ಬಾಲಗಂಗಾಧರ ತಿಲಕ್ ಅವರು ಸ್ವಾತಂತ್ರ್ಯ ಸಂಗ್ರಾಮದ ಅಮೂಲ್ಯ ರತ್ನ..!!!

ಬಾಲಗಂಗಾಧರ ತಿಲಕ್ ಅವರು ಸ್ವಾತಂತ್ರ್ಯ ಸಂಗ್ರಾಮದ ಅಮೂಲ್ಯ ರತ್ನ…

ರಾಮಚಂದ್ರ ಎಡಕೆ ಬಣ್ಣನೆ..

ಬೆಳಗಾವಿ : ಬುಧವಾರ ನಗರದ ಫೋರ್ಟ್ ರಸ್ತೆಯ, ಪಾಟೀಲ್ ಗಲ್ಲಿಯಲ್ಲಿರುವ, ಬೆಳಗಾವಿ ಶಿಕ್ಷಣ ಸಂಸ್ಥೆಯ ಶ್ರೀಮತಿ ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ತಿಲಕ್ ಅವರ ಪುಣ್ಯತಿಥಿಯ ಕಾರ್ಯಕ್ರಮದಲ್ಲಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬೆಳಗಾವಿ ಕಾರ್ಯನಿರ್ವಾಹಕರಾದ ರಾಮಚಂದ್ರ ಏಕಡೆಯವರು ಈ ಮೇಲಿನಂತೆ ಹೇಳುತ್ತಾ, ಸ್ವಾತಂತ್ರ ಸೇನಾನಿ ತಿಲಕ್ ಅವರನ್ನು ಬಣ್ಣಿಸಿದ್ದಾರೆ..

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗಿಯಾದ ಅವರು, ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರು ದೇಶಕಂಡ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಶ್ರೇಷ್ಠ ಹೋರಾಟಗಾರರೊಬ್ಬರಾಗಿದ್ದು, ಕ್ರಾಂತಿಕಾರಿ ವಿಚಾರ ಹೊಂದಿರುವ, ಸ್ವಾತಂತ್ರ್ಯ ಸಂಗ್ರಾಮದ ಅಮೂಲ್ಯ ರತ್ನವಾಗಿದ್ದು, ಅವರಿಂದ ಅನೇಕರು ಪ್ರೇರಿತರಾಗಿ ಭಾರತ ದೇಶಕ್ಕೆ ಸ್ವಾತಂತ್ರ ತರುವಲ್ಲಿ ಯಶಸ್ವಿಯಾದರು ಎಂದಿದ್ದಾರೆ..

ವಿಧ್ಯಾರ್ಥಿಗಳು ಕೇವಲ ಪಠ್ಯಪುಸ್ತಕದ ವಿಷಗಳನ್ನು ಅಧ್ಯಯನ ಮಾಡದೇ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಾನ್ ವ್ಯಕ್ತಿಗಳ ಬಗ್ಗೆ ಅಧ್ಯಯನ ಮಾಡಿ, ಅವರ ಸಾಧನೆಗಳಿಂದ ಪ್ರೇರಿತರಾಗಿ, ತಾವು ಕೂಡ ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬೇಕು ಎಂಬ ಕಿವಿಮಾತು ಹೇಳಿದರು.

ಇದೇ ವೇಳೆ ತಿಲಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಗಣ್ಯರು, ತಿಲಕರ ಕುರಿತಾಗಿ ಏರ್ಪಡಿಸಿದ ಪ್ರಭಂದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು..

ಇನ್ನು ಈ ಪುಣ್ಯತಿಥಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷರಾದ ಚಿಂತಾಮಣಿ ಗ್ರಾಮೋಪಾಧ್ಯಾಯ ವಹಿಸಿದ್ದು, ಗೌರವ ಅತಿಥಿಗಳಾಗಿ ವಿಜೇಂದ್ರ ಗುಡಿ, ದಿಲೀಪ್ ಪಾಟೀಲ್, ಆತ್ಮಲಿಂಗ ಬಾಗೇವಾಡಿ, ಸರಸ್ವತಿ ದೇಸಾಯಿ, ಉಪಸ್ಥಿತರಿದ್ದು, ಶಾಲಾ ಮುಖ್ಯೋಪಾಧ್ಯಾಯರಾದ ಎಂ ಕೆ ಮಾದರ ಮಾತನಾಡಿದರು.

ಅದಿತಿ ಸುಬೇದಾರ ಸ್ವಾಗತಿಸಿದರೆ, ವೈಷ್ಣವಿ ಸುಪೆ ವಂದಿಸಿದರು, ಸ್ಮಿತಾ ಗರಗ ಕಾರ್ಯಕ್ರಮದ ನಿರೂಪಣೆ ಮಾಡಿದರೆ, ಸುಲೋಚನಾ ಐಹೊಳೆ ಕಾರ್ಯಕ್ರಮದ ಆಯೋಜನೆ ಮಾಡಿದ್ದರು, ಶಾಲಾ ಸಿಬ್ಬಂದಿ ಹಾಗೂ ವಿಧ್ಯಾರ್ಥಿಗಳು ಕಾರ್ಯಕ್ರಮದ ಸೊಗಸಿಗೆ ಸಾಕ್ಷಿಯಾಗಿದ್ದರು..

ವರದಿ ಪ್ರಕಾಶ ಕುರಗುಂದ..