ಬೆಳಗಾವಿಯಲ್ಲಿ ಅದ್ದೂರಿಯಾಗಿ ಮಿಂಚಿದ ಅಪ್ಪು ಬಾಸ್ ಟ್ರೋಫಿ…!!!
ಬೆಳಗಾವಿ : ಬುಧವಾರ ದಿನಾಂಕ 19/07/2023ರಂದು ನಗರದ ವಿವಿಧ ಕಡೆಗಳಲ್ಲಿ ಆಗಮಿಸಿದ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಟ್ರೋಪಿಗೆ ಸಾರ್ವಜನಿಕರು ಹಾಗೂ ಅಭಿಮಾನಿಗಳಿಂದ ಅದ್ದೂರಿಯಾಗಿ ಸ್ವಾಗತ ದೊರಕಿದೆ..
ಕನ್ನಡ ಕಿರುತೆರೆಯಲ್ಲಿ ಅತ್ಯಂತ ಜನಪ್ರಿಯತೆ ಪಡೆದ ಜೀ ಕನ್ನಡ ವಾಹಿನಿಯ ಡ್ಯಾನ್ಸ್ ಕರ್ಣಾಟಕ ಡ್ಯಾನ್ಸ್ ಎಂಬ ರಿಯಾಲಿಟಿ ಶೋದ ಭಾಗವಾಗಿರುವ ಅಪ್ಪು ಬಾಸ್ ಟ್ರೋಫಿಯು ಇಡೀ ರಾಜ್ಯದ ಗಮನ ಸೆಳೆದಿದ್ದು, ರಾಜ್ಯದ ಪ್ರತಿ ಜಿಲ್ಲೆಯಲ್ಲಿಗೂ ಭೇಟಿ ನೀಡಿ, ಜನಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ..
ಪ್ರತಿ ಜಿಲ್ಲೆಯಂತೆ ಕುಂದಾನಗರಿ ಬೆಳಗಾವಿಗೂ ಆಗಮಿಸಿದ ಈ ಅಪ್ಪು ಬಾಸ್ ಟ್ರೋಪಿಯು ಇಲ್ಲಿರುವ ಯುವಕ ಯುವತಿಯರನ್ನು, ಅಭಿಮಾನಿಗಳನ್ನು, ಸಂಘ ಸಂಸ್ಥೆಯ ಪ್ರಮುಖರನ್ನು, ಸಾರ್ವಜನಿಕರನ್ನು ಆಕರ್ಷಣೆ ಮಾಡಿ, ಅವರೆಲ್ಲರೂ ಪುನೀತ್ ರಾಜಕುಮಾರ್ ಮತ್ತು ಈ ಟ್ರೋಫಿ ಬಗ್ಗೆ ತುಂಬು ಮನಸಿನಿಂದ ಹೊಗಳಿಕೆಯ ಮಾತು ಆಡುವಂತೆ ಮೋಡಿ ಮಾಡಿದೆ..
ಅಪ್ಪು ಟ್ರೋಫಿಯನ್ನು ದ್ವೀಪ ಬೆಳಗಿಸುವ ಮೂಲಕ ನಗರಕ್ಕೆ ಸ್ವಾಗತ ಮಾಡಿಕೊಂಡ ಗಣ್ಯರು, ನಂತರದಲ್ಲಿ ಅಪ್ಪು ಟ್ರೋಫಿ ಇರುವ ಜೀ ಕನ್ನಡದ ವಾಹನದ ಎದುರಿಗೆ ಎಲ್ಲರೂ ಡ್ಯಾನ್ಸ್ ಮಾಡುತ್ತಾ, ಗೆಳೆಯ ಗೆಳತಿಯರೇಲ್ಲ ಫೋಟೋ ತೆಗೆಸಿಕೊಂಡು, ಅಪ್ಪು ಬಗ್ಗೆ ತುಂಬಾ ಗೌರವಪೂರ್ವಕ ಹಾಗೂ ಹೆಮ್ಮೆಯ ಮಾತುಗಳಾಡಿದರು…
ಇನ್ನೂ ಇದೆ ಸಂದರ್ಭದಲ್ಲಿ ಬೆಳಗಾವಿಯ ಸುಪ್ರಸಿದ್ಧ ಬಟ್ಟೆ ಮಳಿಗೆಯಾದ ಬಿ ಎಸ್ ಚನ್ನಬಸಪ್ಪ ಆಂಡ್ ಸನ್ಸ್ ಅಂಗಡಿಯ ಉಸ್ತುವಾರಿಯೊಬ್ಬರು ಮಾತನಾಡಿ, ಪುನೀತ್ ರಾಜ್ಕುಮಾರ್ ಬರಿ ರೀಲ್ ಲೈಫ್ ಹೀರೋ ಆಗದೇ, ರಿಯಲ್ ಲೈಫ್ ಹೀರೋ ಆಗಿದ್ದಾರೆ, ಅವರ ತಂದೆಯಂತೆ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಕಾರ್ಯ ಮಾಡಿ, ತಂದೆಗೆ ತಕ್ಕ ಮಗ ಆಗಿದ್ದಾರೆ, ಅವರ ಜೀವನ ಇಂದು ಎಷ್ಟೋ ಜನರಿಗೆ ಸ್ಪೂರ್ತಿ ಆಗಿದೆ ಎಂದರು..
