ಅಂಗಾಂಗ ಕಸಿಯಲ್ಲಿ ಮತ್ತೊಂದು ಸಾಧನೆಗೈದ ಕೆಎಲ್ಇ ಆಸ್ಪತ್ರೆ ..
ಬಡ ರೋಗಿಗಳಿಗೂ ಈ ಸೌಲಭ್ಯ ದೊರಕುವಂತೆ ಮಾಡಿದರೆ ಆಸ್ಪತ್ರೆಗೂ ಒಂದು ಸಾರ್ಥಕತೆ..
ಬೆಳಗಾವಿ : ಮಂಗಳವಾರ ಬೆಳಗಾವಿಯ ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಸಭಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ ಪ್ರಭಾಕರ ಕೋರೆ ಹಾಗೂ ತಜ್ಞ ವೈದ್ಯರು, ಇತ್ತೀಚೆಗೆ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆಸಿದ ಹೃದಯ ಕಸಿ ಹಾಗೂ ಅಂಗಾಂಗ ಕಸಿಗಳ ಬಗ್ಗೆ ಮಾಹಿತಿ ನೀಡಿದರು..
ಕಳೆದ ಎಂಟು ದಿನಗಳ ಹಿಂದೆ, ಕೆಎಲ್ಇ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ, ಹೃದಯ ಶಸ್ತ್ರಚಿಕಿತ್ಸಾ ವಿಭಾಗವು 18 ಹಾಗೂ 23 ವರ್ಷದ ಇಬ್ಬರು ಯುವಕರಿಗೆ ಯಶಸ್ವಿ ಹೃದಯ ಕಸಿ ನೆರವೇರಿಸುವ ಮೂಲಕ ಅಂಗಾಗ ಕಸಿಯಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದೇವೆ ಎಂದು ಆಸ್ಪತ್ರೆಯ ಮುಖ್ಯ ಕಸಿ ಶಸ್ತ್ರಚಿಕಿತ್ಸಾ ತಜ್ಞ ವೈದ್ಯರಾದ ಡಾ ರಿಚರ್ಡ್ಸ್ ಸಲ್ಡಾನಾ ಅವರು ಹೇಳಿದ್ದಾರೆ..

ಈ ಮೂಲಕ ಆಸ್ಪತ್ರೆ 11 ಮತ್ತು 12ನೇ ಹೃದಯ ಕಸಿ ಮಾಡುವ ಮೂಲಕ ಅಂಗಾಂಗ ಕಸಿಯಲ್ಲಿ ರಾಜ್ಯದಲ್ಲೇ ಉತ್ತಮ ಸಾಧನೆ ಮಾಡಿ , ಗುಣಮಟ್ಟದ ಆಸ್ಪತ್ರೆ ಎನಿಸಿಕೊಂಡಿದೆ, ಜಮಕಂಡಿಯ 18 ವರ್ಷದ ಯುವಕ ಅನೇಕ ದೈಹಿಕ ಸಮಸ್ಯೆಗಳನ್ನು ಹೊಂದಿ, ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆ ಸೇರಿ ಹಲವು ಆಸ್ಪತ್ರೆಗಳಿಗೆ ಅಳೆದಾಡಿದ್ದ, ಅವರು ಡೈಲೇಟೆಡ್ ಕಾರ್ಡಿಯೋಮಿಯೋಪತಿ ಎಂಬ ರೋಗದಿಂದ ಬಳಲುತ್ತಿದ್ದು, ಹೃದಯ ಕಾರ್ಯ ಶೇ 14 ರಷ್ಟು ಮಾತ್ರ ಕಾರ್ಯ ನಿರ್ವಹಿಸುತ್ತಿತ್ತು, ಇದರಿಂದ ಆತನಿಗೆ ಹೃದಯ ಕಸಿ ಅನಿವಾರ್ಯವಾಗಿತ್ತು, ಕಸಿ ಮಾಡಿದ 11 ನೇ ರೋಗಿಯಾಗಿರುವ ಇವರು ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ..
ಇನ್ನು ಹುಕ್ಕೇರಿ ಪದವಿ ಮುಗಿಸಿದ 23 ವರ್ಷದ ಯುವತಿ, ವಾಕರಿಕೆ, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಕಾರ್ಡಿಯೋಪಥಿ ಕಾಯಿಲೆಯಿಂದ ಬಳಲುತ್ತಿದ್ದು, ಹೃದಯ ಕಸಿ ಅನಿವಾರ್ಯವಾಗಿತ್ತು, ಯಶಸ್ವಿ ಹೃದಯ ಕಸಿ ನೆರವೇರಿ ಈಗ ಅವರು ಗುಣಮುಖವಾಗಿ ಉನ್ನತ ವ್ಯಾಸಂಗದ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಎಂದರು..
