ಬೆಳಗಾವಿಯಲ್ಲಿ ಆಗಸ್ಟ್ 18ಕ್ಕೆ “ಬೆಳಗಾವಿ ರನ್ 2024” ರಾಷ್ಟ್ರಮಟ್ಟದ ಮ್ಯಾರಥಾನ್..
ಉತ್ತಮ ಆರೋಗ್ಯದ ಸ್ಫೂರ್ತಿಗಾಗಿ ಓಟದ ಆಟ..
ಅಪ್ಟೇಕರ ಸ್ಪೋರ್ಟ್ಸ್ ಫೌಂಡೇಶನ್ ವತಿಯಿಂದ “ಬೆಳಗಾವಿ ರನ್ 2024” 9ಆಯೋಜನೆ..
“ಬೆಳಗಾವಿ ರನ್ 2024″ಕ್ಕೆ ಸಾಥ್ ನೀಡಿದ ಖ್ಯಾತ ವೈದ್ಯ ಡಾ ರವಿ ಪಾಟೀಲ..
ಬೆಳಗಾವಿ : ದೇಶದ ಸ್ವಾತಂತ್ರ್ಯ ದಿನದ ಪ್ರಯುಕ್ತ, ದಿನಾಂಕ 18/08/2024,ರಂದು ಬೆಳಗಾವಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ 6 ಗಂಟೆಯಿಂದ, “ಬೆಳಗಾವಿ ರನ್ 2024” ಓಟ (ಮ್ಯಾರಥಾನ್) ನಡೆಯಲಿದ್ದು ಬೆಳಗಾವಿಯ ಎಲ್ಲಾ ವಿಧ್ಯಾರ್ಥಿಗಳು ಹಾಗೂ ಸಾರ್ವಜನಿಕರು ಈ ಓಟದ ಆಟದಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಬೇಕು ಎಂದು ನಗರದ ವಿಜಯಾ ಆಸ್ಪತ್ರೆಯ ಖ್ಯಾತ ವೈದ್ಯರಾದ ಡಾ ರವಿ ಪಾಟೀಲ ಅವರು ಹೇಳಿದ್ದಾರೆ..
ಸೋಮವಾರ ದಿನಾಂಕ 29/07/2024ರಂದು, ನಗರದ ವಿಜಯಾ ಆಸ್ಪತ್ರೆಯಲ್ಲಿ (votc) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಳಗಾವಿಯ ಅಪ್ಟೇಕರ್ ಸ್ಪೋರ್ಟ್ಸ್ ಫೌಂಡೇಶನ್ ವತಿಯಿಂದ ನಡೆಯುತ್ತಿರುವ ಈ “ಬೆಳಗಾವಿ ರನ್ 2024″ರ ಮ್ಯಾರಥಾನ್ ಜನರಿಗೆ ತುಂಬಾ ಅನುಕೂಲ ಆಗಿದ್ದು, 3, 5, ಹಾಗೂ 10 ಕಿಮೀ ಗಳ (ಓಟ) ಮ್ಯಾರಥಾನ್ ಇದ್ದು, ಬೆಳಗಾವಿಗರು ಇದರ ಸದುಪಯೋಗ ಪಡೆಯಬೇಕು ಎಂದರು..

ಆಸ್ಪತ್ರೆಗಳಲ್ಲಿ ಒಂದು ಹೃದಯ ತಪಾಸಣೆ ಮಾಡ್ಕೊಳ್ಳಲು ಎರಡರಿಂದ ಮೂರು ಸಾವಿರ ಸುರಿಯುವ ಇಂತಹ ಕಾಲಮಾನದಲ್ಲಿ ನಾವು ಆರೋಗ್ಯವಾಗಿ, ಸದೃಢವಾಗಿ ಇರಬೇಕೆಂದರೆ ಇಂತಹ ಕಾರ್ಯಕ್ರಮದಲ್ಲಿ ನಾವು ಭಾಗಿಯಾಗವುದು ತುಂಬಾ ಅವಶ್ಯ, ಒಂದಿಷ್ಟು ವಯೋಮಾನದವರು ಒಂದಿಷ್ಟು ಕಿಮೀ ಓಡಿದರೆ ಅಥವಾ ನಡೆದರೆ ಅಂತವರು ಯಾವುದೇ ವೈದ್ಯರ ಬಳಿ ಹೋಗುವ ಅವಶ್ಯಕತೆಯೇ ಬರುವದಿಲ್ಲ ಎಂದರು..
