ಪ್ಲಾಸ್ಟಿಕ್ ಬಳಕೆ ಶೂನ್ಯ ಮಾಡಲು ಬೀದಿ ಬದಿ ವ್ಯಾಪಾರಿಗಳ ಪಾತ್ರ ಪ್ರಮುಖ.
ಮಹಾನಗರ ಪಾಲಿಕೆ ಆಯುಕ್ತೆ ಶುಭಾ ಬಿ.
ಬೆಳಗಾವಿ : ಪ್ಲಾಸ್ಟಿಕ್ ಬಳಕೆ ಶೂನ್ಯವಾದಲ್ಲಿ ಸ್ವಚ್ಛ ಸುಂದರ ಬೆಳಗಾವಿ
ಬೀದಿ ಬಳಿ ವ್ಯಾಪಾರಿಗಳ ಪಾತ್ರ ಪ್ರಮುಖವಾಗಿದೆ
ಬೀದಿ ಬದಿ ವ್ಯಾಪಾರಸ್ಥರು ಒಗ್ಗಟ್ಟಾಗಿರಬೇಕು
ವ್ಯಾಪರಸ್ಥರು ಸ್ಥಳಾವಕಾಶ ಮಾಡಿಕೊಂಡು ವ್ಯಾಪಾರ ನಡೆಸಿ
ಬೀದಿ ಬಳಿ ವ್ಯಾಪಾರಿಗಳು ನಿಮ್ಮ ಬಳಿ ಬರುವ ಗ್ರಾಹಕರಿಗೆ ಮನೆಯಿಂದ ಕೈ ಚೀಲಗಳನ್ನು ತೆಗೆದುಕೊಂಡು ಬಾ ಅಕ್ಕಾ ಅಣ್ಣಾ ಅಪ್ಪಾ ಎಂದು ಕೈ ಮುಗಿದು ಹೇಳಿದರೆ ಬೆಳಗಾವಿ ಮಹಾನಗರ ಸುಂದರ ನಗರವಾಗುತ್ತೆ. ಪ್ಲಾಸ್ಟಿಕ್ ಬಳಕೆ ಶೂನ್ಯ ಮಾಡಲು ಬೀದಿ ಬಳಿ ವ್ಯಾಪಾರಿಗಳ ಪಾತ್ರ ಪ್ರಮುಖವಾಗಿದೆ ಎಂದು ಮಹಾನಗರ ಪಾಲಿಕೆಯ ಆಯುಕ್ತೆ ಶುಭಾ ಬಿ ಹೇಳಿದರು.
ಬೆಳಗಾವಿ ಮಹಾನಗರ ಪಾಲಿಕೆಯ ಪರಿಷತ್ ಸಭಾಗೃಹದಲ್ಲಿ ಮಹಾಪೌರ ಮಂಗೇಶ್ ಪವಾರ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ನಗರ ಬೀದಿ ಬದಿ ವ್ಯಾಪಾರಿಗಳ ಬೆಂಬಲ ಉಪಘಟಕ ತಾತ್ಕಾಲಿಕ ಪಟ್ಟಣ ಮಾರಾಟ ಸಮಿತಿ ರಚನೆ ಕುರಿತು ನಡೆದ ಸಭೆಯಲ್ಲಿ ಅವರು ಮಾತನಾಡಿ, ಚುನಾವಣೆಯಲ್ಲಿ ಗೆದ್ದಿದ್ದೇವಿ ಅಲ್ಲಾ ಬೀದಿ ಬದಿ ವ್ಯಾಪಾರಸ್ಥರು ಒಗ್ಗಟ್ಟಾಗಿರಬೇಕು ನೀವು ಒಗ್ಗಟ್ಟಾಗಿ ನಿಂತಾಗ ನಮ್ಮ ಪಾಲಿಕೆಯಿಂದ ದೊರೆಯುವ ಸೌಲಭ್ಯಗಳು ನೀವು ಹಕ್ಕಿನಿಂದ ಕೇಳಬಹುದಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರಾದ ಶುಭಾ ಬಿ ಅವರು ಹೇಳಿದರು. ಬೈಟ್
ಆಡಳಿತಪಕ್ಷದ ನಾಯಕ ಹನುಮಂತ ಕೊಂಗಾಲಿ ಮಾತನಾಡಿ ಇಲ್ಲಿನ ಮಾರ್ಗಸೂಚಿ ಪ್ರಕಾರ ಕರ ದರ ನಿಗಧಿ ಮಾಡುತ್ತಾರೆ ಬೀದಿ ಬಳಿ ವ್ಯಾಪರಸ್ಥರು ಸ್ಥಳಾವಕಾಶ ಮಾಡಿಕೊಂಡು ವ್ಯಾಪಾರ ನಡೆಸಿ ನಿಮ್ಮ ಜೊತೆಯಲ್ಲಿ ಅಧಿಕಾರಿಗಳು ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಹೊಂದಾಣಿಕೆಯಿಂದ ಇರುವಂತೆ ವಿನಂತಿಸಿದರು.
ಇದೇ ವೇಳೆ ನಗರ ಬೀದಿ ಬದಿ ವ್ಯಾಪರಿಗಳ ಬೆಂಬಲ ಉಪಘಟಕ ತಾತ್ಕಾಲಿಕ ಪಟ್ಟಣ ಮಾರಾಟ ಸಮಿತಿಯ ಖಾಲಿ ಸ್ಥಾನಗಳಿಗಾಗಿ ಚುನಾವಣೆಯನ್ನು ನಡೆಸಲಾಯಿತು.
ಇದೇ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಮುಝಮ್ಮಿಲ್ ಢೋಣಿ ಸೇರಿದಂತೆ ಪಾಲಿಕೆಯ ಸಿಬ್ಬಂದಿ ಸೇರಿದಂತೆ ಬೀದಿ ಬಳಿ ವ್ಯಾಪಾರಿಗಳು ಹಾಜರಿದ್ದರು.