉದಗಟ್ಟಿಯವರು ಇರುತ್ತಿದ್ದು, ಸಾಮಾಜಿಕ ಸೇವೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ, ಬೆಳಗಾವಿಗೆ ಬರುವ ಪ್ರತಿ ಕಲಾವಿದರಿಗೆ ಆತ್ಮೀಯವಾಗಿ ಸ್ವಾಗತ ಕೋರಿ, ಗೌರವ ಆಥಿತ್ಯ ನೀಡಿ, ತಮ್ಮ “ಅಮ್ಮ ಪ್ರತಿಷ್ಠಾನದಿಂದ” ಅವರನ್ನು ಸತ್ಕರಿಸುತ್ತಿದ್ದು, ನಾಡು, ನುಡಿ, ನೆಲ, ಭಾಷೆ, ಸಂಸ್ಕೃತಿಯ ಬಹುತೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ತಮ್ಮ ಕೊಡುಗೆ ನೀಡುತ್ತಿದ್ದು, ಈಗ ಇಂತಹ ವಿಶೇಷ ಕಾರ್ಯಕ್ರಮದ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ..
ಬಿಜೆಪಿಯ ರಾಜ್ಯ ಉಪಾಧ್ಯಕ್ಷರಾದ ಅನಿಲ ಬೇನಕೆ, ಸಂಸದ ಜಗದೀಶ್ ಶೆಟ್ಟರ್, ಶಾಸಕ ಅಭಯ ಪಾಟೀಲ, ಮಂಗಳಾ ಅಂಗಡಿ, ಸಂಜಯ ಪಾಟೀಲ, ಸುಭಾಸ ಪಾಟೀಲ್, ಗೀತಾ ಸುತಾರ, ಕಿರಣ ಜಾಧವ, ಮುರುಗೆಂದ್ರ ಪಾಟೀಲ್, ಸೋನಾಲಿ ಸರ್ನೋಬತ, ಮಂಜುಳಾ ಕಾಪ್ಸೆ, ರಾಜಶೇಖರ ದೋಣಿ, ಹನುಮಂತ ಕೊಂಗಾಲಿ, ಡಾ ರವಿ ಪಾಟೀಲ್, ದೀಪಾ ಕುಡಚಿ, ದಿಗ್ವಿಜಯ್ ಸಿಡ್ನಾಳ, ಶಿವು ನಂದಗಾವಿ, ಜೂನಿಯರ್ ವಿಷ್ಣುವರ್ಧನ, ಹನುಮಂತ ನಾಯಕ, ಗಿರೀಶ್ ಪಾಟೀಲ, ಡಾ ಹರೀಶ್, ಡಾ ದೇವೇಗೌಡ, ಮತ್ತಿತರ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವರು..

ಈ ವಿಶೇಷ ಸತ್ಕಾರ ಕಾರ್ಯಕ್ರಮದಲ್ಲಿ ಕೃಷಿ, ಸೈನಿಕ, ಕಲಾ, ಶಿಕ್ಷಣ, ಉದ್ಯೋಗ, ಪೊಲೀಸ್, ಮಾಧ್ಯಮ, ವೈದ್ಯಕೀಯ, ನ್ಯಾಯಾಂಗ, ಮುಂತಾದ ಕ್ಷೇತ್ರಗಳಲ್ಲಿ ಸೇವಾ ಸಾಧನೆ ಮಾಡಿದವರಿಗೆ ಪ್ರಶಸ್ತಿ ಪ್ರಧಾನ ಮಾಡಿ, ಗೌರವಿಸಲಾಗುತ್ತಿದೆ ಎಂಬ ಮಾಹಿತಿಯಿದೆ..
ವರದಿ ಪ್ರಕಾಶ್ ಬಸಪ್ಪ ಕುರಗುಂದ..