ಬಾಬಾಸಾಹೇಬರ ಬಗ್ಗೆ ಎಲ್ಲರೂ ಗೌರವ ಪ್ರೀತಿ ಕೊಡ್ತಾರೆ..
ಯಾವಾಗ ಹೆಸರು ಇಡುವ ಸಮಯ ಬರುತ್ತೆ ಆಗ ಹಿಂದೆ ಸರಿಯಬಾರದು..
ಸಂದೀಪ್ ಜೀರಾಗ್ಯಾಳ, ನಗರ ಸೇವಕರು ಬೆಳಗಾವಿ ಪಾಲಿಕೆ.
ಬೆಳಗಾವಿ : ಡಾ ಬಾಬಾಸಾಹೇಬ ಅಂಬೇಡ್ಕರ್ ಅವರ ಬಗ್ಗೆ ಎಲ್ಲರಿಗೂ ಪ್ರೀತಿ, ಗೌರವ ಇದೆ ಆದರೆ ರಸ್ತೆಗೆ ಅವರ ಹೆಸರು ಇಡುವಾಗ, ಮೂರ್ತಿ ಸ್ಥಾಪಿಸುವ, ಇತರ ಗುರುತರ ಕಾರ್ಯ ಮಾಡುವಾಗ ಯಾರು ಯಾವತ್ತೂ ಹಿಂದೇಟು ಹಾಕಬಾರದು, ದೇಶಕ್ಕೆ ಅವರ ಕೊಡುಗೆಯನ್ನು ನಾವೆಲ್ಲಾ ಅರ್ಥ ಮಾಡಿಕೊಂಡು ಬಾಬಾಸಾಹೇಬರ ಪರವಾದ ಕಾರ್ಯಗಳನ್ನು ಮಾಡೋಣ ಎಂದು ನಗರ ಸೇವಕ ಸಂದೀಪ್ ಜೀರಾಗ್ಯಾಳ ಅವರು ಹೇಳಿದ್ದಾರೆ.
ಮಂಗಳವಾರ ಪಾಲಿಕೆಯ ಪರಿಷತ್ ಸಭಾ ಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ನಗರ ಸೇವಕರು, ನಗರದಲ್ಲಿರುವ ಅಂಬೇಡ್ಕರ ಉದ್ಯಾನದ ಅಂಬೇಡ್ಕರ ಅವರ ಮೂರ್ತಿ ಸುಮಾರು ಐವತ್ತು ವರ್ಷಗಳ ಹಿಂದಿನದು, ಅದಕ್ಕಾಗಿ ಈಗ ಆಧುನಿಕ ಶೈಲಿಯ, ಆಕರ್ಷಣೀಯ ಹೊಸ ಪ್ರತಿಮೆಯನ್ನು ನಿರ್ಮಿಸಲು ಎಲ್ಲಾ ಶಾಸಕರು, ಪಾಲಿಕೆ ಸದಸ್ಯರು ಹಾಗೂ ಸಮುದಾಯದ ಪ್ರಮುಖರು ಒಟ್ಟಿಗೆ ಸೇರಿ ಚರ್ಚಿಸಿ, ಆದಷ್ಟು ಬೇಗ ಬಾಬಾಸಾಹೇಬರ ಹೊಸ ಮೂರ್ತಿಯನ್ನು ನಿರ್ಮಿಸುವಂತಾಗಬೇಕು ಎಂದಿದ್ದಾರೆ.

ಕ್ಲಬ್ ರಸ್ತೆಗೆ ಬಿ ಶಂಕರಾನಂದ ಅವರ ಹೆಸರು ಇಟ್ಟಿದ್ದಕ್ಕೆ ಸಮುದಾಯದ ಪರವಾಗಿ ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಸಮುದಾಯದ ಪರವಾಗಿ ಧನ್ಯವಾದ ತಿಳಿಸಿದ ಅವರು, ಅಂಬೇಡ್ಕರ ಉದ್ಯಾನದಲ್ಲಿ ಡಿಜಿಟಲ್ ಗ್ರಂಥಾಲಯ ಆಗಬೇಕು, ಅಲ್ಲಿ ಬರುವ ನೂರಾರು ವಿಧ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲ ಆಗುತ್ತದೆ, ಜೊತೆಗೆ ಚೆನ್ನಮ್ಮ ವೃತ್ತದಿಂದ ಕೃಷ್ಣದೇವರಾಯ ವೃತ್ತದವರೆಗೆ ಇರುವ ಎಲ್ಲಾ ಅಂಗಡಿಗಳ ಮೇಲೆ ಅಂಬೇಡ್ಕರ ಮಾರ್ಗ ಅಂತಾ ಕಡ್ಡಾಯವಾಗಿ ಬರೆಸಬೇಕು ಎಂದು ಸಭೆಯಲ್ಲಿ ತಮ್ಮ ವಿಷಯ ಮಂಡಿಸಿದರು.
ಇದಕ್ಕೆ ಧ್ವನಿಗೂಡಿಸಿದ ನಾಮನಿರ್ದೇಶಿತ ನಗರ ಸೇವಕ ಪಾಲಿಕೆ ಎದುರಿಗೆ ಅಂಬೇಡ್ಕರ ಅವರು ಅಧ್ಯಯನ ಮಾಡಿದ ಎಲ್ಲಾ ಪದವಿ, ಕೋರ್ಸುಗಳ ಪಟ್ಟಿ ಮಾಡಿದ ದೊಡ್ಡ ಫಲಕವನ್ನು ಹಾಕಬೇಕು, ಪಾಲಿಕೆ ಮಾಡದಿದ್ದರೆ ಅದಕ್ಕೆ ಆಗುವ ಖರ್ಚನ್ನು ನಾನು ನೀಡುತ್ತೇನೆ ಅದನ್ನು ಮಾಡಿಸಿ ಎಂದು ಮನವಿ ಮಾಡಿಕೊಂಡರು.
ಸರ್ವ ಸಭಾ ಸದಸ್ಯರು ಒಪ್ಪಿಗೆಯ ಮೇರೆಗೆ ಬಾಬಾಸಾಹೇಬರ ನವೀನ ಮೂರ್ತಿ ಪ್ರತಿಷ್ಠಾನದ ಕುರಿತಾಗಿ ಒಂದು ವಿಶೇಷ ಸಭೆ ಕರೆದು ತೀರ್ಮಾನ ತೆಗೆದುಕೊಳ್ಳೋಣ ಎಂದು ಈ ವಿಷಯಕ್ಕೆ ಎಲ್ಲರ ಸಮ್ಮತಿಯೊಂದಿಗೆ ಅನುಮೋದನೆ ನೀಡಲಾಯಿತು.
ವರದಿ ಪ್ರಕಾಶ್ ಬಸಪ್ಪ ಕುರಗುಂದ..