ಬಿಗ್ ಬಾಸ್ ಸ್ಪರ್ಧಿಗಳಿಗೆ ವ್ಯಂಗ್ಯವಾಗಿ ಕೇಕ್ ನೀಡಿ, ಕ್ಲಾಸ್ ತಗೆದುಕೊಂಡು ಕಿಚ್ಚ ಸುದೀಪ್…

ಬಿಗ್ ಬಾಸ್ ಸ್ಪರ್ಧಿಗಳಿಗೆ ವ್ಯಂಗ್ಯವಾಗಿ ಕೇಕ್ ನೀಡಿ, ಕ್ಲಾಸ್ ತಗೆದುಕೊಂಡು ಕಿಚ್ಚ ಸುದೀಪ್..

ಜಗದೀಶ್ ವಿಚಾರಕ್ಕೆ ಕಿಚ್ಚನ ಪ್ರಶ್ನೆಗೆ ಗಪ್ ಚುಪ್ಪಾದ ಸ್ಪರ್ಧಿಗಳು..

ಕೋಪ, ಸಂಕಟ ಭಾವನಾತ್ಮಕವಾಗಿ ಸ್ಪರ್ಧಿಗಳನ್ನು ಪ್ರಶ್ನೆ ಮಾಡಿದ ಕಿಚ್ಚನ ಪಂಚಾಯ್ತಿಗೆ ಜನರಿಂದ ಜೈಕಾರ..

ಬೆಳಗಾವಿ : ಕನ್ನಡ ಕಲರ್ಸ್ ವಾಹಿನಿಯಲ್ಲಿ ಬರುವ ಕನ್ನಡ ಬಿಗ್ ಬಾಸ್ ಪ್ರದರ್ಶನ ಸೀಜನ್ 11 ಇದು ಜನರ ಮೆಚ್ಚುಗೆಗೆ ಪಾತ್ರವಾಗಿ ಎರಡು ವಾರಗಳ ಕಾಲ ಉತ್ತಮ ಪ್ರತಿಕ್ರಿಯೆ ಪಡೆದು ಪ್ರಸಾರವಾಗುತ್ತಿತ್ತು, ಆದರೆ ಮೂರನೇ ವಾರದಲ್ಲಿ ಸ್ಪರ್ಧಿಗಳ ನಡುವೆ ಕೆಲ ಮಾತಿನ ಚಕಮಕಿ ನಡೆದು, ಘರ್ಷಣೆಗಳು ಉಂಟಾಗಿ, ಕರ್ನಾಟಕ ಕ್ರಶ್ ಎನಿಸಿಕೊಂಡ ಸ್ಪರ್ಧಿ ಜಗದೀಶ್ ಅವರು ಬಿಗ್ ಬಾಸ್ ಆದೇಶದ ಪ್ರಕಾರ ಮನೆಯಿಂದ ಹೊರಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು, ಅವರ ಜೊತೆ ಘರ್ಷಣೆಗೆ ಇಳಿದ ರಂಜಿತ ಎನ್ನುವ ಸ್ಪರ್ಧಿ ಕೂಡಾ ಮನೆಯಿಂದ ಹೊರಗೆ ಹೋಗಿದ್ದರು..

