ಬೆರಳೆಣಿಕೆ ಅಧಿಕಾರಿಗಳಿರುವ ಸಭೆಯಲ್ಲಿ ಚಹಾದ ಕೊರತೆ…

ಅಂತಾರಾಷ್ಟೀಯ ಪ್ರಜಾಪ್ರಭುತ್ವ ದಿನಾಚರಣೆ ಚರ್ಚೆಯ ಪೂರ್ವಭಾವಿ ಸಭೆ..

ಬೆರಳೆಣಿಕೆ ಅಧಿಕಾರಿಗಳಿರುವ ಸಭೆಯಲ್ಲಿ ಚಹಾದ ಕೊರತೆ..

ಎರಡು ಗಂಟೆಯ ಸಭೆಯಲ್ಲಿ, ಕೆಲ ಅಧಿಕಾರಿಗಳಿಗೆ ಮರೀಚಿಕೆಯಾದ ಚಹಾ..

ಅಧಿಕಾರಿಗಳ ನಡುವಿನ ಬೇದಭಾವವೂ? ಅಥವಾ ಚಹಾದ ಕೊರತೆಯೋ??

ಬೆಳಗಾವಿ : ಗುರುವಾರ ದಿನಾಂಕ 29/08/2024ರಂದು ಮಧ್ಯಾಹ್ನ 3 ಗಂಟೆಗೆ, ಜಿಲ್ಲಾಧಿಕಾರಿಗಳ ಕಛೇರಿಯ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ, “ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ” ಕಾರ್ಯಕ್ರಮದ ಕಾರ್ಯಕಾರಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಜರುಗಿದ ಚರ್ಚಾ ಸಭೆಯಲ್ಲಿ ಭಾಗಿಯಾದ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಚಹಾದ್ದೇ ಚಿಂತೆಯಾಗಿತ್ತು..

ಸಮಾಜ ಕಲ್ಯಾಣ ಇಲಾಖೆ ಸಚಿವರು, ಶಿಕ್ಷಣ ಸಚಿವರು, ಪೌರಾಡಳಿತ ಮತ್ತು ಹಜ್ ಇಲಾಖಾ ಸಚಿವರು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾದ ಈ ವಿಶೇಷ ಸಭೆಯಲ್ಲಿ ಬೆಳಗಾವಿ ಜಿಲ್ಲಾ ಮಟ್ಟದ ಬೆರಳೆಣಿಕೆಯ ಅಧಿಕಾರಿಗಳು ಭಾಗಿಯಾಗಿದ್ದು, ಬರುವ ಸೆಪ್ಟೆಂಬರ್ 15ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಣೆ ಬಗ್ಗೆ ಚರ್ಚಿಲಾಗಿದೆ..

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ದೀರ್ಘಾವಧಿಯಲ್ಲಿ ನಡೆದ ಈ ಸಭೆಯಲ್ಲಿ ಭಾಗಿಯಾದ ಕೆಲ ಜಿಲ್ಲಾ ಮಟ್ಟದ ಅಧಿಕಾರಿಗಳು ಚಹಾದ ದಾರಿ ಕಾದು ಕಾದು ಸುಸ್ತಾದದ್ದೇ ಶೋಚನೀಯ ಸಂಗತಿಯಾಗಿದೆ..

ಸಭೆಯಲ್ಲಿ ಭಾಗಿಯಾದ ಮೂರು ಅಧಿಕಾರಿಗಳಿಗೆ ನೀಡಿದಂತಹ ಚಹಾವನ್ನು, ಉಳಿದ ಐದು ಜನ ಅಧಿಕಾರಿಗಳಿಗೆ ನೀಡಿದ್ದರೆ, ಪಾಪ ಇಂತಹ ಮಳೆಯ, ಚಳಿಯ ವಾತಾವರಣದಲ್ಲಿ ಇನ್ನು ಸ್ವಲ್ಪ ಕ್ರಿಯಾಶೀಲರಾಗಿ ಸಭೆಯಲ್ಲಿ ಭಾಗಿಯಾಗುತ್ತಿದ್ದರೇನೊ??

ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿಗಳು ಚಹಾ ಕೊಡುವುದನ್ನು ಮರೆತರೋ? ಬೇದಬಾವ ಮಾಡಿದರೋ? ಅಥವಾ ಕಚೇರಿಯಲ್ಲಿ ಚಹಾದ ಕೊರತೆ ಏನಾದರೂ ಇದೆಯೇ? ಎಂದು ಚಹಾ ಸಿಗದ ಅಧಿಕಾರಿಗಳು ತಮ್ಮ ತಮ್ಮಲ್ಲೇ ಪ್ರಶ್ನೆ ಮಾಡಿಕೊಳ್ಳುವ ಪರಿಸ್ಥಿತಿ ಉಂಟಾಗಿತ್ತು..

ಯಾವುದೇ ಸಭೆ ಸಮಾರಂಭಗಳಾಗಲಿ, ಎಷ್ಟೇ ಜನರೇ ಇರಲಿ, ಉಪಚಾರದಲ್ಲಿ ಯಾವತ್ತೂ ಕೊರತೆ ತೋರದ ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ, ನಿನ್ನೆ ಯಾವುದೋ ಗುಂಗಿನಲ್ಲಿ ಪಾಪ ಕೆಲ ಅಧಿಕಾರಿಗಳು ಚಹಾದ ದಾರಿ ಕಾಯುತ್ತಾ ಕುಳಿತುಕೊಳ್ಳುವಂತೆ ಮಾಡಿದೆ..

ವರದಿ ಪ್ರಕಾಶ ಬಸಪ್ಪ ಕುರಗುಂದ..