ಬಿಜೆಪಿ ಆಡಳಿತದಲ್ಲಿ ನಡೆದ ಕಾನೂನು ವ್ಯವಸ್ಥೆಯ ಕುಸಿತವೇ ಕಾಂಗ್ರೆಸ್ ಸರ್ಕಾರದಲ್ಲಿಯೂ ಕಂಡುಬಂದಿದೆ..
ಬೆಳಗಾವಿ : ಶುಕ್ರವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ, ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳಗಾವಿ ಇದರ ಪ್ರಧಾನ ಕಾರ್ಯದರ್ಶಿಯಾದ ಅಪ್ಸರ ಕುಡ್ಲಿಪೇಟೆ ಅವರು ಮೇಲಿನಂತೆ ಹೇಳಿದ್ದಾರೆ..
ಕಳೆದ ಕೆಲ ದಿನಗಳ ಹಿಂದೆ ಜಿಲ್ಲೆಯ ಚಿಕ್ಕೋಡಿ ಸಮೀಪದ ಹಿರೆಕೊಡಿಯಲ್ಲಿ ಜೈನ ಮುನಿ ಕಾಮಕುಮಾರನಂದಿ ಹತ್ಯೆ ಸೇರಿದಂತೆ ರಾಜ್ಯದಲ್ಲಿ ನಡೆಯುತ್ತಿರುವ ಇತರ ಅಪರಾಧ ಪ್ರಕರಣಗಳು ನೋಡಿದರ ಮೊದಲು, ಬಿಜೆಪಿ ಸರ್ಕಾರದಲ್ಲಿ ಇದ್ದ ಕಾನೂನು ಅವ್ಯವಸ್ಥೆಯೇ ಈ ಸರ್ಕಾರದಲ್ಲಿಯೂ ಮುಂದುವರೆದಿದೆ ಎಂಬ ಅನುಮಾನ ಮೂಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು…
ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ತಿಂಗಳಾದರೂ ಮೊದಲು ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆಯುತ್ತಿರುವ ಅಪರಾಧ ಕೃತ್ಯಗಳೇ ನಡೆಯುತ್ತಿದ್ದು, ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಸುರಕ್ಷಿತ ಕಾನೂನು ವ್ಯವಸ್ಥೆ ತರುತ್ತೇವೆ ಎಂಬ ಭರವಸೆ ಹುಸಿ ಮಾಡಿದಂತೆ ಅನಿಸುತ್ತಿದೆ ಎಂದರು..
ಕೋಲಾರದ ಕೀರ್ತಿ ಎಂಬ ಯುವತಿಯ ಮರ್ಯಾದೆ ಹತ್ಯೆ, ಮೈಸೂರಿನ ವೇಣುಗೋಪಾಲ್ ಹತ್ಯೆ, ಬೆಂಗಳೂರಿನ ಜೋಡಿ ಕೊಲೆ, ಇದರ ಜೊತೆ ಅನೈತಿಕ ಪೊಲೀಸ್ಗಿರಿ, ದ್ವೇಷ ಭಾಷಣ, ಮುರುಡೇಶ್ವರದ ಬೀಚಿನಲ್ಲಿ ವಿಧ್ಯಾರ್ಥಿಗಳ ಮೇಲಿನ ಹಲ್ಲೆ, ಇಂತಾ ನೂರಾರು ಘಟನೆಗಳು ಜರುಗುತ್ತಿದ್ದು, ಕಾಂಗ್ರೆಸ್ ಬಂದ ಮೇಲೆ ಕಾನೂನು ಸುವ್ಯವಸ್ಥೆಯಲ್ಲಿ ಆದ ಬದಲಾವಣೆ ಏನು? ಎಂದು ಅಪ್ಸರ ಅವರು ಸುದ್ದಿಗೋಷ್ಟಿಯಲ್ಲಿ ಪ್ರಶ್ನೆ ಮಾಡಿದರು..
ಇಷ್ಟೆಲ್ಲಾ ಸಮಸ್ಯ ಇದ್ದರೂ ರಾಜ್ಯದ ಗೃಹ ಮಂತ್ರಿ ಪರಮೇಶ್ವರ ಅವರು ಎಲ್ಲಾ ಸರಿ ಇದೆ ಎಂದು ಮೊಂಡುವಾದ ಮಾಡುತ್ತಿದ್ದಾರೆ, ಸಿಎಂ ಸಿದ್ದರಾಮಯ್ಯ ಅವರು ಈ ಮೊದಲು ಹೇಳಿದಂತೆ ಕೋಮುವಾದದ ಹಿನ್ನೆಲೆಯಲ್ಲಿ ನಡೆಯುವ ಕೃತ್ಯಗಳಿಗೆ ಕಡಿವಾಣ ಹಾಕಬೇಕು ಎಂದರು.
ಜೈನ್ ಮುನಿ ಹತ್ಯೆಯ ಆರೋಪಿಗಳನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿರುವ ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಿಸಿದ ಅವರು, ಅಪರಾಧದ ಸತ್ಯಾಸತ್ಯತೆ ಬಯಲಿಗೆ ಎಳೆದು, ತಮ್ಮ ವಿಚಾರಣೆಯ ಮೂಲಕ ಸತ್ಯಸಂಗತಿಯನ್ನು ಜನರಿಗೆ ತಿಳಿಸಬೇಕು, ಬಿಜೆಪಿ ಪ್ರತಿ ಅಪರಾಧ ಪ್ರಕರಣಕ್ಕೂ ಕೋಮು ಬಣ್ಣ ಹಚ್ಚುವ ಕಾರ್ಯ ಮಾಡುತ್ತಿದೆ ಎಂದು ಕಿಡಿ ಕಾರಿದರು..
ಬಿಜೆಪಿಯ ಅಪಾಯಕಾರಿ ರಾಜಕೀಯವನ್ನು ಹಿಮ್ಮೆಟ್ಟಿಸುವ ಕಾರ್ಯವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಮಾಡಬೇಕಾಗಿದೆ, ಜನರ ಬಹಳ ವಿಶ್ವಾಸ ಇಟ್ಟು ಈ ಸರ್ಕಾರಕ್ಕೆ ಬಹುಮತ ನೀಡಿ, ಅಧಿಕಾರ ಕೊಟ್ಟಿದ್ದಾರೆ, ಜನರ ಭರವಸೆ ಉಳಿಸಿಕೊಳ್ಳುವ ಕೆಲಸ ಸರ್ಕಾರ ಮಾಡಬೇಕು ಎಂದರು..
ಈ ಸುದ್ದಿಗೋಷ್ಟಿಯಲ್ಲಿ ಜಿಲ್ಲಾಧ್ಯಕ್ಷ ಮಾಕ್ಸೂದ ಮಕಾಂದಾರ, ಅಜೀಂ ಮೂಲಾನಿ, ಜಾಕೀರ್ ನಾಯಿಕ್ವಾಡಿ ಮುಂತಾದವರು ಉಪಸ್ಥಿತರಿದ್ದರು..
ವರದಿ ಪ್ರಕಾಶ ಕುರಗುಂದ…