ಬೆಳಗಾವಿಯಲ್ಲಿ ಅನ್ನೋತ್ಸವ ಅದ್ಭುತ ಆರಂಭ..
ರುಚಿಕರ ವೈವಿಧ್ಯ ಆಹಾರ, ಸಂಗೀತ, ವಿನೋದದ ಖುಷಿಯಲ್ಲಿರುವ ಜನಸಮೂಹ..
ಬೆಳಗಾವಿ : ಸಾವಗಂವ ರಸ್ತೆಯ ಅಂಗಡಿ ಕಾಲೇಜಿನ ಎದುರಿಗೆ ಆಯೋಜಿಸಿರುವ “ಅನ್ನೋತ್ಸವ 2025” ಮೊದಲ ಎರಡು ದಿನಗಳು ಅದ್ಭುತ ಯಶಸ್ಸನ್ನು ಕಂಡು ಜನಾಕರ್ಷಣೆಗೆ ಸಾಕ್ಷಿಯಾಗಿ,
ಬೇಟಿ ನೀಡಿದ ಜನರಿಂದ
ಭಾರೀ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದೆ.

ತಮ್ಮ ನೆಚ್ಚಿನ ಬಾಲಿವುಡ್ ಹಾಡುಗಳ ನಿರೂಪಣೆಯೊಂದಿಗೆ ಎಲ್ಲರನ್ನೂ ಆಕರ್ಷಿಸಿದ ಸಾಂಜ್ ದಿ ಬ್ಯಾಂಡ್ನ ಭಾವಪೂರ್ಣ ಮಧುರ ಸಂಗೀತವನ್ನು ಆನಂದಿಸುತ್ತಿರುವ ಬೆಳಗಾವಿಯ ಆಹಾರ ಪ್ರೇಮಿಗಳು ವಿವಿಧ ರುಚಿಕರವಾದ ಭಕ್ಷ್ಯಗಳನ್ನು ಸವಿದು ಆನಂದಿಸುತ್ತಿದ್ದಾರೆ.
ಈ ಅನ್ನೋತ್ಸವದ ಸಮಯವು ಪ್ರತಿದಿನ ಸಂಜೆ 5 ರಿಂದ ರಾತ್ರಿ 10 ರವರೆಗೆ ಮುಂದುವರಿಯುತ್ತದೆ, ಬರುವ ಸಂಕ್ರಾಂತಿ ಹಬ್ಬ ಅಂದರೆ ಜನವರಿ 14 ರವರೆಗೆ ಈ ಅನ್ನೋತ್ಸವ ನಡೆಯುತ್ತಿದೆ..

ವಿಶೇಷ ಆಹಾರ, ಸಂಗೀತ ಮತ್ತು ವಿನೋದದ ಈ ಆಚರಣೆಯನ್ನು ತಪ್ಪಿಸಿಕೊಳ್ಳಬೇಡಿ! ನಮ್ಮೊಂದಿಗೆ ಸೇರಿ ಮತ್ತು ನಿಮ್ಮ ಸಂಜೆಯನ್ನು ಮರೆಯಲಾಗದಂತೆ ಮಾಡಿ! ಎಂದು ರೋಟರಿ ಸಂಸ್ಥೆಯ ಸದಸ್ಯರು ಮನವಿ ಮಾಡಿಕೊಂಡಿದ್ದಾರೆ..
ವರದಿ ಪ್ರಕಾಶ್ ಬಸಪ್ಪ ಕುರಗುಂದ..