ಇನ್ನೂ ಕರವೇ ಜಿಲ್ಲಾಧ್ಯಕ್ಷರಾದ ದೀಪಕ್ ಗುಡಗೆನಹಟ್ಟಿ ಮಾತನಾಡಿ, ಜೀ ಕನ್ನಡ ವಾಹಿನಿಯು ಅಪ್ಪು ಅವರ ಹೆಸರಿನಲ್ಲಿ ಡ್ಯಾನ್ಸ್ ವಿನ್ನರ್ ಟ್ರೋಫಿ ನೀಡುತ್ತಿರುವುದು ತುಂಬಾ ಅರ್ಥಬದ್ದವಾಗಿದೆ, ಅಪ್ಪು ಅವರ ಡ್ಯಾನ್ಸ್ ಗೆ ಮನಸೊಲದ ಕನ್ನಡಿಗರೇ ಇಲ್ಲ, ಕನ್ನಡ ಚಿತ್ರರಂಗದಲ್ಲಿ ಡ್ಯಾನ್ಸ್ ಗೆ ಹೊಸ ಚರಿತ್ರೆ ಬರೆದವರು ಪುನೀತ್ ರಾಜಕುಮಾರ್ ಎಂದರು..
ಇನ್ನೂ ಶಿವರಾಜ್ ಕುಮಾರ ಅಭಿಮಾನಿ ಸಂಘದ ಪದಾಧಿಕಾರಿಯಾದ ತುಮ್ಮರಗುದ್ದಿ ಗ್ರಾಮದ ಶೇಖರ ಅವರು ಮಾತನಾಡಿ, ಕನ್ನಡದ ಅಮೂಲ್ಯ ರತ್ನ ಪುನೀತ್ ರಾಜಕುಮಾರ ಅವರ ಹೆಸರಿನಲ್ಲಿ ಎಷ್ಟೇ ಕಪ್ ಹಾಗೂ ಪ್ರಶಸ್ತಿ ಇಟ್ಟರು ಕಡಿಮೆಯೇ, ಅವರ ಜೀವಿತಾವಧಿಯಲ್ಲಿ ಮಾಡಿದ ಸಾಧನೆ, ದಾನ ಧರ್ಮ, ಮಾನವೀಯ ಸೇವೆಗಳು, ನಡೆದುಕೊಂಡ ನಡವಳಿಕೆ, ದೇಶ, ಭಾಷೆ, ಜನರ ಬಗ್ಗೆ ಅವರ ಕಾಳಜಿ, ಇವೆಲ್ಲಾ ನೆನೆದರೆ ಅಪ್ಪು ಎಂತಹ ಮಹಾಪುರುಷ ಅಂತಾ ಅರ್ಥ ಆಗುತ್ತದೆ ಎಂದರು..
ಈ ಸಂದರ್ಭದಲ್ಲಿ ಅಪ್ಪು ಭಾವಚಿತ್ರಕ್ಕೆ ಹಾಗೂ ಟ್ರೋಫಿಗೆ ಮಾಲಾರ್ಪಣೆಯನ್ನು ದಿಗ್ವಿಜಯ ಸಿದ್ನಾಳ ಅವರು ಮಾಡಿದರೆ, ದೀಪಕ್ ಗುಡಗೆನಹಟ್ಟಿ ಹಾಗೂ ಶೇಖರ ಅವರು ದ್ವೀಪ ಬೆಳಗಿಸಿ, ಸ್ವಾಗತಿಸಿದರು, ಅಪ್ಪು ಯೂತ್ ಬ್ರಿಗಡ್ ಜಿಲ್ಲಾ ಘಟಕದ ಅಧ್ಯಕ್ಷರಾದ ರುದ್ರಪ್ಪ ಬೋಗೂರ್, ಉಪಾಧ್ಯಕ್ಷ ವಿವೇಕ್ ಗಾಣಿಗ, ಅಪ್ಪು ಅಭಿಮಾನಿಗಳು, ಯುವಕ ಯುವತಿಯರು, ಸ್ಥಳೀಯ ಸಾರ್ವಜನಿಕರು ಉಪಸ್ಥಿತರಿದ್ದರು..
ವರದಿ ಪ್ರಕಾಶ ಕುರಗುಂದ…
