ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟಕ್ಕೆ ಮಣೆ..

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟಕ್ಕೆ ಮಣೆ..

ಬೆಳಗಾವಿಯ ಗ್ರಾಮೀಣ ಬಿಜೆಪಿ ಪಾಳಯದಲ್ಲಿ ವಿಜಯೋತ್ಸವ..

ಬೆಳಗಾವಿ : ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ನೀಡುವುದರ ಮೂಲಕ ಮೋದಿ ನಾಯಕತ್ವಕ್ಕೆ ಬಿಹಾರದಲ್ಲಿ ಜೈಕಾರ ದೊರಕಿದ್ದು, ಎನ್ ಡಿಎ ಮೈತ್ರಿಕೂಟ ಈ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದು ಬಿಹಾರದಲ್ಲಿ ಬಿಜೆಪಿಯ ಅಲೆ ಸಾಭೀತಾಗಿದೆ ಎಂದು ಮಾಜಿ ಶಾಸಕ ಸಂಜಯ ಪಾಟೀಲ್ ಹೇಳಿದ್ದಾರೆ.

ಬಿಹಾರದ ಜನತೆ ತಗೆದುಕೊಂಡಿರುವ ಈ ನಿರ್ಧಾರ ದೇಶದ ರಾಜಕೀಯದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ, ಬರುವ ದಿನಗಳಲ್ಲಿ ಇಡೀ ದೇಶವೇ ಎನ್ ಡಿಎ ಮೈತ್ರಿಕೂಟದ ಪರವಾಗಿ ನಿಲ್ಲುತ್ತದೆ, ನಮ್ಮ ಕರ್ನಾಟಕ ರಾಜ್ಯದಲ್ಲಿಯೂ ಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿಜಯಿಯಾಗುತ್ತದೆ ಎಂಬುದಕ್ಕೆ ಬಿಹಾರ ಚುನಾವಣಾ ಫಲಿತಾಂಶ ಮುನ್ನುಡಿಯಾಗಿದೆ ಎಂದಿದ್ದಾರೆ

ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ವಿಜಯಿಯಾದ ಎಲ್ಲಾ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ ಅವರು ಬರುವ ದಿನಗಳಲ್ಲಿ ಅತೀ ಉತ್ತಮವಾಗಿ ಜನತೆಯ ಪರವಾಗಿ ಆಡಳಿತ ನಡೆಸಲಿ ಎಂದು ಶುಭ ಹಾರೈಸಿದ್ದಾರೆ, ಈ ವೇಳೆ ಬಿಜೆಪಿಯ ಯುವ ದುರೀನ ಚೇತನ ಅಂಗಡಿ, ಸಂತೋಷ ಅಂಗಡಿ, ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಬಿಜೆಪಿ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು..