ಬಹುರೂಪಿ ವೇಷದ ಗಾಯಕರಿಗೆ ಅಮ್ಮ ಪ್ರತಿಷ್ಟಾನದಿಂದ ಸನ್ಮಾನ..

ಬಹುರೂಪಿ ವೇಷದ ಗಾಯಕರಿಗೆ ಅಮ್ಮ ಪ್ರತಿಷ್ಟಾನದಿಂದ ಸನ್ಮಾನ..

ಲಕ್ಷ್ಮೇಶ್ವರ : ಜಿಲ್ಲೆಯ ಬಾಲೆಹೊನ್ನೂರು ಗ್ರಾಮದ 70 ವರ್ಷಗಳಿಂದ ಬಹೂರೂಪಿ ವೇಷದಲ್ಲಿರುವ ಚನ್ನಬಸಪ್ಪ, ಮಾರುತಿ, ತಿಪ್ಪೇಸ್ವಾಮಿ ಗಣಾಚಾರಿಯವರು ದೇವರು ಮತ್ತು ತಂದೆ / ತಾಯಿಯವರ ಮೇಲೆ ಉತ್ತಮ ಹಾಡು ಹಾಡುತ್ತಾ ಜೀವನ ಸಾಗಿಸುತ್ತಾರೆ.

ಅವರಿಗೆ ಬೆಳಗಾವಿ ನಗರದ ಕೃಷಿ ಪರಿಕರ ಮಾರಾಟಗಾರರು, ಸಮಾಜ ಸೇವಕರು, ಕನ್ನಡ ಮತ್ತು ರೈತಪರ ಹೋರಾಟಗಾರರು, ರಕ್ತದಾನಿಗಳು ಮತ್ತು ಅಮ್ಮ ಪ್ರತಿಷ್ಠಾನದ ಅಧ್ಯಕ್ಷರಾದ, ಬಾಳಾಸಾಹೇಬ ಕ. ಉದಗಟ್ಟಿ. ಬಾಬುಲಾಲ ಬುರಾನಾ. ಸಂತೋಷ ಪಾಟೀಲ ಮತ್ತು ರವಿವಾರ ಪೇಠೆಯ ವ್ಯಾಪಾರಸ್ಥರ ಪರವಾಗಿ ಆತ್ಮೀಯ ಸನ್ಮಾನವನ್ನು ನೆರವೇರಿಸಿ, “ಕಲಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಭಗವಂತ ಅವರಿಗೆ ಆಯುಷ್ಯ, ಆರೋಗ್ಯ, ಸಂಪತ್ತು, ನೀಡಲಿ ಎಂದು ಬಾಳಾಸಾಹೇಬ ಉದಗಟ್ಟಿ ಹಾಗೂ ಅವರ ಆಪ್ತವಲಯ ಪ್ರಾರ್ಥನೆ ಸಲ್ಲಿಸಿದರು.