ಈ ಘಟನೆಯಾದ ನಂತರ ಒಂದೆರಡು ದಿನದಲ್ಲಿ “ವಾರದ ಕಥೆ ಕಿಚ್ಚನ ಜೊತೆ” ಎಂಬ ಕಿಚ್ಚನ ಪಂಚಾಯ್ತಿಯ ಸಂಚಿಕೆ ಶನಿವಾರ ಪ್ರಾರಂಭವಾಗಿದ್ದು, ಸಂಚಿಕೆಯ ಮೊದಲಿಗೆ ಕಿಚ್ಚ ಸುದೀಪ ಮನೆಯೊಳಗೆ ಕೇಕ್ ಕಳಿಸಿ ಅದರ ಮೇಲೆ ಅಭಿನಂದನೆಗಳು ಎಂದು ಬರೆಸಿದ್ದರು, ಮನೆಯಲ್ಲಿ 16 ಇದ್ದ ಜನ ಈಗ 14ಕ್ಕೆ ಇಳಿದಿದೆ, ಈಗ ಮನೆ ಶಾಂತ ಆಗಿದೆ, ಅದಕ್ಕೆಲ್ಲ ಸ್ಪರ್ಧಿಗಳ ಒಕ್ಕಟ್ಟವೇ ಕಾರಣ, ಜನತೆ ತಮ್ಮ ಕಾರ್ಯ ಮೆಚ್ಚಿ ಕೇಕ್ ಕಳಿಸಿದ್ದಾರೆ ಎಂದು ಎಲ್ಲರೂ ತಮಗೆ ತಾವೇ ಬೇಶ್ ಎಂದು, ಚಪ್ಪಾಳೆ ಹೊಡೆದುಕೊಂಡು, ನಗುತ್ತಾ ಖುಷಿಯಿಂದ ಕೇಕನ್ನು ತಮ್ಮತಮ್ಮಲ್ಲೇ ತಿನಿಸುತ್ತಾ ಸಂಭ್ರಮಿಸಿದರು..

ನಂತರ ವಾರಾಂತ್ಯದ ಪಂಚಾಯ್ತಿ ನಿರ್ವಾಹಕರಾದ ಕಿಚ್ಚ ಸುದೀಪ್ ಅವರು ಮನೆಯಿಂದ ಹೊರಹೋದ ಜಗದೀಶ್ ಅವರ ಬಗ್ಗೆ ಎಲ್ಲಾ ಸ್ಪರ್ಧಿಗಳನ್ನು ವಿಚಾರಿಸುತ್ತಾರೆ, ಎಲ್ಲರೂ ಅದೇ ದಾಟಿಯಲ್ಲಿ ಜಗದೀಶ್ ಅವರ ಮೇಲೆ ಆರೋಪಗಳ ಸುರಿಮಳೆ ಮಾಡಿ, ಅವರು ಈ ಶೋದಿಂದ ಹೋದದ್ದೇ ಒಳ್ಳೆಯದಾಯಿತು ಎಂಬ ಅಭಿಪ್ರಾಯ ನೀಡುತ್ತಾರೆ, ಆಗ ಕಿಚ್ಚನ ಮೊದಲನೆಯ ಟ್ವಿಸ್ಟ್ ಶುರು ಆಗುತ್ತದೆ, ಈ ಕೆಕನ್ನು ಕನ್ನಡ ಜನತೆ ತಮ್ಮ ಕೆಲಸ ಮೆಚ್ಚಿ ತಮಗೆ ಕಲಿಸಿಲ್ಲ, ಬದಲಾಗಿ, ಇಬ್ಬರು ಸ್ಪರ್ಧಿಗಳು ಹೊರಹೋಗಲು ಕಾರಣ ಆದ ನಿಮಗೆ ಅಭಿನಂದನೆ ನೀಡಲು ನಾನೇ ಈ ಕೇಕ ನಿಮಗೆ ಕಲಿಸಿದ್ದು ಎಂದಾಗ ಎಲ್ಲರ ಮುಖ ಬೇರೆಯದ್ದೇ ಆಗಿತ್ತು.

ಆಮೇಲೆ ಮಾತು ಶುರು ಮಾಡಿದ ಕಿಚ್ಚ ಸುದೀಪ್ ಅವರು, ಜಗದೀಶ ಅವರು ಆಡಿದ ಮಾತುಗಳು, ಅವರ ವರ್ತನೆಯಿಂದ, ಶೋಗೆ ಆಡಿದ ಕೆಲ ನುಡಿಗಳಿಂದ ಬಿಗ್ ಬಾಸ್ ಅವರನ್ನು ಹೊರಹಾಕಿದ್ದು ಸರೀನೇ, ಅದು ಬಿಗ್ ಬಾಸ್ ತೀರ್ಮಾನ ಅದಕ್ಕೆ ನಮ್ಮ ಸಮ್ಮತಿ ಇದೆ, ಆದರೆ ನಿಮ್ಮ ಜೊತೆ ವಾದ ಮಾಡಿಕೊಂಡು, ನಿಮಗೆ ನೋವು ತಂದು, ನಿಮ್ಮಿಂದ ಅವರು ಹೊರಗೆ ಹೋಗಿಲ್ಲ ಎಂಬುದನ್ನು ಮರೆಯಬೇಡಿ ಎಂದರು..

