ಬಿಜೆಪಿ ನಾಯಕಿ ಸೋನಾಲಿ ಸರ್ನೋಬತ್ ಮನೆಗೆ ಬೇಟಿ ನೀಡಿದ ಜಗದೀಶ ಶೆಟ್ಟರ…

ಬೆಳಗಾವಿ : ಲೋಕಸಭಾ ಬಿಜೆಪಿ ಅಭ್ಯರ್ಥಿಯಾದ ಜಗದೀಶ ಶೆಟ್ಟರ ಅವರು ಬಿಜೆಪಿಯ ನಾಯಕಿ ಡಾ ಸೋನಾಲಿ ಸರ್ನೋಬತ್ ಅವರ ಮನೆಗೆ ಭೇಟಿ ನೀಡಿ, ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ..

ಸ್ಥಳೀಯ ಮುಖಂಡರ ವಿವಿಧ ಗುಂಪುಗಳೊಂದಿಗೆ ಸಂವಾದ ನಡೆಸಿದ ಅವರು, ದೇಶದ ಸುಭದ್ರತೆಗೆ ಹಾಗೂ ಮೋದಿಯಂತ ವಿಶ್ವನಾಯಕ ವ್ಯಕ್ತಿತ್ವದ ಪ್ರಧಾನಿಗೆ ಶಕ್ತಿ ನೀಡಲು ನಾವೆಲ್ಲರೂ ಸೇರಿ ಇಡೀ ದೇಶದಲ್ಲಿ ಬಿಜೆಪಿಗೆ ಬೆಂಬಲ ನೀಡುವದು ಅವಶ್ಯಕವಾಗಿದೆ, ದೇಶದ ಅಭಿವೃದ್ದಿ, ಶಾಂತಿ ಸುಭದ್ರತೆ ದೃಷ್ಟಿಯಿಂದ ಬಿಜೆಪಿ ಗೆಲ್ಲುವುದು ಅನಿವಾರ್ಯ ಎಂಬ ವಿಷಯದ ಕುರಿತಾಗಿ ಮುಖಂಡರೊಂದಿಗೆ ಚರ್ಚೆ ನಡೆಸಿದರು..

ಬೆಳಗಾವಿ ಗ್ರಾಮೀಣ ಬಿಜೆಪಿಯ ಅಧ್ಯಕ್ಷರಾದ ಸುಬಾಸ ಪಾಟೀಲ, ಕಿರಣ ಜಾಧವ,
ಮಾಜಿ ಶಾಸಕ ಮನೋಹರ ಕಡೋಲಕರ, ಕೆಕೆಎಂಪಿ ಕರ್ನಾಟಕ ರೋಹಿತ್ ರಾವ್ ಸಾಠೆ, ಸಂಜಯ ಭೋಸಲೆ, ಅಡ್ವ ಭಾಸ್ಕರ ಪಾಟೀಲ್, ಸತೀಶ ಬಾಚಿಕರ್, ಜಿಜಾವು ಬ್ರಿಗೇಡ್ ಪದಾಧಿಕಾರಿಗಳು, ನಮ್ರತಾ ಹುಂದಾರೆ, ಗೀತಾಂಜಲಿ ಚೌಗುಲೆ, ಆಶಾರಾಣಿ ನಿಂಬಾಳ್ಕರ್, ಮಂಗಲ್ ಪಾಟೀಲ್, ದೀಪಾಲಿ ಮಲಕಾರಿ ಹಾಗೂ ಸ್ಥಳೀಯ ನಿವಾಸಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವರದಿ ಪ್ರಕಾಶ್ ಕುರಗುಂದ..