ಬುಡಾ ಸ್ಕೀಮ್ ನಂಖ್ಯೆ 61ರಲ್ಲಿ ಆಮೇಗತಿಯ ಕಾರ್ಯಕ್ಕೆ ರೈತರ ಆಕ್ರೋಶ..

ಬುಡಾ ಸ್ಕೀಮ್ ನಂಖ್ಯೆ 61ರಲ್ಲಿ ಆಮೇಗತಿಯ ಕಾರ್ಯಕ್ಕೆ ರೈತರ ಆಕ್ರೋಶ..

ಅಧಿಕಾರಿಗಳ ಮೇಲೆ ಸಂಶಯಕ್ಕೆ ಕಾರಣವಾದ ಮುಖ್ಯ ಟೆಂಡರಿನ ವಿಳಂಬ ನೀತಿ..

ಬುಡಾದ ಬೇಜವಾಬ್ದಾರಿ ಆಡಳಿತಕ್ಕೆ ಚಾಟಿ ಬೀಸಿದ ಮಹೇಶ್ ಸಿಗಿಹಳ್ಳಿ..

ಬೆಳಗಾವಿ : ಕಣಬರಗಿ ಸ್ಕೀಮ್ ನಂಬರ್ 61ರ ರೈತರು ಬುಧವಾರ ಬೆಳಗಾವಿ ನಗರಾಭಿವೃದ್ದಿ ಪ್ರಾಧಿಕಾರ ಕಚೇರಿಗೆ ಬೇಟಿ ಮಾಡಿ ಅಧಿಕಾರಿಗಳನ್ನು ತರಾಟೆಗೆ ಘಟನೆ ನಡೆದಿದೆ, ಕಾರಣ ಸ್ಕೀಮ್ ನಂಬರ್ 61 ರ ಅಭಿವೃದ್ದಿಗಾಗಿ ರೈತರಿಂದ ಜಮೀನು ಪಡೆದು 19 ವರ್ಷಗಳು ಕಳೆದರೂ ಯಾವುದೇ ಅಬಿವೃದ್ಧಿ ಆಗದ ಕಾರಣ ರೈತರು ಆಕ್ರೋಶದಲ್ಲಿ ಈಗಾಗಲೇ ಹಲವು ಹೋರಾಟ ಮಾಡುತ್ತಾ ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ.

ಅಧಿಕಾರಿಗಳು ಆಯುಕ್ತರು ಮತ್ತು ಬುಡಾ ಅಧ್ಯಕ್ಷರರವರು ಸರಿಯಾದ ಜವಾಬ್ದಾರಿ ವಹಿಸದೆ ಮಂದಗತಿಯಲ್ಲಿ ಅಬಿವೃದ್ಧಿ ಮಾಡುತ್ತಿದ್ದಾರೆ ರೈತರು ಹೋರಾಟ ಮಾಡಿದಾಗಲೆಲ್ಲ ರೈತರ ಮೂಗಿಗೆ ತುಪ್ಪವನ್ನು ವರೆಸುವ ಪ್ರಯತ್ನ ಮಾಡಿ 20 ಲಕ್ಷದ ಟೆಂಡರ್ ಪಾಸ್ ಮಾಡಿ ಮಂದಗತಿಯಲ್ಲಿ 10 ದಿನ ಕಾರ್ಯ ಪ್ರಾರಂಭಿಸಿ 20 ದಿನ ಮತ್ತೆ ಆ ಅಬಿವೃದ್ಧಿ ಕೆಲಸವನ್ನು ಅರ್ಧಕ್ಕೆ ಮುಟುಕುಗೋಳಿಸಿ ರೈತರ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಾ ಅನ್ಯಾಯ ಮಾಡುತ್ತಿದ್ದು, ಕೋಟ್ಯಂತರ ರೂಪಾಯಿಗಳ ಮುಖ್ಯ ಟೆಂಡರನ್ನು ಪಾಸ್ ಮಾಡದೆ ಬೇಜವಾಬ್ದಾರಿ ವಹಿಸಿ ಅರ್ಧ ಮರ್ದ ಕೆಲ್ಸ ಮಾಡುತ್ತಾ ರೈತರಿಗೆ ಅನ್ಯಾಯ ಮಾಡುತ್ತಿದ್ದು ಇದು ಹಲವಾರು ಅನುಮಾನಗಳು ಕಾರಣವಾಗಿದ್ದು ಕಚೇರಿಯಲ್ಲಿನ ಅಧಿಕಾರಿಗಳಿಗೆ ತರಾಟೆ ತಗೆದುಕೊಳ್ಳಲಾಯಿತು.

ಮುಖ್ಯ ಟೆಂಡರ್ ಪಾಸ್ ಮಾಡದಿರುವ ಕಾರಣ ರೈತರು ಅಧಿಕಾರಿಗಳಿಗೆ ಪ್ರಶ್ನೆ ಮಾಡಿದರು ಬುಡಾ ಡೆವಲಪ್ಮೆಂಟ್ ಕಮಿಷಣಗಾಗಿ ಹೊಂದಾಣಿಕೆ ಆಗದ ಕಾರಣ ನಿಮ್ಮಗಳ ಲಾಭಕ್ಕಾಗಿ ರೈತರಿಗೆ ಅನ್ಯಾಯ ಮಾಡುತ್ತಿದ್ದೀರಾ ಎಂದು ಪ್ರಶ್ನೆಗಳ ಸುರಿಮಳೆ ಅಧಿಕಾರಿಗಳಿಗೆ ಕೆಳಲಾಯಿತು, ಇದರಿಂದ ಬೆಳಗಾವಿ ಜಿಲ್ಲೆಯ ರೈತರು ಬುಡಾ ಎಂದ ತಕ್ಷಣ ಕೋಪ ಬರುವ ವಾತಾವರಣ ಸೃಷ್ಟಿ ಆಗಿದೆ ಇದು ಬುಡಾ ಪ್ರಾಧಿಕಾರಕ್ಕೆ ಮತ್ತು ಸರ್ಕಾರಕ್ಕೆ ನಾಚಿಕೆ ಪಡುವ ಸಂದರ್ಭ ವ್ಯಕ್ತವಾಗಿದೆ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು .

ಇದೆ ತಿಂಗಳಲ್ಲಿ ಮುಖ್ಯ ಟೆಂಡರ್ ಫೈನಲ್ ಆಗದೆ ಹೋದರೆ ಕಾರ್ಯ ಪ್ರಾರಂಭ ಆಗದೆ ಹೋದರೆ ರೈತರಿಗೆ NOC ನೀಡಿ 19 ವರ್ಷಗಳ ಪರಿಹಾರ ನೀಡಬೇಕು ಎಂದು ಎಚ್ಚರಿಸಿದರು .
ಈ ಸಂದರ್ಬದಲ್ಲಿ ಕಣಬರಗಿ ಸ್ಕೀಮ್ ನಂಬರ್ 61 ರೈತರ ಜೊತೆಗೆ
ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ ಸಂಘಟನೆಯ ರಾಜ್ಯಾಧ್ಯಕ್ಷರು ಮಹೇಶ ಎಸ್ ಶಿಗಿಹಳ್ಳಿ ಭಾಗಿಯಾಗಿ ವಿವಿಧ ಸುದ್ದಿವಾಹಿನಿಗಳ ಮುಂದೆ ಮಾತನಾಡಿ ಬುಡಾ ಅಧಿಕಾರಿಗಳ ವಿರುದ್ಧ ಗುಡುಗಿದ್ದಾರೆ.

ವರದಿ ಪ್ರಕಾಶ ಬಸಪ್ಪ ಕುರಗುಂದ..