ಪ್ರಧಾನಿ ಮೋದಿ ವಿರುದ್ಧ ಪ್ರತಿಪಕ್ಷಗಳ ತಂತ್ರ ಪಲಿಸುವುದಿಲ್ಲ..

ಪ್ರಧಾನಿ ಮೋದಿ ವಿರುದ್ಧ ಪ್ರತಿಪಕ್ಷಗಳ ತಂತ್ರ ಪಲಿಸುವುದಿಲ್ಲ..

ಮುತಾಲಿಕ್ ಹೇಳಿಕೆ..

ಬೆಳಗಾವಿ: ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು, ಪ್ರಧಾನಿ ನರೇಂದ್ರ ಮೋದಿ ಮಣಿಸಲು ಪ್ರತಿಪಕ್ಷಗಳ ಒಗ್ಗೂಡುತ್ತಿರುವ ವಿಚಾರ ಯಾವುದೇ ಫಲ ನೀಡುವದಿಲ್ಲ ಎಂದಿದ್ದಾರೆ..

ಪ್ರತಿಪಕ್ಷಗಳ ತಂತ್ರ ಫಲಿಸಲ್ಲ ಎಂದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರಧಾನಿ ನರೇಂದ್ರ ಮೋದಿ ಹಿಂದೂತ್ವ ಹಾಗೂ ಪಾರದರ್ಶಕ ವ್ಯಕ್ತಿ,
ಅವರನ್ನು ಮಣಿಸಲು ಇಡೀ ಪ್ರತಿಪಕ್ಷಗಳು ಒಗ್ಗೂಡಿರುವುದು
ದೇಶಕ್ಕೆ ದೊಡ್ಡ ಅಪಾಯಕಾರಿ ಎಂದಿದ್ದಾರೆ,

ಎಷ್ಟೇ ಒಕ್ಕಟ್ಟಾದರೂ ಮೋದಿ ಸೋಲಿಸಲು ಸಾಧ್ಯವಿಲ್ಲ ಎಂದ ಮುತಾಲಿಕ್
ಶ್ರೀರಾಮ ಸೇನೆಯಿಂದಲೂ ಮೋದಿ ಗೆಲ್ಲಿಸಿ, ದೇಶ ಉಳಿಸಿ ಅಭಿಯಾನ ಆರಂಭಿಸುತ್ತೇವೆ,
ಪ್ರತಿಪಕ್ಷಗಳು ಏನೇ ಸರ್ಕಸ್ ಮಾಡಿದರೂ ಮೋದಿ ಮಣಿಸಲು ಆಗಲ್ಲ ಎಂದರು..

ಪ್ರತಿಪಕ್ಷಗಳಿಗೆ ಮುಸ್ಲಿಂ ತುಷ್ಠೀಕರಣ ಬೇಕಿದೆಯೇ ಹೊರತು ಹಿಂದುತ್ವ ಬೇಡ,
ದೇಶಕ್ಕಾಗಿ ಹೋರಾಡಿದ ಸಾವರ್ಕರ್, ಭಗತ್ ಸಿಂಗ್ ಪಾಠಗಳನ್ನು
ಕಾಂಗ್ರೆಸ್ ಪಠ್ಯದಿಂದ ತೆಗೆದಿದ್ದು ಏಕೆ??
ಇವರಿಗೆ ಭ್ರಷ್ಟರು, ದೇಶದ್ರೋಹಿಗಳು ಬೇಕೇ ಹೊರತು ದೇಶ ಭಕ್ತರು ಬೇಡ ಎಂದು ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು..

ರಾಜ್ಯದಲ್ಲಿ ಬಿಜೆಪಿ ನೆಗಟಿವ್ ಓಟಿನಿಂದ ಕಾಂಗ್ರೆಸ್ ಗೆದ್ದಿದೆಯೇ ಹೊರತು ಇದು ಕಾಂಗ್ರೆಸ್ ಗೆಲುವಲ್ಲ,
ದೇಶಕ್ಕೆ ಮೋದಿ ಬೇಕು, ದೇಶ ಸುರಕ್ಷಿತ ಇದ್ದರೆ ರಾಜ್ಯಗಳು ಸುರಕ್ಷಿತ ಇರುತ್ತವೆ,
ಇಲ್ಲವಾದರೆ ನಮ್ಮ ರಾಜ್ಯವೂ ತಾಲಿಬಾನ್ ಆಗಲಿದೆ ಎಂದ ಮುತಾಲಿಕ್, ನಾವು ಯಾವತ್ತಿಗೂ ದೇಶದ ಭದ್ರತೆ ಕಾಯುವ ನಿಟ್ಟಿನಲ್ಲಿ ವಿಚಾರ ಮಾಡಿ ಮೋದಿಗೆ ಶಕ್ತಿಯಾಗಿ ನಿಲ್ಲುತ್ತೇವೆ ಎಂದಿದ್ದಾರೆ..

ವರದಿ ಪ್ರಕಾಶ ಕುರಗುಂದ..