ಬೆಳಗಾವಿಯಲ್ಲಿ ಅರ್ಥಪೂರ್ಣವಾಗಿ ಜರುಗಿದ ಸಂವಿಧಾನ ದಿನಾಚರಣೆ 2025ರ ಕಾರ್ಯಕ್ರಮ..
ಸಂವಿಧಾನದ ಅರಿವು ಪ್ರತಿಯೊಬ್ಬರಲ್ಲಿ ಜಾಗೃತವಾಗಲು ಇಂತಹ ಕಾರ್ಯಕ್ರಮಗಳ ಆಯೋಜನೆ..
ರಾಮನಗೌಡ ಕನ್ನೊಳ್ಳಿ, ಜಂಟಿ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ..
ಬೆಳಗಾವಿ : ನಗರದಲ್ಲಿ ಸಂವಿಧಾನ ರಚನಾ ದಿನಾಚರಣೆಯನ್ನು ಅತೀ ಅರ್ಥಪೂರ್ಣವಾಗಿ ಆಚರಣೆ ಮಾಡಿದ್ದು, ದೇಶದ ಪ್ರತಿ ವ್ಯಕ್ತಿಗೂ ಸಂವಿಧಾನದ ಅರಿವು ಮೂಡಿಸಲು ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಇಲಾಖೆ ಮಾಡುತ್ತಿದ್ದು, ಬೇರೆ ಇಲಾಖೆಗಳ ಸಹಕಾರದಿಂದ ಅದು ಸಾಕಾರಗೊಳ್ಳುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ರಾಮನಗೌಡ ಕನ್ನೊಳ್ಳಿ ಹೇಳಿದ್ದಾರೆ..
ವಿಶ್ವದಲ್ಲೇ ಪ್ರಖ್ಯಾತಿ ಹೊಂದಿದ ಭಾರತೀಯ ಸಂವಿಧಾನದ ಕುರಿತು ಜಾಗೃತಿ ಮೂಡಿಸುವ ವಿಶೇಷವಾದ ಜಾಥಾ ನಡೆದಿದ್ದು,
ಬುಧವಾರ ದಿನಾಂಕ 26/11/2025 ರಂದು ಬೆಳಗಾವಿಯ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಸಂವಿಧಾನ ದಿನಾಚರಣೆಯ ನಿಮಿತ್ಯ ಆಯೋಜಿಸಿದ ಜಾಗೃತಿ ಜಾಥಾಗೆ ಚಾಲನೆಯನ್ನು ನೀಡಲಾಯಿತು.

ಜಿಲ್ಲಾಡಳಿತ ಜಿಲ್ಲಾ ಪಂಚಾಯತಿ ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಜರುಗಿದ ಈ ಕಾರ್ಯಕ್ರಮಕ್ಕೆ ಮಹಾನಗರ ಪಾಲಿಕೆಯ ಉಪಾಯುಕ್ತರಾದ ಉದಯಕುಮಾರ ತಳವಾರ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ರಾಮನಗೌಡ ಕನ್ನೋಳ್ಳಿ, ದಲಿತ ಮುಖಂಡರುಗಳಾದ ಮಲ್ಲೇಶ್ ಚೌಗುಲೆ, ಬಸವರಾಜ ಚೆನೈನವರ, ಬಸವರಾಜ ಕುರಿಹುಲಿ, ಬಸವರಾಜ ರಾಯವ್ವಗೊಳ ಸೇರಿದಂತೆ ಇನ್ನುಳಿದ ಗಣ್ಯರು ಸಂವಿಧಾನ ಜಾಗೃತಿ ಜಾಥಾಗೆ ಚಾಲನೆಯನ್ನು ನೀಡಿದರು. ಈ ಜಾಗೃತಿ ಜಾಥಾವು ರಾಣಿ ಚೆನ್ನಮ್ಮ ವೃತ್ತದ ಮಾರ್ಗವಾಗಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಉದ್ಯಾನವನಕ್ಕೆ ತಲುಪಿ ವೇದಿಕೆ ಸಭೆಯಾಗಿ ಪರಿವರ್ತಿತಗೊಂಡಿತು.