ಅವರು ಮಾಡಿದ್ದು ತಪ್ಪೆಂದರೆ ಇಲ್ಲಿರುವ ನೀವೆಷ್ಟು ಸರಿ ಇದ್ದೀರಾ ಎಂಬ ಪ್ರಶ್ನೆ ಶುರು ಮಾಡಿದ ಕಿಚ್ಚ ಸುದೀಪ್ ಅವರು ಅಕ್ಷರಶಃ ಒಬ್ಬ ಮೇದಾವಿಯಂತೆ ಎಳೆಎಳೆಯಾಗಿ ಎಲ್ಲರ ಲೋಪದೋಷಗಳನ್ನು ವಿವರಿಸುತ್ತಾ “ಶಾಲಿನಲ್ಲಿ ಹೊಡೆದ” ರೀತಿಯಲ್ಲಿ ಮನಸಿಗೆ ಮುಟ್ಟುವಂತೆ ಹೇಳಿದರು.

ಮೊದಲಿಗೆ ಹಂಸ ಅವರಿಗೆ ಪ್ರಶ್ನಿಸಿದ ಸುದೀಪ ಅವರು, ನೀವು ಕ್ಯಾಪ್ಟನ್ ಆಗಿದ್ದಾಗ ನಿಮ್ಮ ಅನುಕೂಲಕ್ಕಾಗಿ ಅವರ ಜೊತೆ ಡಾನ್ಸ್ ಮಾಡಿದ್ದು, ಚೆನ್ನಾಗಿ ವರ್ತಿಸಿದ್ದು, ಅವರು ನಿಮ್ಮನ್ನು ಪ್ರೀತಿಯಿಂದ ಮಾತನಾಡಿದ್ದು, ಎಲ್ಲಾ ಮರೆತು ಕ್ಯಾಪ್ಟನ್ ಮುಗಿದ ನಂತರ ಅವರಿಗೆ ತೊಂದರೆ ಕೊಡುವವರ ಜೊತೆ ಸೇರಿ ತೊಂದರೆ ನಿಡಿದಿರಿ ಎಂದಾಗ, ಗೋಲ್ಡ್ ಸುರೇಶ್ ಕೂಡಾ ಸ್ಪಷ್ಟ ಉತ್ತರ ನೀಡಿ, ಜಗದೀಶ್ ಅವರ ಜೊತೆ ಇದ್ದ ಅನ್ಯೂನ್ಯತೆ ನಂತರ ರಂಜಿತ ಹಾಗೂ ತ್ರಿವಿಕ್ರಮ್ ಜೊತೆ ನಡೆದಿದ್ದು ಅವರಿಗೆ ಬೇಸರವಾಗಿತ್ತು ಎಂಬ ಸಂಗತಿ ಹೇಳಿದ್ದು, ಸುದೀಪ್ ಅವರು ಕಿಡಿಕಾರಿ, “ಅಡುಗೆ ಆದ ಮೇಲೆ ಪಾತ್ರೆ ಕೆಲಸ ಮುಗೀತು ಅಂತ ಬಿಸಾಕುವವರು ಉತ್ತಮ ಅದುಗೆಯವರಲ್ಲ,” ಜೊತೆಗೆ ಪ್ರಾಮಾಣಿಕತೆ ಎನ್ನುವದು ಈ ಮನೆಗೆ ಸರಿ ಎನಿಸುವುದಿಲ್ಲ, ನೀವೆಲ್ಲ ಪ್ರಾಮಾಣಿಕರಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ..

