ಬಿಜೆಪಿ ಗ್ರಾಮೀಣ ಮಂಡಲದ ವತಿಯಿಂದ “ಹರ ಘರ ತಿರಂಗಾ” ಯಾತ್ರೆ..
ಬೆಳಗಾವಿ : ಸೋಮವಾರ ದಿನಾಂಕ 11/08/2025 ರಂದು, ಬೆಳಗಾವಿ ಗ್ರಾಮೀಣ ಮಂಡಲ ಅಧ್ಯಕ್ಷರಾದ ಯುವರಾಜ್ ಜಾಧವ್ ಇವರ ನೇತೃತ್ವದಲ್ಲಿ “ಹರ ಘರ್ ತಿರಂಗಾ” ಪ್ರತಿ ಮನೆಗೆ ತ್ರಿವರ್ಣ ಧ್ವಜ ಹಾರಿಸವ ಅಭಿಯಾನವನ್ನು ಪ್ರಚಂಡ ಉತ್ಸಾಹದಿಂದ ಮೋಟರ್ ಸೈಕಲ್ ಸವಾರಿ ಮೂಲಕ ಭಾರತ ಮಾತಾ ಕೀ ಜೈ ಗೋಶವಾಕ್ಯ ಮಾಡುತ್ತಾ ಅತೀ ಯಶಸ್ವಿಯಾಗಿ ನಡೆಸಲಾಗಿದೆ.

ಈ ತಿರಂಗಾ ಯಾತ್ರೆಯ ಮೂಲಕ ವಿಜಯನಗರ, ಹಿಂಡಲಗಾ, ಗಣೇಶಪೂರ ಮತ್ತಿತರ ಭಾಗಗಳಲ್ಲಿ ಜನಜಾಗೃತಿ ಮೂಡಿಸಲಾಯಿತು. ಈ ಅಭಿಯಾನದಲ್ಲಿ ಪ್ರಮುಖ ಆಕರ್ಷನೇಯ ಕೇಂದ್ರಬಿಂದು ಆಗಿದ್ದವರು ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಲದ ಮಾಜಿ ಅಧ್ಯಕ್ಷರಾದ ಧನಂಜಯ ಜಾಧವ ಅವರು, ಇವರು ಕುದುರೆ ಸವಾರಿ ಮೂಲಕ ಭಾಗವಹಿಸಿದ್ದರು.

ಬಿಜೆಪಿ ಬೆಳಗಾವಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್, ಚೇತನ ಅಂಗಡಿ, ಪ್ರದೀಪ್ ಪಾಟೀಲ್ ಲಿಂಗ್ರಾಜ ಹಿರೇಮಠ, ಯಲ್ಲೇಶ್ ಕೋಲ್ಕಾರ್, ಉಮಾ ಶಂಕರ ದೇಸಾಯಿ, ವಿನಯ ಕದಮ, ತಾನಾಜಿ ಚೌಗಲೆ, ಅನಿಲ ಪಾಟೀಲ್, ಸಂಜಯ್ ಪಾಟೀಲ್, ವಿಲಾಸ ತಹಸೀಲ್ದಾರ, ಭಾಗ್ಯಶ್ರೀ ಕೋಕಿತ್ಕರ್, ಸ್ನೇಹಲ ಕೊಳೇಕರ, ಶ್ವೇತಾ ಜಗದಾಲೆ, ಇನ್ನಿತರ ಬಿಜೆಪಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.