ಬೆಳಗಾವಿಯಲ್ಲಿ ಕಾಂಗ್ರೆಸ್ಸಿನ ನೋಟು, ಬಿಜೆಪಿಗೆ ವೋಟು..
ಬೆಳಗಾವಿಯ ಚತುರ, ಚಾಣಾಕ್ಷ, ಕ್ರಿಯಾಶೀಲ ಶಾಸಕರ ನುಡಿ..
ಬೆಳಗಾವಿ : ಸದ್ಯ 2024ರ ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ನಾ ಮುಂದು, ತಾ ಮುಂದು ಎಂದು ಮತದಾರರನ್ನು ಸೆಳೆಯಲು ಹರಸಾಹಸ ಮಾಡುತ್ತಿದ್ದು, ಇದರಲ್ಲಿ ಕಾಂಗ್ರೆಸ್ ಪಕ್ಷವು ಒಂದು ಹೆಜ್ಜೆ ಮುಂದೆ ಹೋಗಿ, ಮತದಾರರಿಗೆ ಹಣದ ಆಮಿಷ ಒಡ್ಡುತ್ತಿರುವ ಕುರಿತಾಗಿ, ಬೆಳಗಾವಿಯ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಭಯ್ ಪಾಟೀಲ್ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿ ಕಾರಿದ್ದಾರೆ..
ವಡಗಾಂವ್ ಹಾಗೂ ಖಾಸಭಾಗ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಹೃದಯ ಭಾಗ ಇದ್ದಂತೆ, ಇಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮನೆಮನೆಗೆ ತೆರಳಿ ಹಣದ ಆಮಿಷ ವಡ್ಡಿ, ಮತದಾರರನ್ನು ಸೆಳೆಯುವ ಅಡ್ಡ ಮಾರ್ಗ ಹಿಡಿದಿದ್ದು, ಅದು ಎಂದಿಗೂ ನಡೆಯುವುದಿಲ್ಲ,
ಏಕೆಂದರೆ ಬೆಳಗಾವಿ ದಕ್ಷಿಣ ಮತದಾರರು ತಮ್ಮನ್ನು ಖರೀದಿ ಮಾಡಲು ಬಂದವರನ್ನೇ, ಕೊಂಡುಕೊಳ್ಳುವ ಸಾಮರ್ಥ್ಯವುಳ್ಳವರು, ಮೊನ್ನೆ ಕೆಲ ಯುವಕ ಸಂಘಕ್ಕೆ ಹಣ ನೀಡಲು ಬಂದಾಗ ಕಾಂಗ್ರೆಸ್ಸಿನ ಹಣವನ್ನು ಪಡೆಯದೇ, ರಾಮ ಮಂದಿರದ ಉದ್ಘಾಟನಾ ಆಹ್ವಾನ ಏಕೆ ತಿರಸ್ಕಾರ ಮಾಡಿದಿರಿ? ಅದನ್ನು ಮೊದಲು ಹೇಳಿ ಎಂಬ ಪ್ರಶ್ನೆ ಕೇಳಿ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದರು.

ಶಾಸಕರ ಮುಂದೆ ಕೆಲ ಕಾರ್ಯಕರ್ತರು ಮಾತನಾಡುತ್ತಾ, “ಕಾಂಗ್ರೆಸ್ ಅವರ ನೋಟು, ಬಿಜೆಪಿಗೆ ವೋಟು” ಎಂಬ ಮಾತುಗಳನ್ನು ಆಡುತ್ತಿದ್ದಾರೆ ಎಂದು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದು, ಕಾಂಗ್ರೆಸ್ಸಿನವರು ಏನೇ ಲಾಭಿ ಮಾಡಿದರು, ನಮ್ಮ ಕ್ಷೇತ್ರದ ಜನರ ಮತ ಮಾತ್ರ ಬಿಜೆಪಿಗೆ, ಅದು ಈ ಸಲ ಒಂದು ಲಕ್ಷ ಲೀಡ್ ನಮ್ಮ ಕ್ಷೇತ್ರದ ಜನ ಬಿಜೆಪಿಗೆ ನೀಡುತ್ತಾರೆ ಎಂದು ಭರವಸೆ ನೀಡಿದ್ದಾರೆ..
ವರದಿ ಪ್ರಕಾಶ್ ಕುರಗುಂದ..