ಬಿಜೆಪಿ ಕೋಟೆಯನ್ನು ಭದ್ರಪಡಿಸಲು ಇಂದು ಬೆಳಗಾವಿಗೆ ರಾಜಾಹುಲಿ ಎಂಟ್ರಿ..

ಬಿಜೆಪಿ ಕೋಟೆಯನ್ನು ಭದ್ರಪಡಿಸಲು ಇಂದು ಬೆಳಗಾವಿಗೆ ರಾಜಾಹುಲಿ ಎಂಟ್ರಿ..

ವಿರೋಧಿಗಳ ಮಾತಿಗೆ ಉತ್ತರ ನೀಡಲು ರೆಡಿಯಾದ ಕೇಸರಿ ಪಡೆ..

ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲೇ ಶೆಟ್ಟರ್ ಅವರ ವಿಜಯಯಾತ್ರೆಗೆ ಚಾಲನೆ..

ಬೆಳಗಾವಿ : ಬೆಳಗಾವಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಬುಧವಾರ ನಗರಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಹಾಗೂ ಬಿಜೆಪಿ ಲೋಕಸಭಾ ಅಭ್ಯರ್ಥಿಯಾದ ಜಗದೀಶ್ ಶೆಟ್ಟರ್ ಅವರು ಆಗಮಿಸಲಿದ್ದು, ಬಿಜೆಪಿಯ ಭದ್ರಕೋಟೆಯಾದ ಬೆಳಗಾವಿಯಲ್ಲಿ ಇಂದಿನಿಂದ ಕೇಸರಿ ಕಲರವ ರಾರಾಜಿಸುತ್ತದೆ..

ಜಿಲ್ಲಾ ಬಿಜೆಪಿಯಲ್ಲಿ ಕೆಲ ಭಿನ್ನಮತ ಇವೆ, ಜಗದೀಶ್ ಶೆಟ್ಟರ್ ಹೊರಗಿನ ಅಭ್ಯರ್ಥಿ, ಕಾಂಗ್ರೆಸ್ಸಿಗೆ ಅನುಕೂಲ ಆಗುವ ಅಭ್ಯರ್ಥಿ ಎಂಬ ಹಲವು ಮಾತುಗಳು ವಿರೋಧಿ ಬನದಲ್ಲಿ ಕೇಳಿ ಬರುತ್ತಿದ್ದು, ಅದಕ್ಕೆ ತಕ್ಕ ಉತ್ತರ ನೀಡಲು ಇಂದು ಬಿಜೆಪಿಯ ಎಲ್ಲಾ ತಂಡ ಒಂದಾಗಿ, ಸಾವಿರಾರು ಕಾರ್ಯಕರ್ತರೊಂದಿಗೆ ಬ್ರಹತ್ ಬೈಕ್ ರ್ಯಾಲಿ ಮಾಡಲಿದೆ..

ನಗರದ ವಿವಿಧ ಪ್ರಮುಖ ಸ್ಥಳಗಳಲ್ಲಿ, ದೇವಸ್ಥಾನಗಳಿಗೆ ಬೇಟಿ ನೀಡಿ, ಬೆಳಗಾವಿ ಜನರನ್ನು ಭೇಟಿ ಆಗಿ ಆಶೀರ್ವಾದ ಪಡೆಯುವ ಜಗದೀಶ್ ಶೆಟ್ಟರ್ ಅವರು, ತಮ್ಮ ಬಿಜೆಪಿಯ ಸಂಪೂರ್ಣ ತಂಡದೊಂದಿಗೆ ಜೊತೆಗೆ ಬಿಜೆಪಿಯ ಮಾಸ್ ಲೀಡರ್, ರಾಜಾಹುಲಿಯ ನೇತೃತ್ವದಲ್ಲಿ ವಿಜಯಯಾತ್ರೆಯನ್ನು ಪ್ರಾರಂಭ ಮಾಡುತ್ತಿದ್ದು, ಬಿಜೆಪಿಯ ಭದ್ರಕೋಟೆಯಾದ ಬೆಳಗಾವಿಯಲ್ಲಿ ಬಿಜೆಪಿಯ ಬಾವುಟವನ್ನು ಮತ್ತೆ ಹಾರಿಸುವ ಸಕಲ ತಯಾರಿಯಲ್ಲಿದ್ದಾರೆ ಎಂದೆನಿಸುತ್ತಿದೆ..

ವರದಿ ಪ್ರಕಾಶ ಕುರಗುಂದ.