ಧನರಾಜ ಜೊತೆ ಮಾತನಾಡುತ್ತಾ ಜಗದೀಶ ನಿಮ್ಮ ಬಳಿ ಹೇಗೆ ಮಾತನಾಡುತ್ತಿದ್ದರು ಎಂದು ಕೇಳಿದಾಗ, ಜಗಳ ಆದರೂ ಮತ್ತೆ ಅವರು ತುಂಬಾ ಕಾಳಜಿಯಿಂದ ಮಾತನಾಡಿ, ಸಲಹೆ ಸೂಚನೆ ನೀಡುತ್ತಿದ್ದರು, ನನ್ನ ಹೆಂಡತಿ ಫೋನ್ ಮಾಡಿ ಕೂಡಾ ಅವರೊಂದಿಗೆ ಇರು, ನೀನು ಚೆನ್ನಾಗಿ ಕಾಣುತ್ತಿಯಾ ಎಂದಿದ್ದರು, ಮುಖ್ಯವಾಗಿ ಐಶ್ವರ್ಯ ಬಗ್ಗೆ ಮಾತನಾಡಿ, ತಂದೆ ತಾಯಿ ಇಲ್ಲದ ಆ ಮಗುವನ್ನು ನೋಡಿದರೆ ನನ್ನ ಮಗಳೇ ನೆನಪು ಆಗುತ್ತಾಳೆ, ನನಗೂ ಐಶ್ವರ್ಯ ಎಂಬ ಮಗಳಿದ್ದಳು, ಅವಳು ದೈರ್ತದಿಂದ ಇದ್ದು ಎಲ್ಲಾ ಎದುರಿಸಿ ಮುಂದೆ ಬರಬೇಕು ಎಂದು ಹೇಳಿದರು ಎಂದಾಗ ಎಲ್ಲರೂ ಭಾವನಾತ್ಮಕ ಮೌನಕ್ಕೆ ಜಾರಿದ್ದು, ಐಶ್ವರ್ಯ ಕಣ್ಣಂಚಿನಲ್ಲಿ ಕಣ್ಣೀರು ತುಂಬಿತ್ತು.

ಇನ್ನು ಅನುಷಾ ನಿಮಗೆ ಮನೆಯ ಎಲ್ಲರೂ ವಿರೋಧ ಮಾಡಿ ಜಗಳ ಆಡಿದಾಗ ಜೊತೆಗೆ ನಿಂತು ಸಮಾಧಾನ ಮಾಡಿ, ದೈರ್ಯದಿಂದ ಇರು ಎಂದು ಹೇಳಿದವರು ಜಗದೀಶ, ಒಂದು ದಿನ ಮನೆಯವರೆಲ್ಲ ಹಾಡು ಹಾಡುತ್ತಾ ಜಗದೀಶ್ ಅವರನ್ನು ರೆಗಿಸುತ್ತಾ ಹಿಯಾಳಿಸುತ್ತ ಇರುವಾಗ ತಾವು ಅಲ್ಲೇ ಕುಳಿತು ನಗುತ್ತಾ ಮಜಾ ತೆಗೆದುಕೊಳ್ಳುತ್ತಿದ್ದಿರಿ, ನಿಮಗೆ ಸಹಾಯ ಮಾಡಿದ ವ್ಯಕ್ತಿಗೆ ನೋವು ಆಗುತ್ತಿದ್ದಾಗ ನೀವು ಅಲ್ಲಿಂದ ಎದ್ದು ಬರುವದು ನಿಮ್ಮ ಒಳ್ಳೆತನ ಆದರೆ ನೀವು ಅದನ್ನು ಮಾಡದೇ ಅಲ್ಲೇ ಕುಳಿತಿರಿ, ಒಬ್ಬ ಮನುಷ್ಯ ನಮಗೆ ಕಷ್ಟದಲ್ಲಿ ಸಹಾಯ ಮಾಡಿದ್ದೇನೆ ಎಂದರೆ ನಾವು ಅವನಿಗೆ ನೋವು ತರುವ ಸಂಗತಿಯಲ್ಲಿ ಭಾಗಿ ಆಗುತ್ತವೆ ಎಂದರೆ, “ಅಂತವರು ನನ್ನ ಪಾಲಿಗೆ ಇದ್ದು ಸತ್ತಂತೆ” ಎಂದು ಭಾವನಾತ್ಮಕವಾಗಿ ಸುದೀಪ ಮಾತನಾಡಿದ್ದಾರೆ.

