ಬಂಜಾರ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಸಚಿವರಲ್ಲಿ ಮನವಿ..
ಸಮುದಾಯ ಭವನಕ್ಕೆ ಜಾಗ ನೀಡಬೇಕೆಂಬ ಮನವಿಗೆ ಸಚಿವರ ಸಕಾರಾತ್ಮಕ ಸ್ಪಂದನೆ..
ಬೆಂಗಳೂರು : ಬೆಳಗಾವಿ ನಗರದಲ್ಲಿ ಹತ್ತಾರು ವರ್ಷಗಳಿಂದ ಸಾವಿರಾರು ಸಂಖ್ಯೆಯಲ್ಲಿ ಬಂಜಾರ ರಹವಾಸಿಗಳು ವಾಸವಾಗಿದ್ದು, ಈ ಸಮಾಜ ಅತ್ಯಂತ ಬಡತನದಲ್ಲಿ ತಮ್ಮ ಜೀವನ ಸಾಗಿಸುತ್ತಿದೆ. ಬೆಳಗಾವಿಯಂತಹ ಮಹಾ ನಗರದಲ್ಲಿ ನಮ್ಮ ಸಮುದಾಯಕ್ಕೆ ಒಂದು ಸಮುದಾಯ ಭವನದ ಅವಶ್ಯಕತೆ ಇದ್ದು, ಅದಕ್ಕೆ ಜಾಗೆಯನ್ನು ಮಂಜೂರು ಮಾಡಿ ಕೊಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರಲ್ಲಿ ಬಂಜಾರ ಸಮುದಾಯದ ಮುಖಂಡರಾದ ಪಾಂಡುರಂಗ ನಾಯಿಕ ಅವರು ಮನವಿ ಮಾಡಿಕೊಂಡಿದ್ದಾರೆ.
ಬುಧವಾರ ಸಚಿವರ ಬೆಂಗಳೂರಿನ ಕಚೇರಿಯಲ್ಲಿ ಬೇಟಿ ಮಾಡಿದ ಸಮುದಾಯದ ಪ್ರಮುಖರು, ಸಮುದಾಯ ಭವನದ ನಿರ್ಮಾಣಕ್ಕೆ ಜಾಗ ಮಂಜೂರಾತಿಗಾಗಿ ಮನವಿ ಮಾಡಿಕೊಂಡಿದ್ದು, ನಮ್ಮ ಸಮಾಜದ ಮದುವೆ, ಸಭೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಲು ಯಾವುದೇ ಭವನಗಳು ಇರುವದಿಲ್ಲ, ಆದಕಾರಣ ಬೆಳಗಾವಿ ಸುತ್ತಮುತ್ತ 1ಎಕರೆ ಅಷ್ಟು ಜಾಗೆಯನ್ನು ನೀಡಿದರೆ, ಇಡೀ ಸಮುದಾಯಕ್ಕೆ ಅನುಕೂಲ ಆಗುವದು ಎಂದು ಮನವಿ ಮಾಡಿಕೊಂಡಿದ್ದಾರೆ.
ಬಂಜಾರ ಸಮುದಾಯದ ಪ್ರಧಾನ ಕಾರ್ಯದರ್ಶಿಗಳಾದ ಪಾಂಡುರಂಗ ನಾಯಕ ಹಾಗೂ ಸಮುದಾಯದ ಇತರ ಸದಸ್ಯರ ಮನವಿಗೆ ಸಕಾರಾತ್ಮಕ ಸ್ಪಂದನೆ ನೀಡಿದ ಸಚಿವರು, ಬರುವ ದಿನಗಳಲ್ಲಿ ಸಮುದಾಯಕ್ಕೆ ಅನುಕೂಲ ಆಗುವ ನಿಟ್ಟಿನಲ್ಲಿ ಸಹಕಾರ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ..
ವರದಿ ಪ್ರಕಾಶ್ ಬಸಪ್ಪ ಕುರಗುಂದ..