ವೇದಿಕೆ ಕಾರ್ಯಕ್ರಮದಲ್ಲಿ ವಸತಿ ಶಾಲೆಯ ಕಾವೇರಿ ಎಂಬ ವಿದ್ಯಾರ್ಥಿನಿ ಮಾತನಾಡಿ, ಮತದಾನವೆಂದರೇ ರಾಜಕೀಯದಲ್ಲಿ ಭಾಗಿಯಾಗುವೆಂದು ಅರ್ಥ, ಪ್ರಜಾಪ್ರಭುತ್ವವೆಂದರೆ ಪ್ರತಿನಿಧಿಗಳು ಬಲಗೊಳ್ಳುವುದಲ್ಲ, ಪ್ರಜೆಗಳು ಬಲಗೊಳ್ಳುವ ಎಚ್ಚರ ಹಾಗೂ ಅರಿವು ಇರಬೇಕು. ಮತದಾನವೆಂಬ ಶಬ್ದದಲ್ಲೇ ಅದರ ಅರ್ಥವಿದೆ, ದಾನ ಇದು ಯಾವುದೇ ಪ್ರತಿ ಫಲಾಪೇಕ್ಷೆಯಿಲ್ಲದೇ, ಯೋಗ್ಯ ವ್ಯಕ್ತಿಗೆ ನೀಡುವುದು ಎಂದರ್ಥ ಎಂದರು.

ಇನ್ನೋರ್ವ ವಿದ್ಯಾರ್ಥಿನಿ ಮಾತನಾಡಿ, ಭಾರತ ವಿವಿಧತೆಯಲ್ಲಿ ಏಕತೆಯನ್ನು ತೋರ್ಪಡಿಸುವ ದೇಶ. ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಅತ್ಯಂತ ಮಹತ್ವದ ಸ್ಥಾನ ಪಡೆದುಕೊಂಡಿದೆ. ಮತದಾನ ಮತ್ತು ಚುನಾವಣೆ ಒಂದೇ ನಾಣ್ಯದ ಎರಡು ಮುಖಗಳು, ನಾವು ನಮ್ಮ ಮತವನ್ನು ಕೆಲ ಆಮಿಷಕ್ಕೆ ಒಳಗಾಗಿ ಮಾರಾಟ ಮಾಡಿಕೊಳ್ಳಬಾರದು, ಮೊದಲು ರಾಜರು ತಮ್ಮ ತಾಯಿಯ ಗರ್ಭದಿಂದ ಜನಿಸುತ್ತಿದ್ದರು ಆದರೆ ಈಗ ಮತದಾರನ ಮತದಿಂದ ದೇಶ ಆಳುವ ರಾಜರು ಜನಿಸುತ್ತಿದ್ದಾರೆ ಎಂದರು.

ಸಂವಿಧಾನ ರಚನಾ ದಿನಾಚರಣೆಯ ಈ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ರಾಮನಗೌಡ ಕನ್ನೊಳ್ಳಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಧಿಕಾರಿ ಬಸವರಾಜ್ ಕುರಿಹುಲಿ, ಹಿಂದುಳಿದ ವರ್ಗಗಳ ಇಲಾಖೆಯ ಉಪನಿರ್ದೇಶಕರಾದ ಹರ್ಷ, ವಿಕಲಚೇತನ ಇಲಾಖೆಯ ಉಪನಿರ್ದೇಶಕರಾದ ನಾಮದೇವ ಬಿಲಕರ, ಪಾಲಿಕೆಯ ಉಪ ಆಯುಕ್ತರಾದ ಉದಯಕುಮಾರ ತಳವಾರ, ಅಂಬೇಡ್ಕರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು, ವಾಲ್ಮೀಕಿ ನಿಗಮದ, ಆದಿ ಜಾಭವ ನಿಗಮದ ಜಿಲ್ಲಾ ವ್ಯವಸ್ಥಾಪಕರು, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು, ಕಾರ್ಯಕ್ರಮದ ಉಪನ್ಯಾಸಕರಾದ ಬಿ ಎಸ್ ನಾಡಕರ್ಣಿ, ಸಮುದಾಯದ ಮುಖಂಡರಾದ ಮಲ್ಲೇಶ್ ಚೌಗುಲೆ, ಮಹಾದೇವ ತಳವಾರ, ಮಹೇಶ್ ಸಿಗಿಹಳ್ಳಿ, ದುರ್ಗೇಶ್ ಮೇತ್ರಿ, ಬಾಬು ಪೂಜಾರಿ, ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು, ವಸತಿ ಶಾಲೆಗಳ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು..
ವರದಿ ಪ್ರಕಾಶ ಬಿ ಕುರಗುಂದ..