ಇನ್ನು ಕೆಎಲ್ಇ ಕಾರ್ಯಾಧ್ಯಕ್ಷರಾದ ಪ್ರಭಾಕರ ಕೊರೆ ಅವರು ಮಾತನಾಡಿ, ದಾನಿಗಳ ಬಗ್ಗೆ ಹೇಳಬೇಕೆಂದರೆ ಧಾರವಾಡದ ಎಸ್ಡಿಎಂ ಆಸ್ಪತ್ರೆ ಹಾಗೂ ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ಮೆದುಳು ನಿಸ್ಕ್ರಿಯೆಗೊಂಡ ಕಾರಣ ಹೃದಯವನ್ನು ದಾನ ಮಾಡಿದ್ದರು, ಕಸಿ ಸಂಯೋಜಕರು, ಪೊಲೀಸರು, ಮತ್ತು ಆಂಬುಲೆನ್ಸ್ ಸಿಬ್ಬಂದಿಯ ಸಕಾರಾತ್ಮಕ ಸೇವೆಯ ಪರಿಣಾಮ ನಮ್ಮ ಆಸ್ಪತ್ರೆಗೆ ಧಾರವಾಡದಿಂದ ಕೇವಲ 55 ನಿಮಿಷಗಳ ದಾಖಲೆಯ ಸಮಯದಲ್ಲಿ ಹೃದಯವನ್ನು ಸ್ಥಳಾಂತರಿಸಲಾಯಿತು ಎಂಬ ಮಾಹಿತಿ ನೀಡಿದರು..
ಇದುವರೆಗೆ ಆಸ್ಪತ್ರೆಯಲ್ಲಿ 12 ಹೃದಯ, 9 ಲಿವರ್, 76 ಕಿಡ್ನಿ, ಹಾಗೂ 80 ಕಾರ್ನಿಯಾ ಕಸಿಗಳನ್ನು ಯಶಸ್ವಿಯಾಗಿ ನೆರವೇರಿಸಿದ್ದು, ದೂರದ ಅನೇಕ ಮಹಾ ನಗರಗಳಿಗೆ ಚರ್ಮದ ಸರಬರಾಜು ಮಾಡಿದೆ ಎಂದರು,
ಇಷ್ಟೆಲ್ಲಾ ಸಾಧನೆ ಮಾಡುತ್ತಿರುವ ಕೆಎಲ್ಇ ಆಸ್ಪತ್ರೆ, ಇಂತಹ ಅಂಗಾಂಗ ಕಸಿ ಚಿಕಿತ್ಸೆ ಬಡ ಸಮುದಾಯದ ಜನರಿಗೂ ಸಿಗುವಂತೆ ಮಾಡಬೇಕು, ಇದರ ಉಪಯೋಗವನ್ನು ಬಡ ಹಾಗೂ ಮಧ್ಯಮ ಕುಟುಂಬದ ಜನರು ಪಡೆದು ಅವರು ಜೀವ, ಜೀವನವನ್ನು ಪಡೆಯುವಂತೆ ಆಗಬೇಕು, ಆಗ ಮಾತ್ರ ಸೇವೆಗೆ, ಮಾನವೀಯತೆಗೆ, ಸಾರ್ಥಕತೆಗೆ ನಿಜ ಅರ್ಥ ಸಿಗುವದು,,

ಹೃದಯ ಕಸಿಗೆ 10 ರಿಂದ 12 ಲಕ್ಷ ವೆಚ್ಚವನ್ನು ಯಾವ ಬಡವ ಕೊಡುತ್ತಾನೆ? ಅದಕ್ಕಾಗಿ ಸರ್ಕಾರದೊಂದಿಗೆ, ವೈದ್ಯಕೀಯ ರಂಗದ ಮಹನೀಯರಿಗೆ ಚರ್ಚಿಸಿ, ಇಂತಹ ಜೀವ ಉಳಿಸುವ ವೈದ್ಯಕೀಯ ಸೌಲಭ್ಯಗಳು ಎಲ್ಲಾ ಜನರಿಗೂ ಸಿಗುವಂತೆ ಆಗಬೇಕು, ಯಾಕೆಂದರೆ ಜೀವ ಎಲ್ಲರದ್ದೂ ಒಂದೇ ಅಲ್ಲವೇ ???
ವರದಿ ಪ್ರಕಾಶ ಕುರಗುಂದ..