ಬಿಮ್ಸ್ ನರ್ಸಿಂಗ್ ಕಾಲೇಜಿನಲ್ಲಿ ರಾಜ್ಯ ಮಟ್ಟದ ಕಾರ್ಯಗಾರ..
ಕಾರ್ಯಾಗಾರದಲ್ಲಿ ಬೋಧನೆ ಮತ್ತು ಕಲಿಕೆಯ ವಿಧಾನಗಳು ಎಂಬ ವಿಷಯದ ಚರ್ಚೆ..
ಎಲ್ಲಾ ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ಆಗುವ ಕಾರ್ಯಗಾರವಿದು..
ಡಾ ನಾಮದೇವ ಮಾಳಗಿ
ಬೆಳಗಾವಿ : ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನರ್ಸಿಂಗ್ ಕಾಲೇಜುಗಳ ರಾಜ್ಯಮಟ್ಟದ ಒಂದು ದಿನದ ಕಾರ್ಯಾಗಾರ ಗುರುವಾರ ನಡೆದಿದ್ದು, ಇದರಿಂದ ರಾಜ್ಯದ ನರ್ಸಿಂಗ್ ಕಾಲೇಜುಗಳ ಭೋದಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಅತೀ ಅನುಕೂಲ ಆಗುತ್ತದೆ ಎಂದು ಬಿಮ್ಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ ನಾಮದೇವ ಮಾಳಗಿ ತಿಳಿಸಿದ್ದಾರೆ..
ಗುರುವಾರ ದಿನಾಂಕ 09/10/2025ರಂದು ಬಿಮ್ಸ್ ಕಾಲೇಜಿನ ಸಭಾಭವನದಲ್ಲಿ ನಡೆದ ಕಾರ್ಯಾಗಾರದ ಉದ್ಘಾಟನೆಯ ನಂತರ ಮಾತನಾಡಿದ ಅವರು, ಈ ಕಾರ್ಯಾಗಾರದಲ್ಲಿ ಕಲಿಕೆ ಮತ್ತು ಬೋಧನೆಗಳ ವಿಧಾನದ ಕುರುತು ಉಪನ್ಯಾಸ ಹಾಗೂ ಚರ್ಚೆಗಳು ನಡೆಯುತ್ತಿದ್ದು, ಇದು ಎಲ್ಲಾ ಶಿಕ್ಷಕರಿಗೂ ಹಾಗೂ ಈಗ ವಿದ್ಯಾರ್ಥಿಗಳಾಗಿದ್ದು ಮುಂದೆ ಶಿಕ್ಷಕರಾಗಿ ಮುಂದುವರೆಯುವವರಿಗೂ ತುಂಬಾ ಉಪಯೋಗ ಆಗುತ್ತದೆ ಎಂದರು..

ರಾಜ್ಯದ ಹಲವಾರು ಜಿಲ್ಲೆಗಳ ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಈ ಕಾರ್ಯಗಾರದಲ್ಲಿ ಭಾಗಿಯಾಗಿದ್ದು, ವಿಶ್ವವಿದ್ಯಾಲಯದಿಂದ ಪರಿಣಿತ ಹಾಗೂ ಗುಣಮಟ್ಟದ ಸಂಪನ್ಮೂಲ ವ್ಯಕ್ತಿಗಳನ್ನು ನಾವು ಕರೆತಂದಿದ್ದು ಈ ಕಾರ್ಯಗಾರದಲ್ಲಿ ಅವರು ಉಪನ್ಯಾಸ ನೀಡಲಿದ್ದು ಅದು ತುಂಬಾ ಅನುಕೂಲ ಆಗುತ್ತದೆ ಎಂದಿದ್ದಾರೆ..
ರಾಜ್ಯದಿಂದ ನಮಗೆ ವಿವಿಧ ಕಾಲೇಜುಗಳಿಂದ ಸುಮಾರು 230 ನೋಂದಣಿ ಆಗಿದ್ದು, ವಿವಿಧ ಕಾಲೇಜುಗಳಿಂದ ಶಿಬಿರಾರ್ಥಿಗಳು ಹಾಜರಿದ್ದಾರೆ, ವಿಶೇಷವಾಗಿ ಎಂಎಸ್ಸಿ ವಿದ್ಯಾರ್ಥಿಗಳಿಗೆ ಇದು ಬಹಳ ಅನುಕೂಲ ಆಗಿದ್ದು, ಪರೀಕ್ಷಾ ದೃಷ್ಟಿಯಿಂದ ಹಾಗೂ ಅವರ ಮುಂದಿನ ವೃತ್ತಿ ದೃಷ್ಟಿಯಿಂದ ಉಪಯುಕ್ತವಾಗಿದೆ ಎಂದಿದ್ದಾರೆ.

ಈ ಕಾರ್ಯಾಗಾರದ ಆಯೋಜನೆಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳ ಶ್ರಮ ತುಂಬಾ ಇದೆ, ಅತೀ ಕಡಿಮೆ ಅವಧಿ ಅಂದರೆ ಕೇವಲ ಹತ್ತು ದಿವಸಗಳಲ್ಲಿ ನಾವು ಕಾರ್ಯಾಗಾರದ ತಯಾರಿ ಮಾಡಿದ್ದು, ಇದಕ್ಕಾಗಿ ವಿವಿಧ ಕಮಿಟಿ ಮಾಡಿ, ಹಗಲು ರಾತ್ರಿ ನಮ್ಮ ವಿದ್ಯಾರ್ಥಿಗಳು ಈ ಕಾರ್ಯದಲ್ಲಿ ತೊಡಗಿ ಅತ್ಯಂತ ವ್ಯವಸ್ಥಿತವಾಗಿ ಮಾಡಿದ್ದು, ಈ ಕಾರ್ಯಾಗಾರ ಯಶಸ್ವಿ ಆಗಲು ಕಾರಣರಾಗಿದ್ದಾರೆ ಎಂದರು..
ಬೆಳಗಾವಿಯಲ್ಲಿ ಇರುವದು ಒಂದೇ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು, ಕಳೆದ ಎರಡು ವರ್ಷಗಳಿಂದ ಇಲ್ಲಿ ಎಂಎಸ್ಸಿ ನರ್ಸಿಂಗ್ ಕಾರ್ಯಕ್ರಮ ಪ್ರಾರಂಭ ಮಾಡಿದ್ದೇವೆ, ಸುಮಾರು 25ರಂತೆ ದಾಖಲಾತಿ ಇರುತ್ತದೆ, ನಮ್ಮಲ್ಲಿ ದೊಡ್ಡ ಆಸ್ಪತ್ರೆ ಇರುವದರಿಂದ ವಿದ್ಯಾರ್ಥಿಗಳಿಗೆ ಕಲಿಯಲಿಕ್ಕೆ ದೊಡ್ಡ ಪ್ರಮಾಣದ ಅವಕಾಶಗಳಿವೆ, ಆದ್ದರಿಂದ ನರ್ಸಿಂಗ್ ವಿದ್ಯಾರ್ಥಿಗಳಿಗಾಗಿ ನಡೆಯುವ ಇಂತಹ ಕಾರ್ಯಾಗಾರಗಳು ಯಶಸ್ವಿ ಆಗುತ್ತವೆ ಎಂದಿದ್ದಾರೆ..
ವರದಿ ಪ್ರಕಾಶ್ ಬಸಪ್ಪ ಕುರಗುಂದ..