ಇನ್ನು ಚೈತ್ರ ಕುಂದಾಪುರಗೆ ಖಡಕ್ಕಾಗಿ ಹೇಳಿದ ಕಿಚ್ಚ, ಜಗದೀಶ್ ಅವರಿಗೆ ನೀವು “ಒಬ್ಬ ಅಪ್ಪನಿಗೆ ಹುಟ್ಟಿದ ಮಗ ಆಗಿದ್ದರೆ” ಎಂದು ಹೇಳಿದ್ದು ನೀವು ಯಾವ ಮಗನ ಅಪ್ಪನನ್ನು ಬೈದಿಲ್ಲ, “ಅವರ ತಾಯಿ ಅನ್ನೋ ಹೆಣ್ಣು ಜೀವಕ್ಕೆ ಕಳಂಕ ತಂದಿದ್ದೀರಾ” ಎಂದು ಖಾರವಾಗಿ ನುಡಿದಿದ್ದಾರೆ, ಮಾನಸ ಬಗ್ಗೆ ಮಾತನಾಡುತ್ತಾ, ಜಗದೀಶ ಅವರು ರೋಲ್ಸ್ ಬ್ರೇಕ್ ಮಾಡಿ ಮನೆಯಿಂದ ಹೊರಗೆ ಹೋಗಿದ್ದಾರೆ ಅಂತಿರಲ್ಲಾ? ನೀವು ಏಷ್ಟೋ ಭಾರಿ ರೂಲ್ಸ್ ಬ್ರೇಕ್ ಮಾಡಿದ್ದೀರಾ, ನೀವೇಕೆ ಇನ್ನು ವಳೆಗೆ ಇದ್ದೀರಿ ಎಂದು ಪ್ರಶ್ನೆ ಮಾಡಿದಾಗ ಮಾನಸಾ ಮುಖ ಕೆಳಗಾಯಿತು..

ಇನ್ನೂ ಇಂದು ರವಿವಾರ ಸಂಜೆ ಕೆಲವು ಸ್ಪರ್ಧಿಗಳಿಗೆ (ಕರ್ನಾಟಕ ಕ್ರಶ್ ಜಗದೀಶ್ ವಿಚಾರದಲ್ಲಿ) ತಾವು ಮಾಡಿದ ಯಡವಟ್ಟಿಗೆ ಕಿಚ್ಚನ ಕಿಡಿ ನುಡಿಗಳು ಬಾಕಿ ಇದ್ದು, ಮಂಜು, ಭವ್ಯ, ಧರ್ಮ, ತ್ರಿವಿಕ್ರಮ, ಮಾನಸಾ, ಮೊಕ್ಷಿತಾ, ಶಿಶಿರ ಹಾಗೂ ಇತರರ ಬಗ್ಗೆ ಮಾತನಾಡುವ ಸಂಚಿಕೆ ರವಿವಾರ ಸಂಜೆ ಇದ್ದು, ಕಿಚ್ಚ ಸುದೀಪ ಅವರ ಈ ನ್ಯಾಯ ಪಂಚಾಯತಿಗೆ ಇಡೀ ಕರ್ನಾಟಕದ ಜನತೆ ಮೆಚ್ಚಿದೆ ಎಂದರೆ ತಪ್ಪಾಗಲಾರದು,, ಈ ವಿಷಯದಲ್ಲಿ ಕೆಚ್ಚೆದೆಯ ಸುದೀಪ ಅವರಿಗೆ ನಮ್ಮ ಹಾಗೂ ಕರುನಾಡ ಕಡೆಯಿಂದ ಅಭಿಮಾನದ ಚಪ್ಪಾಳೆ..

ವರದಿ ಪ್ರಕಾಶ್ ಬಸಪ್ಪ ಕುರಗುಂದ..