ಬೆಳಗಾವಿ ನಗರದಲ್ಲಿ ಮ್ಯಾರಥಾನಗಳು ಆಗುತ್ತಿರುವುದು ಸ್ವಾಗತಾರ್ಹ, ಪ್ರತಿ ವರ್ಷ ಕನಿಷ್ಠ ನಾಲ್ಕು ಮ್ಯಾರಥಾನ್ ಆದರೂ ಆಗಬೇಕು, ಓಡಾಡಿ, ವ್ಯಾಯಾಮ ಮಾಡಿ, ಆ ಮೂಲಕ ನಗರದ ಜನರ ಆರೋಗ್ಯ ಸುಸ್ಥಿತಿಯಲ್ಲಿರುತ್ತದೆ ಎಂದರು, ಇಂತಹ ಜನಪರ ಕಾರ್ಯಕ್ರಮ ಆಯೋಜಿಸುತ್ತಿರುವ ಅಪ್ಟೇಕರ ಸ್ಪೋರ್ಟ್ಸ್ ಅವರಿಗೆ ತುಂಬಾ ಧನ್ಯವಾದಗಳು, ಈ ರೀತಿಯ ಕಾರ್ಯಕ್ರಮಕ್ಕೂ ನಮ್ಮ ಸಹಕಾರ ಸದಾ ಇರುತ್ತದೆ, ಮುಂದೆಯೂ ಅವರ ಫೌಂಡೇಶನ್ ವತಿಯಿಂದ ಇಂತಹ ಆರೋಗ್ಯ ವೃದ್ಧಿಸುವ ಕಾರ್ಯಕ್ರಮ ಜರುಗಲಿ ಎಂದರು..
ಬೆಳಗಾವಿಯ ಶಾಲಾ ಕಾಲೇಜು ವಿಧ್ಯಾರ್ಥಿಗಳು, ಯುವಕ ಯುವತಿಯರು, ಸಾರ್ವಜನಿಕರು ಎಲ್ಲರೂ ಭಾಗಿಯಾಗಿ ಈ ಮ್ಯಾರಥಾನ್ ಅನ್ನು ಯಶಸ್ವಿಗೊಳಿಸಿ ಎಂದರು.

ಇನ್ನು ಅಪ್ಟೆಕರ ಸ್ಪೋರ್ಟ್ಸ್ ಮುಖ್ಯಸ್ಥರಾದ ಸುನೀಲ ಅಪ್ಟೇಕರ ಮಾತನಾಡಿ, ಇದೊಂದು ರಾಷ್ಟ್ರೀಯ ಮಟ್ಟದ ಮ್ಯಾರಥಾನ್ ಸ್ಪರ್ದೆ ರೀತಿ ನಡೆಯುತ್ತಿದ್ದು, ಬೇರೆಬೇರೆ ರಾಜ್ಯದ ಸ್ಪರ್ಧಿಗಳು ಭಾಗಿಯಾಗುವರು, 30 ವಯಸ್ಸಿನವರಿಗೆ, 31 ರಿಂದ 45 ವಯಸ್ಸಿನ, ಹಾಗೂ 45 ನಂತರ ವಯೋಮಾನದ ಸ್ಪರ್ಧೆ ಎಂದು ಮೂರು ವಿಭಾಗ ಮಾಡಲಾಗಿದೆ, ಭಾಗಿಯಾಗುವ ಎಲ್ಲರಿಗೂ ಉತ್ತಮ ಗುಣಮಟ್ಟದ ಟಿ ಶರ್ಟ್, ಉಪಹಾರ, ಗ್ಲೂಕೋಸ್, ವೈದ್ಯಕೀಯ ಸೇವೆ, ಎಲ್ಲವೂ ಇದ್ದಿದ್ದು, ರನ್ ಪೂರ್ಣಗೊಳಿಸುವ ಪ್ರತಿಯೊಬ್ಬರನ್ನೂ ಚಾಂಪಿಯನ್ ಅಂತಾ ಘೋಷಣೆ ಮಾಡಿ, ಉತ್ತಮವಾದ ಮೆಡಲಗಳನ್ನು ನೀಡಲಾಗುವದು.
ಸುಮಾರು ಒಂದೂವರೆ ಲಕ್ಷಗಳ ವರೆಗಿನ ನಗದು ಬಹುಮಾನಗಳಿದ್ದು, ಆಶ್ಚರ್ಯಕಾರಕ ನಗದು ಬಹುಮಾನಗಳನ್ನೂ ಕೂಡಾ ಇಡಲಾಗಿದ್ದು, ಎಂದ ಅವರು ಡಾ ರವಿ ಪಾಟೀಲ್ ಸರ ಅಂತವರ ಸಹಕಾರದಿಂದ ಇಂದು ನಮ್ಮ ಸಂಸ್ಥೆ ಆರೋಗ್ಯಕರ ಬೆಳಗಾವಿಗಾಗಿ ಇಂತಹ ಕಾರ್ಯಕ್ರಮ ಮಾಡುತ್ತಿರುವದು ಸಂತಸ ತಂದಿದೆ ಎಂದಿದ್ದಾರೆ..
ಇನ್ನು 15 ದಿನಗಳ ವರೆಗೆ ನೋಂದಣಿ ಮಾಡಿಕೊಳ್ಳುವ ಸಮಯವಿದ್ದು, ಸಾರ್ವಜನಿಕರು ನೋಂದಣಿಯನ್ನು www.runindia.in ಈ ವೆಬ್ಸೈಟ್ ಅಲ್ಲಿ ನೋಂದಣಿ ಮಾಡಿಕೊಳ್ಳಬಹುದು..
ವರದಿ ಪ್ರಕಾಶ ಬಸಪ್ಪ ಕುರಗುಂದ..